ಸುದ್ದಿಗಳು

ನೊಂದ ಕೊಡವರ ಕಣ್ಣೀರ ತೊಡೆದ ‘ಕಿರಿಕ್ ಬೆಡಗಿ’

ಕೊಡಗಿನ ನೆರೆ ಸಂತ್ರಸ್ಥರಿಗೆ ಸಾಂತ್ವನ ಹೇಳಿದ ರಶ್ಮಿಕಾ

ಕೊಡಗು ಜಿಲ್ಲೆಯ ಒಟ್ಟು 31 ಕುಟುಂಬಕ್ಕೆ ಹಣದ ಸಹಾಯ ಮಾಡಿದ್ದಾರೆ. ತಲಾ ಒಂದೊಂದು ಕುಟುಂಬಕ್ಕೆ 10 ಸಾವಿರ ಧನ ಸಹಾಯ ನೀಡಿ ನೆರವಾಗಿದ್ದಾರೆ.

ಮಡಿಕೇರಿ, ಆ.30:  ಕೊಡಗಿನಲ್ಲಿ ಭಾರೀ  ಮಳೆಯಿಂದ ಜನರೂ ನಲುಗಿ ಹೋಗಿದ್ದಾರೆ. ಈಗಾಗಲೇ ಅನೇಕರು ಕೊಡಗಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಸಿನಿಮಾ ಮಂದಿ, ಸಾರ್ವಜನಿಕರು ಹೀಗೆ ಬಹಳಷ್ಟು ಜನ, ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಒಂದೆಡೆ, ಅವರ ಮುಂದಿನ ಬದುಕಿಗಾಗಿ, ಆಸ್ತಿ-ಪಾಸ್ತಿ ಕಳೆದುಕೊಂಡವರಿಗೆ ಸೂರು ಕಲ್ಪಿಸೋ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡುತ್ತಿದ್ದರೆ, ಕೊಡಗಿನ ಈ ಹುಡುಗಿ ಈಗಾಗಲೇ ಅನೇಕ ಮಂದಿಗೆ ಸ್ವತಃ  ಹಣದ ನೆರವು ನೀಡಿ “ನಾನೆಂದೂ ನಿಮ್ಮವಳೇ” ಎಂದು ಸಾರಿದ್ದಾಳೆ.

ನಿರಾಶ್ರಿತರಿಗೆ ಸಾಂತ್ವನ ಹೇಳಿದ ರಶ್ಮಿಕಾ

ಇದೀಗ ಕರ್ನಾಟಕದ ಕ್ರಶ್ ಅಂತಲೇ ಹೆಸರುವಾಸಿಯಾಗಿರುವ ರಶ್ಮಿಕಾ ಮಂದಣ್ಣ ಮತ್ತು ಅವರ ಕುಟುಂಬದವರು ತಮ್ಮ ಸಮುದಾಯದ ನೊಂದ ಮಂದಿಗೆ ಸಹಾಯ ಮಾಡುತ್ತಿದ್ದಾರೆ.  ನಿನ್ನೆ ನಡೆದ ವಿರಾಜಪೇಟೆಯ ಸೆರಿನಿಟಿ ಹಾಲ್ ನಲ್ಲಿ ಪ್ರವಾಹ ಸಂತ್ರಸ್ತರಿಗಾಗಿ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಜನರಿಗೆ ಚೆಕ್ ನೀಡಿ, ಸಂತ್ರಸ್ಥರಿಗೆ ಸಾಂತ್ವನ ಹೇಳಿದರು.ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಕೊಡಗು ಭಾರೀ  ಮಳೆಯಿಂದಾಗಿ ಜನರು ಮನೆ, ತಮ್ಮ ಆಸ್ತಿ- ಪಾಸ್ತಿಯಲ್ಲವನ್ನು ಕಳೆದುಕೊಂಡಿದ್ದಾರೆ. ಆದರ ಸಲುವಾಗಿ ರಶ್ಮಿಕಾ ನೆರೆ ಸಂತ್ರಸ್ಥರಿಗೆ ಸಹಾಯ ಮಾಡಲು ಮುಂದಾಗಿದ್ದು,  ಒಟ್ಟಾರೆ 3,10,000 ಧನ ರಾಶಿಯನ್ನು ತಮ್ಮ ಸಮುದಾಯದವರಿಗೆ ಸಮಾಧಾನ ತರಲೆಂದು ವಿತರಣೆ ಮಾಡಿದ್ದಾರೆ.ಮನೆ ಕಟ್ಟಿಕೊಡುವುದಾಗಿ ಭರವಸೆ ನೀಡಿದ ರಶ್ಮಿಕಾ

ಕೊಡಗು ಜಿಲ್ಲೆಯ ಒಟ್ಟು 31 ಕುಟುಂಬಕ್ಕೆ ಹಣದ ಸಹಾಯ ಮಾಡಿದ್ದಾರೆ. ತಲಾ ಒಂದೊಂದು ಕುಟುಂಬಕ್ಕೆ 10 ಸಾವಿರ ಧನ ಸಹಾಯ ನೀಡಿ ನೆರವಾಗಿದ್ದಾರೆ. ಮುಂದಿನ ದಿನಗಳಲ್ಲಿ ಮನೆ ಕಟ್ಟಿಕೊಡುವುದಾಗಿ ಭರವಸೆ ನೀಡಿದ್ದಾರೆ. ಈ ಹಿಂದೆ ರಶ್ಮಿಕಾ ಮಂದಣ್ಣ ಅವರು ಕೊಡಗು ಪ್ರವಾಹದಲ್ಲಿ ನೊಂದಿದ್ದ ಜನರಿಗೆ ಒಂದು ಭಾವಾನಾತ್ಮಕ ಪತ್ರವನ್ನು ಬರೆದು, ಸಾಂತ್ವನ ಹೇಳಿರುವುದನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದರು.

ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಒಂದೆರಡು ವರ್ಷಗಳಲ್ಲೇ ಸಾಮಾಜಿಕ ಸ್ಪಂದನ ರೂಡಿಸಿಕೊಂಡು ಮಾದರಿ ನಟಿಯಾಗಿ ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳುತ್ತಿರುವ ರಶ್ಮಿಕಾ ನಡೆ ಇದೇ ಚಿತ್ರರಂಗದಿಂದ, ಮತ್ತಿದೇ ಸಮಾಜದಿಂದ ದಶಕಗಳ ಕಾಲ ಬಹಳಷ್ಟು ಗಳಿಸಿ ಬಿಡಿಗಾಸು ದಾನ ಮಾಡದ ನೂರಾರು ಪ್ರತಿಷ್ಟಿತ ಕಲಾವಿದರು ನಾಚುವಂತಿದೆ.

Tags