ಸುದ್ದಿಗಳು

ರಶ್ಮಿಕಾ ವಿಚಾರದಲ್ಲಿ ರಕ್ಷಿತ್ ಗೆ ಬೆನ್ನೆಲುಬಾಗಿ ನಿಂತ ಸುದೀಪ್

ಬೆಂಗಳೂರು, ಸೆ.12: ರಶ್ಮಿಕಾ-ರಕ್ಷಿತ್ ಬ್ರೇಕಪ್ ವಿಚಾರಕ್ಕೆ ನಿನ್ನೆ ತಾನೆ ರಕ್ಷಿತ್ ಶೆಟ್ಟಿ ತಮ್ಮ ನಿಲುವು ಹೇಳಿದ್ದಾರೆ. ಇವರ ಹೇಳಿಕೆಗೆ ಇದೀಗ ನಟ ಸುದೀಪ್ ಸಾಥ್ ನೀಡಿದ್ದಾರೆ

ಸದ್ಯ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಬಗ್ಗೆ ಗಾಂಧಿ ನಗರ ಅಷ್ಟೆ ಅಲ್ಲ , ಇಡೀ ಸಿನಿಮಾ ರಂಗದಲ್ಲೂ ಸುದ್ದಿಯಾಗುತ್ತಿದೆ. ಈಗಾಗಲೇ ರಕ್ಷಿತ್ ಕೂಡ ತಮ್ಮ ನಿರ್ಧಾರ ಹಾಗೂ ತಮಗನಿಸಿದ ಕೆಲವೊಂದು ಸತ್ಯಗಳನ್ನು ಅಭಿಮಾನಿಗಳಿಗೆ ಬಿಚ್ಚಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ರಕ್ಷಿತ್ ಜೊತೆ ನಟ ಕಿಚ್ಚ ಸುದೀಪ್ ಅವರು ಬೆನ್ನಿಗೆ ನಿಂತಿದ್ದಾರೆ.

ಬೆನ್ನೆಲುಬಾಗಿ ನಿಂತ ಕಿಚ್ಚ 

ಸದ್ಯ ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿಯ ಎಂಗೇಜ್‌ಮೆಂಟ್ ಮುರಿದು ಬಿದ್ದಿದೆ ಎನ್ನುವ  ಸುದ್ದಿ ಬಾರೀ ಚರ್ಚೆಯಾಗುತ್ತಿದೆ. ಈಗಾಗಲೇ ಈ ಸುದ್ದಿಗೆ ರಶ್ಮಿಕಾ ತಾಯಿ ಕೂಡ ಸ್ಪಷ್ಟನೆ ನೀಡಿದ್ದಾರೆ. ಇದು ಕೌಟುಂಬಿಕ ವಿಚಾರ ಅಂತನೂ ಹೇಳಿದ್ದಾರೆ. ಇನ್ನು ನಿನ್ನೆಯಷ್ಟೆ ನಟ ರಕ್ಷಿತ್ ಶೆಟ್ಟಿ ಕೂಡ ತಮ್ಮ ನಿಲುವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.  ಇದೀಗ ಇವರ ಹೇಳಿಕೆಗೆ ನಟ ಸುದೀಪ್ ಬೆನ್ನೆಲುಬಾಗಿ ನಿಂತಿದ್ದಾರೆ.ಇದೀಗ ಈ ಎಲ್ಲಾ ಬೆಳವಣಿಗೆಗಳನ್ನು ನೋಡಿರುವ ಕಿಚ್ಚ ತಮ್ಮ ಟ್ವಿಟ್ಟರ್ ಮೂಲಕ ರಕ್ಷಿತ್ ಗೆ ಸಪೋರ್ಟ್ ಮಾಡಿದ್ದಾರೆ. ನಿನ್ನೆಯ ರಕ್ಷಿತ್ ಸ್ಪಷ್ಟನೆ ಶ್ಲಾಘಿಸಿರೋ ಕಿಚ್ಚ, ಇದು ರಕ್ಷಿತ್ ಘನತೆ ಹಾಗೂ ಪರಿಪಕ್ವತೆ.. ಒಳ್ಳೆಯದಾಗುತ್ತೆ ಗೆಳೆಯ, ಅಂತಾ ಟ್ವಿಟ್ ಮಾಡಿದ್ದಾರೆ. ಇನ್ನು ಸೆಲಿಬ್ರಿಟಿಗಳಾದ ತಕ್ಷಣ ಎಲ್ಲವನ್ನು ಎಲ್ಲರ ಮುಂದೆ ಹೇಳಬೇಕೆಂದಿಲ್ಲ. ಎಲ್ಲರಿಗೂ ಅವರದ್ದೇ ಆದ ವೈಯಕ್ತಿಕ ಜೀವನ ಅನ್ನೋದು ಇದ್ದೇ ಇರುತ್ತೆ ಅಂತಾ ಮಾತನಾಡಿದ್ದಾರೆ.

Tags