ಸುದ್ದಿಗಳು

ರಮ್ಯಾ ವಿರುದ್ಧ ಕೇಸ್ ದಾಖಲು

ಚಿತ್ರರಂಗದ ಮೋಹಕ ತಾರೆ ನಟಿ ರಮ್ಯಾ

ಪ್ರಧಾನಿ ಮೋದಿ ವಿರುದ್ಧ ಅವಹೇಳಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ನಟಿ ರಮ್ಯಾ ವಿರುದ್ಧ ಕೇಸ್ ದಾಖಲಾಗಿದೆ.

ಬೆಂಗಳೂರು, ಸೆ.26: ನಟಿ ರಮ್ಯಾ ಸಿನಿಮಾದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಈಗಾಗಲೇ ರಾಜಕೀಯದಲ್ಲಿ ಸಂಪೂರ್ಣವಾಗಿ ಮುಳುಗಿರುವ ರಮ್ಯಾ ಸದ್ಯ ಸಾಮಾಜಿಕ ಜಾಲತಾಣದಲ್ಲೂ ಆಕ್ಟೀವ್ ಆಗಿದ್ದಾರೆ. ಬಿಜೆಪಿ ವಿರುದ್ಧ ಅನೇಕ ಪೋಸ್ಟಗಳನ್ನು ಹಾಕುವ ಮೂಲಕ ಟ್ವಿಟ್ಟಿಗರ ಸಿಟ್ಟಿಗೆ ಗುರಿಯಾಗುತ್ತಿರುವ ರಮ್ಯಾ ಸದ್ಯ ಪ್ರಧಾನಿ ಮೋದಿ ವಿಚಾರವಾಗಿ  ಕಾನೂನು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.ಉತ್ತರಪ್ರದೇಶ ಪೊಲೀಸರಿಂದ ದೂರು ದಾಖಲು

ಇತ್ತೀಚೆಗಷ್ಟೆ ರಮ್ಯಾ ಪ್ರಧಾನಿಯವರ ಮೇಣದ ಪ್ರತಿಮೆ ಜೊತೆ ಇರುವ ಪೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಈ ಫೋಸ್ಟ್‌ ನಲ್ಲಿ ಪ್ರಧಾನಿಯ ಹಣೆಯ ಮೇಲೆ ಚೋರ್ ಎಂದು ಬರೆದಿದ್ದರು. ಈ ಹಿನ್ನೆಲೆಯಲ್ಲಿ ರಮ್ಯಾ ವಿರುದ್ಧ ಇದೀಗ ಕೇಸ್ ದಾಖಲಾಗಿದೆ. ಉತ್ತರ ಪ್ರದೇಶದ ಪೊಲೀಸರು ದೇಶ ದ್ರೋಹದ ಆರೋಪದಡಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಲಖನೌ ಮೂಲದ ವಕೀಲ ಸೈಯದ್ ರಿಜ್ವಾನ್ ಅಹ್ಮದ್ ಎನ್ನುವವರು ರಮ್ಯಾ ವಿರುದ್ಧ ದೂರು ದಾಖಲಿಸಿದ್ದಾರೆ. ಇನ್ನು ದೂರುದಾರರ ದೂರಿನನ್ವಯ ಗೋಮತಿನಗರ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯ ಸೆಕ್ಷನ್ ೬೭ ಹಾಗೂ ದೇಶದ್ರೋಹ ಸೆಕ್ಷನ್ ೧೨೪ಎ ಅಡಿ ದೂರು ದಾಖಲಾಗಿದೆ.

ರಮ್ಯಾ ಮೇಲೆ ಮಾನನಷ್ಟ ಮೊಕದ್ದಮೆ

ಈ ಹಿಂದೆ ಟ್ವಿಟ್ ತೆಗೆಯುವಂತೆ ದೆಹಲಿ ಮೂಲದ ವಕೀಲ ವಿಭೋರ್ ಆನಂದ್ ಕೂಡ ರಮ್ಯಾಗೆ ಹೇಳಿದ್ದರು. ಆದರೆ ಅದನ್ನು ರಮ್ಯಾ ತೆಗೆದಿರಲಿಲ್ಲ. ಹೀಗಾಗಿ ವಕೀಲ ವಿಭೋರ್ ಆನಂದ್ ಎಂಬುವವರು ಕೂಡ ರಮ್ಯಾ ವಿರುದ್ಧ ೧೦ ಸಾವಿರ ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ. ಇನ್ನು ಯಾವುದೇ ಮಾನನಷ್ಟ ಮೊಕದ್ದಮ್ಮೆ ಹೂಡುವ ಮುನ್ನ ಕೋರ್ಟ್‌ಗೆ ಠೇವಣಿ ಕಟ್ಟಬೇಕು. ಇದೀಗ ೧೦ ಸಾವಿರ ಕೋಟಿಗೆ ಶೇ.೧ರಷ್ಟು ಹಣವನ್ನು ಕೋರ್ಟ್ ಗೆ ಕಟ್ಟಬೇಕಾಗಿದೆ. ಹಾಗಾಗಿ ಆನ್‌ಲೈನ್ ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸುತ್ತಿದ್ದಾರೆ.

ಜೈಲಿಗೆ ಹೋಗ್ತಾರಾ ರಮ್ಯಾ..?

ಒಟ್ಟಿನಲ್ಲಿ ಒಂದೇ ಒಂದು ಟ್ವಿಟ್‌ನಿಂದ ಇದೀಗ ರಮ್ಯಾ ಕಾನೂನು ಹೋರಾಟ ಮಾಡಬೇಕಾದ ಸಂಕಷ್ಟ ಎದುರಾಗಿದೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ರಮ್ಯಾಗೆ ಕೇಸ್ ದಾಖಲಾಗಿದ್ದು, ರಮ್ಯಾ ಜೈಲಿಗೆ ಹೋಗ್ತಾರಾ ಅನ್ನುವ ಅನುಮಾನಗಳು ಕಾಡತೊಡಗಿವೆ.

 

Tags