ಸುದ್ದಿಗಳು

ತುಂಡು ಬಟ್ಟೆ ತೊಟ್ಟ ರಾಧಿಕಾ ಕುಮಾರಸ್ವಾಮಿ

ರಾಧಿಕಾ ಫೋಟೋಗೆ ಫಿದಾ ಆದ ಅಭಿಮಾನಿಗಳು

ಬೆಂಗಳೂರು, ಸೆ.11: ರಾಧಿಕಾ ಕುಮಾರಸ್ವಾಮಿ ಇಂದಿಗೂ ಗ್ಲಾಮರ್ ಆಗಿ ಕಾಣುವ ನಟಿ. ಈ ನಟಿಯ ಫೋಟೋವೊಂದು ಇದೀಗ ಮತ್ತೊಮ್ಮೆ ವೈರಲ್ ಆಗಿದೆ.

ಇತ್ತೀಚೆಗಷ್ಟೆ ಮೈತುಂಬಾ ಒಡವೆ ಹಾಕಿ, ಥೇಟ್ ಗೌರಮ್ಮ ತರ ಕಂಡಿದ್ದ ರಾಧಿಕಾ ಕುಮಾರಸ್ವಾಮಿ ಸದ್ಯ ತುಂಡುಡುಗೆಯೊಂದನ್ನು ತೊಟ್ಟು ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದು, ಬಟ್ಟೆಯ ಒಂದು ಫೋಟೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ಈ ಉಡುಗೆಯಲ್ಲಿ ರಾಧಿಕಾ ಕೂಡ ಅಷ್ಟೆ ಗ್ಲಾಮರ್ ಆಗಿ ಕಾಣಿಸಿದ್ದಾರೆ. ಕಪ್ಪು ಬಣ್ಣದ ತುಂಡುಬಟ್ಟೆ ಧರಿಸಿರುವ  ರಾಧಿಕಾ ಫೋಟೋಗೆ ಸದ್ಯ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇಂದಿಗೂ ರಾಧಿಕಾ ಅವರ ಗ್ಲಾಮರ್ ಗೇನು ಬರ ಇಲ್ಲ. ಯಾಕಂದರೆ ಆಗಿನ ಕಾಲದಿಂದಲೂ ಸಾಕಷ್ಟು ಹೆಸರು ಮಾಡಿರುವ ಈ ನಟಿ. ಇಂದಿಗೂ ಸಿನಿಮಾ ರಂಗದಲ್ಲಿ ತಮ್ಮದೇ ಆದ ಹೆಸರು ಪಡೆದಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳ ಮೂಲಕ ಜನಮನ ಗೆದ್ದಿರುವ ಈ ನಟಿ, ಸಿನಿಮಾಗೆ ಕೊಂಚ ಬ್ರೇಕ್ ಕೊಟ್ಟು ನಂತರ ಮತ್ತೆ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಇದೀಗ ಸಿನಿಮಾ ಚಿತ್ರೀಕರಣ ಸ್ಥಳದಲ್ಲಿ ತೆಗೆದಿರುವ  ಈ ಫೋಟೋ ಸದ್ಯ ಎಲ್ಲೆಡೆ ವೈರಲ್ ಆಗಿದೆ. ರಾಧಿಕ ಗ್ಲಾಮರ್, ಅವರ ಫೇಸ್ ಚಾರ್ಮ್ ಇಂದಿನ ಯುವ ನಟಿಯರು ನಾಚುವಂತಿರೋದಂತೂ ಸತ್ಯ.

Tags