ಸುದ್ದಿಗಳು

‘ಸೆಕ್ಷನ್ 377’ ಬಗ್ಗೆ ಅರಿವು ಮೂಡಿಸಿದ ನಟಿ ರಾಗಿಣಿ

ರಾಗಿಣಿಯಿಂದ ಸೆಕ್ಷನ್ 377 ಪಾಠ

ಬೆಂಗಳೂರು, ಸೆ.09: ಸದ್ಯ ಸುಪ್ರೀಂ ಕೋರ್ಟ್ ಸೆಕ್ಷನ್ 377 ವಿಚಾರವಾಗಿ ಮಹತ್ವದ ತೀರ್ಪು ನೀಡಿದೆ. ಈ ವಿಚಾರವನ್ನು ಈಗಾಗಲೇ ಸಾಕಷ್ಟು ಸಿನಿಮಾ ಮಂದಿ ಒಪ್ಪಿದ್ದಾರೆ. ಇದೀಗ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಕೂಡ ಈ ವಿಚಾರಕ್ಕೆ ಸಂತಸ ವ್ಯಕ್ತಪಡಿಸುವುದರ ಜೊತೆಗೆ ಈ ಸೆಕ್ಷನ್  ಅರ್ಥವನ್ನು ಬಿಡಿಸಿ ಹೇಳಿದ್ದಾರೆ.ಸೆಕ್ಷನ್ 377 ಬಗ್ಗೆ ರಾಗಿಣಿ ಟ್ವೀಟ್

ಈಗಾಗಲೇ ಭಾರತೀಯ ಚಿತ್ರರಂಗದ ಹಲವು ನಟ – ನಟಿಯರು ಸೆಕ್ಷನ್ 377 ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಕನ್ನಡದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಕೂಡ ತೀರ್ಪಿನ ಬಗ್ಗೆ ಟ್ವೀಟ್ ಮಾಡಿದ್ದು, ‘ಪ್ರೀತಿ ಯಾರ ನಡುವೆಯಾಗಲಿ, ಅದು ನಿಜವಾದ ಪ್ರೀತಿಯಾಗಿದ್ದರೆ ಅದನ್ನು ಈ ದೇಶ ನಂಬುತ್ತದೆ ಎಂಬುವುದು ಈ ತೀರ್ಪಿನಿಂದ ಸಾಬೀತಾಗಿದೆ. ತೀರ್ಪಿನ ಬಗ್ಗೆ ಹೆಮ್ಮೆ ಇದೆ” ಎಂದಿದ್ದಾರೆ.

ಇದೀಗ ಇದಕ್ಕೆ ಪ್ರತಿಯಾಗಿ ಅಭಿಮಾನಿಯೊಬ್ಬರು  ಲೆಸ್ಬಿಯನ್ ಕಥೆ ಏನು? ಅಂತ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ರಾಗಿಣಿ ಲೆಸ್ಬಿಯನ್ ಎಲ್ಲರಿಗೂ ಅನ್ವಯವಾಗುವ ತೀರ್ಪು ಅಂತಾ ಸ್ಲೈಲ್ ಮಾಡಿದ್ದಾರೆ.

Tags