ಸುದ್ದಿಗಳು

ಅಭಿಮಾನಿಗಳೊಂದಿಗೆ ರಾಘಣ್ಣ, ಪುನೀತ್ ಭರ್ಜರಿ ಡಾನ್ಸ್

ಬೆಂಗಳೂರು, ಸೆ.14: ಸದಾಶಿವನಗರ ಮನೆ ಮುಂದೆ ರಾಘಣ್ಣ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಜೊತೆಗೆ ಟಪ್ಪಾಂಗುಚಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಗಣೇಶ ಹಬ್ಬದಲ್ಲಿ ಹೆಜ್ಜೆ

ಸದ್ಯ ನಿನ್ನೆ ಗಣೇಶನ ಆಗಮನ ಇಡೀ ರಾಜ್ಯದಲ್ಲಿ ಆಗಿದೆ. ಸ್ಟಾರ್ ನಟರು ಕೂಡ ಹಬ್ಬವನ್ನು ಜೋರಾಗಿಯೇ ಆಚರಣೆ ಮಾಡಿದ್ದಾರೆ. ಈಗಾಗಲೇ ಸ್ಟಾರ್ ಮನೆಗಳಲ್ಲಿ ಹಾಗೂ ಅವರ ಮನೆ ಏರಿಯಾಗಳಲ್ಲಿ ಗಣೇಶ ರಾರಾಜಿಸುತ್ತಿದ್ದಾರೆ. ಗಣೇಶ ಹಬ್ಬ ಅಂದರೆ ಒಂಥರಾ ಕ್ರೇಜ್. ಇದೀಗ ಅಪ್ಪು ಹಾಗೂ ರಾಘಣ್ಣ ಅಭಿಮಾನಿಗಳ ಜೊತೆಗೆ ಗಣೇಶನ ಮುಂದೆ ಸ್ಟೆಪ್ ಹಾಕಿದ್ದಾರೆ.

ಅಭಿಮಾನಿಗಳ ಜೊತೆ ಡಾನ್ಸ್

ಹೌದು, ಸದಾಶಿವನಗರದ ಮನೆ ಮುಂದೆ ಪುನೀತ್ ರಾಜ್‌ಕುಮಾರ್ ಗಣೇಶನನ್ನು  ಇಟ್ಟು ಪೂಜೆ ಮಾಡಿದ್ದಾರೆ. ಈ ವೇಳೆ ಅಭಿಮಾನಿಗಳ ಜೊತೆಗೂಡಿ ಟಪ್ಪಾಂಗುಚಿ ಹಾಡಿಗೆ ಪುನೀತ್ ರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಸ್ಟೆಪ್ ಹಾಕಿದ್ದಾರೆ. ಪುನೀತ್ ರಾಘಣ್ಣ ಸ್ಟೆಪ್ ಹಾಕುತ್ತಿದ್ದಂತೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇಡೀ ಅಭಿಮಾನಿಗಳು ಅಪ್ಪು ಹಾಗೂ ರಾಘಣ್ಣ ಜೊತೆಗೆ ಟಪ್ಪಾಂಗುಚಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

 

Tags