ಸುದ್ದಿಗಳು

‘ಗೂಳಿ ಹಟ್ಟಿ’ ಯಿಂದ ಹೊಸ ಸಿನಿಮಾ ಕಡೆಗೆ “ರಾಘವ ನಾಗ್ “ ಪಯಣ

ಹೊಸ ಪ್ರಯೋಗಗಳತ್ತ ಕನ್ನಡ ಸಿನಿಮಾ

ಈಗಾಗಲೇ ಸಿನಿಮಾರಂಗಕ್ಕೆ ಪ್ರವೇಶ ಮಾಡಿ  ಸತತ ಹತ್ತು ವರ್ಷಗಳಿಂದ ಸಿಕ್ಕ ಅವಕಾಶಗಳಲ್ಲೇ  ತನ್ನ ಪ್ರತಿಭೆಯಿಂದ ಮೆಚ್ಚುಗೆ ಗಳಿಸುತ್ತಾ ಬಂದಿರುವ ಯುವ ನಟ ರಾಘವ್ ನಾಗ್ ಈ ಚಿತ್ರದ ನಾಯಕ ನಟರಾಗಿದ್ದಾರೆ.

ಬೆಂಗಳೂರು, ಆ.30: ಕೆಲವು ವರ್ಷಗಳ ಹಿಂದೆ ತೆರೆಕಂಡಿದ್ದ ಗೂಳಿಹಟ್ಟಿ, ಡಯಾನ ಹೌಸ್, ಟೈಟ್ಲು ಬೇಕಾ? ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ್ದ ರಾಘವ್ ನಾಗ್ ಈಗ ಹೆಸರಿಡದ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಕನ್ನಡ ಚಿತ್ರರಂಗ ಹಳಬರ ಜೊತೆ ಹೊಸ ಹೊಸ ಚಿಂತನೆಗಳುಳ್ಳ ನಿರ್ದೇಶಕರು, ನಿರ್ಮಾಪಕರು ಸೇರಿಕೊಂಡು ಒಳ್ಳೊಳ್ಳೆಯ ಸಿನಿಮಾಗಳನ್ನು ನೀಡುತ್ತಿರುವುದು  ಚಿತ್ರರಂಗದ ಮಟ್ಟಿಗೆ ಉತ್ತಮ ಬೆಳವಣಿಗೆ ಎಂದೇ ಹೇಳಬಹುದು.

ಇನ್ನೂ ಈ ಚಿತ್ರಕ್ಕೇ ಹೆಸರೇ ಇಟ್ಟಿಲ್ವಂತೆ!!!

ಅದೇ ಸಾಲಿಗೆ ಈಗ ಮತ್ತೊಂದು ಸಿನಿಮಾ ಸೆಟ್ಟೇರಿದ್ದು ಶೂಟಿಂಗ್ ನಡೆಯುತ್ತಿದೆ. ಉದ್ಯಮಿ ಮಂಜುನಾಥ್ ಬಂಡವಾಳ ಹೂಡುತ್ತಿರುವ ಇನ್ನೂ  ಹೆಸರಿಡದ, ಕಮರ್ಷಿಯಲ್ ಅಂಶಗಳನ್ನೊಳಗೊಂಡ  ಸಿನಿಮಾವನ್ನು ಪ್ರಕಾಶ್ ಹೆಬ್ಬಾಳ   ಎಂಬ ಯುವ ನಿರ್ದೇಶಕ ನಿರ್ದೇಶನ ಮಾಡುತ್ತಿದ್ದಾರೆ.  ತಮ್ಮ ಮೊದಲ ಸಿನಿಮಾಕ್ಕೆ ಸಮರ್ಪಕ ತಯಾರಿಗಳೊಂದಿಗೆ ಹೆಜ್ಜೆ ಇಟ್ಟಿದ್ದು ಇದಕ್ಕೂ ಮೊದಲು ನಿರ್ದೇಶಕ ದಯಾಳ್ ಪದ್ಮನಾಭನ್ ಅವರ ಒಡನಾಟದಲ್ಲಿ  ‘ಆಕ್ಟರ್’, ‘ಹಗ್ಗದ ಕೊನೆ ‘ಮುಂತಾದ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ  ಅನುಭವದ ಬುತ್ತಿ ಅವರ  ಒಡಲಲ್ಲಿದೆ.ಸೆಲೆಬ್ರಿಟಿಗಳಿಂದ  ಚಿತ್ರದ  ಶೀರ್ಷಿಕೆಯ  ಅನಾವರಣ

