ಸುದ್ದಿಗಳು

ಟ್ವಿಟರ್ ಹಾಗೂ ಇನ್ ಸ್ಟಾಗ್ರಾಂನಿಂದ ಹೊರ ನಡೆದ ರಕ್ಷಿತ್…!

ಇನ್ ಸ್ಟಾ ಗ್ರಾಂ ಖಾತೆಯೊಂದಿಗೆ ಟ್ವಿಟರ್ ಖಾತೆಯನ್ನೂ, ಡಿ ಆ್ಯಕ್ಟಿವೇಟ್ ಮಾಡಿದ ಸಿಂಪಲ್ ಹುಡುಗ

ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲ ತಾಣಕ್ಕೆ ಗುಡ್ ಬೈ ಹೇಳಿದ್ದು, ಅಭಿಮಾನಿಗಳಿಗೆ ಅಚ್ಚರಿಯನ್ನು ತಂದಿದೆ.

ಬೆಂಗಳೂರು, ಸೆ.03: ಸಿನಿಮಾ ತಾರೆಯರು ಸಾಮಾಜಿಕ ಜಾಲತಾಣಗಳ ಮೂಲಕವೇ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಖ್ಯಾತಿ ಪಡೆಯುತ್ತಿದ್ದಾರೆ. ಫೇಸ್ ಬುಕ್, ಟ್ವಿಟರ್, ಇನ್ ಸ್ಟಾ ಗ್ರಾಂನಲ್ಲಿ ಅಪಾರ ಸಂಖ್ಯೆಯ ಫಾಲೋವರ್ಸ್ ಅನ್ನೂ ಹೊಂದಿರುತ್ತಾರೆ.

ಸಾಮಾಜಿಕ ಜಾಲ ತಾಣಕ್ಕೆ ಗುಡ್ ಬೈ

ಅಂತೆಯೇ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ತನ್ನ ಸಿನಿಮಾ ಪ್ರಚಾರಕ್ಕೆ ಸಾಮಾಜಿಕ ಜಾಲತಾಣವನ್ನು ಉತ್ತಮ ವೇದಿಕೆಯಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅಷ್ಟೇ ಅಲ್ಲದೇ ಅಭಿಮಾನಿಗಳು ಕೇಳುವ ಪ್ರಶ್ನೆಗೆ ಉತ್ತರವನ್ನೂ ನೀಡುವುದರ ಮೂಲಕ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಆದರೆ ಈಗ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲ ತಾಣಕ್ಕೆ ಗುಡ್ ಬೈ ಹೇಳಿದ್ದು, ಅಭಿಮಾನಿಗಳಿಗೆ ಅಚ್ಚರಿಯನ್ನು ತಂದಿದೆ.ಈ ವಿಚಾರವನ್ನು ರಕ್ಷಿತ್ ಭಾನುವಾರ ತನ್ನ ಇನ್ ಸ್ಟಾ ಗ್ರಾಂನಲ್ಲಿ ಬಹಿರಂಗಗೊಳಿಸಿದ್ದು, ‘ನಾನು ಸಾಮಾಜಿಕ ಜಾಲತಾಣದಿಂದ ಹೊರಗಿರಲು ಬಯಸುತ್ತಿದ್ದೇನೆ. ನೀವು ನನಗೆ  ಅಪಾರ ಪ್ರೀತಿ ತೋರಿಸಿದ್ದೀರಿ. ಅದಕ್ಕೆ ನನ್ನ ಧನ್ಯವಾದ. ಲವ್ ಯು ಆಲ್’ ಎಂದಿದ್ದಾರೆ.ರಕ್ಷಿತ್ ಶೆಟ್ಟಿ ನಡವಳಿಕೆಯಿಂದ ಅಭಿಮಾನಿಗಳಿಗೆ ಬೇಸರ

ಇದಾದ ಕೆಲವೇ ಗಂಟೆಗಳಲ್ಲಿ ಇನ್ ಸ್ಟಾ ಗ್ರಾಂ ಖಾತೆಯೊಂದಿಗೆ ಟ್ವಿಟರ್ ಖಾತೆಯನ್ನೂ ಡಿ ಆ್ಯಕ್ಟಿವೇಟ್ ಮಾಡಿದ್ದಾರೆ. ಇದಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಇನ್ನೊಂದು ವಿಷಯ ಏನೆಂದರೆ, ಸದಾ ಟ್ವಿಟರ್ ನಲ್ಲಿ ಸ್ಟೇಟಸ್ ಹಾಕುತ್ತಲೇ ಇರುವ ರಕ್ಷಿತ್ ಶೆಟ್ಟಿ ಕಳೆದ 20 ದಿನಗಳಿಂದ ಯಾವ ಪೋಸ್ಟನ್ನೂ ಮಾಡಿರಲಿಲ್ಲ. ಫೇಸ್​ಬುಕ್​ನಲ್ಲಿಯೂ ಇತ್ತೀಚೆಗೆ ಅವರು ಕಾಣಿಸಿಕೊಂಡಿರಲಿಲ್ಲ. ಇದು ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಬೇಸರ ತಂದಿದೆಯಂತೆ.

Tags