ಸುದ್ದಿಗಳು

ಮಂಡ್ಯದಲ್ಲಿ ಅದ್ದೂರಿ “ಸ್ವರ್ಣ ಗಾನ”

ಸ್ವರ್ಣ ಟಿ.ವಿ ವತಿಯಿಂದ

ಬೆಂಗಳೂರು, ಸೆ.06: “ಸ್ವರ್ಣ ಗಾನ” ಕಾರ್ಯಕ್ರಮವು ಸೆಪ್ಟೆಂಬರ್ ೨೦ ರಂದು ಸಂಜೆ ೪ ಗಂಟೆಯಿಂದ ಸತತ ೫ ಗಂಟೆಗಳ ತನಕ ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜರುಗಲಿದೆ.

ಸಂಗೀತ ನಿರ್ದೇಶಕ ಪೂರ್ಣ ಚಂದ್ರ ತೇಜಸ್ವಿ  ಸರಿಗಮಪ ವಿಜೇತ ಗಾಯಕ ಚೆನ್ನಪ್ಪ ಸೇರಿದಂತೆ  ವಿಶೇಷ ಅತಿಥಿಗಳಾಗಿ ಭಾಗವಹಿಸುತ್ತಿದ್ದು ಸಾವಿರಾರು ಜನರು ಈ ಕಾರ್ಯಕ್ರಮದಲ್ಲಿ  ಭಾಗಹಿಸುತ್ತಿದ್ದಾರೆ.ಹಳ್ಳಿಗಾಡಿನ ಬಾಲ ಪ್ರತಿಭೆಗಳು ಸೇರಿದಂತೆ ಏಳೆಂಟು ಜಿಲ್ಲೆಯ ಗಾಯನ ೨೫ ಕ್ಕೂ ಹೆಚ್ಚು ಎಂಟು ವರ್ಷದ ಮಕ್ಕಳಿಂದ ಹಿಡಿದು ಐವತ್ತು ವರ್ಷ ವಯೋಮಾನ ಪ್ರತಿಭೆಗಳು ಪಾಲ್ಗೊಳ್ಳುತ್ತಿದ್ದಾರೆ.

ಪ್ರಥಮ ಬಾರಿಗೆ ಮಂಡ್ಯದಲ್ಲಿ ಗಾಯನ ಸ್ಟಾರ್ ಕಾರ್ಯಕ್ರಮ

ಪ್ರಥಮ ಬಾರಿಗೆ ಮಂಡ್ಯದಲ್ಲಿ ಗಾಯನ ಸ್ಟಾರ್ ಕಾರ್ಯಕ್ರಮ ವಾಗುತ್ತಿದ್ದು ಹಂಸಲೇಖ ಹಿಟ್ಸ್ , ಒಲ್ಡ್ ಇಸ್ ಗೋಲ್ಡ್ ,ನವ ನವೀನ ಹಾಡುಗಳು ,ಜಾನಪದ ಮತ್ತು ಸುಗಮ ಸಂಗೀತ ಹಾಡುಗಳ ಪ್ರಕಾರಗಳನ್ನು ಹಾಡಲಿದ್ದಾರೆ. ಅಂದು ನಡೆವ ಗಾಯನ ಸುಧೆಯನ್ನು  ಸವಿಯಬಹುದು. ಕಾರ್ಯಕ್ರಮ ಯಶಸ್ವಿ ಆಗಲೆಂದು ಚುಂಚ ಶ್ರೀಗಳಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಸೇರಿದಂತೆ ಸರ್ವ ಗಣ್ಯರು ಶುಭಕೋರಿ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಕಾರ್ಯಕ್ರಮ ಚೆನ್ನಾಗಿ ಮೂಡಿಬರಲು “ಆನೆಬಲ” ಚಿತ್ರತಂಡ ಕೂಡಾ ಕೈಜೋಡಿಸುತ್ತಿದೆ.

Tags