ಇನ್ನು ತಾರಾಗಣದ ವಿಷಯಕ್ಕೆ ಬಂದರೆ ಅಲ್ಲೂ ಪ್ರತಿಭಾವಂತರ ದಂಡೇ ಇದೆ. ಈಗಾಗಲೇ ಸಿನಿಮಾರಂಗಕ್ಕೆ ಪ್ರವೇಶ ಮಾಡಿ  ಸತತ ಹತ್ತು ವರ್ಷಗಳಿಂದ ಸಿಕ್ಕ ಅವಕಾಶಗಳಲ್ಲೇ  ತನ್ನ ಪ್ರತಿಭೆಯಿಂದ ಮೆಚ್ಚುಗೆ ಗಳಿಸುತ್ತಾ ಬಂದಿರುವ ಯುವ ನಟ ರಾಘವ್ ನಾಗ್ ಈ ಚಿತ್ರದ ನಾಯಕ ನಟರಾಗಿದ್ದಾರೆ. ‘ಗೂಳಿಹಟ್ಟಿ’, ‘ಡಯಾನ ಹೌಸ್’, ‘ಟೈಟ್ಲು ಬೇಕಾ ?’ ಸಿನಿಮಾಗಳಲ್ಲಿ ನಾಯಕನಾಗಿ ಹೆಸರು ಗಳಿಸಿರುವ ಈ ಯುವ ಪ್ರತಿಭೆ ಶೂಟಿಂಗ್ ಹಂತದಲ್ಲಿರುವ ‘ಗರ್ನಲ್’ ,’ಚಿಲ್ಲಂ’ , ‘ಪ್ರೇಮಾಂತರಂಗ’ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.ಪ್ರತಿಭೆ ಇಲ್ಲದಿದ್ದರೆ ಚಿತ್ರರಂಗದಲ್ಲಿ ನಿಲ್ಲುವುದು ತುಂಬಾ ಕಷ್ಟ. ಸ್ಟಾರ್ ನಟರ ಮಕ್ಕಳೇ  ಗೆಲುವಿಗಾಗಿ , ನೆಲೆ ನಿಲ್ಲಲು  ಹರಸಾಹಸ ಪಡುತ್ತಿರುವುದನ್ನು ನೋಡುತ್ತಿದ್ದೇವೆ.  ಇಂತಹ ಸಂದರ್ಭದಲ್ಲಿ ರಾಘವ್ ನಾಗ್ ಇಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಅಂದರೆ ಅದು ಅವರಲ್ಲಿರುವ ಕಲೆಯ ಹಸಿವು, ಪ್ರತಿಭೆಗೆ ಸಿಕ್ಕ ಗೌರವ ಅಂತಾನೇ ಅರ್ಥ.

ಇನ್ನೂ ಕೆಲವೇ ದಿನಗಳಲ್ಲಿ ಸೆಲೆಬ್ರಿಟಿಗಳಿಂದ ವಿಶೇಷವಾಗಿ ಚಿತ್ರದ ಶೀರ್ಷಿಕೆ ಹಾಗೂ ಪ್ರಮುಖ ಪಾತ್ರಧಾರಿಗಳ ಹೆಸರುಗಳನ್ನು ಅನಾವರಣಗೊಳಿಸಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.  ಒಳ್ಳೆಯ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕ ಯಾವತ್ತೂ ಕೈಬಿಡುವುದಿಲ್ಲ  ಆದ್ದರಿಂದ ನಿಮ್ಮ ತಂಡದಿಂದ ಉತ್ತಮ ಚಿತ್ರ ಮೂಡಿಬರಲಿ. ನಿಮ್ಮ ಇಡೀ ತಂಡಕ್ಕೆ ನಮ್ಮ ಬಾಲ್ಕಾನಿ ವತಿಯಿಂದ ಶುಭಾಷಯಗಳು.

Tags