ಸುದ್ದಿಗಳು

‘ಜುಲೈ 6, ನನ್ನ ಜೀವನದಲ್ಲಿ ತುಂಬಾ ವಿಶೇಷವಾದ ದಿನ’ : ಸುದೀಪ್!

ನಟ-ನಟಿ ಯಾರೆ ಆಗಲಿ ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾಗದ ಒಂದು ದಿನ ಇರುತ್ತದೆ. ಅಂದಿನ ದಿನಗಳಲ್ಲಿ ನಡೆದ ವಿಚಾರಗಳು ಅಥವಾ ಘಟನೆಗಳನ್ನು ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಅದೇ ರೀತಿ ಈಗ ನಟ ಕಿಚ್ಚ ಸುದೀಪ್ ತನ್ನ ಜೀವನದಲ್ಲಿ ಜುಲೈ 6 ಎಂದಿಗೂ ಮರೆಯಲಾಗದ ದಿನವಾಗಿದೆ ಎಂದು ಹೇಳುತ್ತಿದ್ದಾರೆ.

ಸುದೀಪ್ ಜೂಲೈ 6 ತಮ್ಮ ಸಿನಿಮಾರಂಗದಲ್ಲಿ ಮರೆಯಲಾಗದ ದಿನ ಎಂದು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ಜುಲೈ 6 ರಂದು ಸುದೀಪ್ ಅವರಿಗೆ ಎರಡು ರೀತಿಯ ತಿರುವನ್ನು ಸಿನಿಮಾರಂಗ ನೀಡಿದೆ. ಆದ್ದರಿಂದ ಅವರು ಈ ದಿನವನ್ನು ಅವರು ಈಗ ಸ್ಮರಿಸಿದ್ದಾರೆ.Image result for huchcha 1 movie posterಜುಲೈ 6 2001 ರಲ್ಲಿ ಸುದೀಪ್ ನಟನಾಗಿ ಅಭಿನಯ ಮಾಡಿದ `ಹುಚ್ಚ’ ಸಿನಿಮಾ ಬಿಡುಗಡೆಯಾಗಿತ್ತು. ಆ ಸಿನಿಮಾದ ಮೂಲಕವೇ ಅವರು ಸ್ಯಾಂಡಲ್‍ ವುಡ್ ನಲ್ಲಿ ಭರವಸೆಯ ನಟನಾಗಿ ಪರಿಚಯಗೊಂಡಿದ್ದರು. ಅದೇ ರೀತಿ ಸುದೀಪ್ ಟಾಲಿವುಡ್ ನಲ್ಲಿ ಪ್ರಖ್ಯಾತಿ ಪಡೆದ `ಈಗ’ ಚಿತ್ರ ಕೂಡ 2012 ಜುಲೈ 6 ರಂದೇ ಬಿಡುಗಡೆಗೊಂಡಿತ್ತು. `ಈಗ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಸ್ಟಾರ್ ಟಾಲಿವುಡ್ ನಲ್ಲಿಯೂ ಮಿಂಚಿದ್ದರು.Related imageತಮ್ಮ ಸಿನಿಮಾರಂಗದ ಬದುಕಿನಲ್ಲಿ ತಿರುವು ಕೊಟ್ಟ ಜುಲೈ 6ನೇ ದಿನವನ್ನು ಇಂದಿಗೂ ಸ್ಮರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. `ಹುಚ್ಚ’ ಮತ್ತು `ಈಗ’ ಎರಡು ಸಿನಿಮಾದ ತಂಡದವರಿಗೆ ಧನ್ಯವಾದಗಳು. ಈ ದಿನ ನನಗೆ ಬಹಳ ವಿಶೇಷವಾಗಿದ್ದು, ಒಬ್ಬ ನಟನಾಗಿ ನನ್ನನ್ನು ಪರಿಚಯಿಸಿದ ದಿನವಾಗಿದೆ. ಜೊತೆಗೆ ಅಭಿಮಾನಿಗಳು ತಮ್ಮ ಮನದಲ್ಲಿ ಇರಿಸಿಕೊಂಡಿದ್ದಾರೆ. ಆದ್ದರಿಂದ ಜುಲೈ 6 ನನ್ನ ಜೀವನದಲ್ಲಿ ಒಂದು ವಿಶೇಷ ದಿನವಾಗಿದೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *