ಸುದ್ದಿಗಳು

ಉದಯ ಟಿವಿಯಲ್ಲಿ ಪ್ರಿಮೀಯರ್ ಚಲನಚಿತ್ರ “ಟಗರು”

ದುನಿಯಾ ಸೂರಿ ನಿರ್ದೇಶನ ಸಿನಿಮಾ 'ಟಗರು'

ಬೆಂಗಳೂರು, ಸೆ.12: ಇದೇ ಗಣೇಶ ಹಬ್ಬದ ದಿನದಂದು ಉದಯ ಟಿವಿಯಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ ಅಭಿನಯದ ’ಟಗರು’ಚಲನಚಿತ್ರ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. ಈ ಚಿತ್ರವನ್ನು ದುನಿಯಾ ಸೂರಿ ನಿರ್ದೇಶಿಸಿದ್ದು, ಕೆ.ಪಿ.ಶ್ರೀಕಾಂತ್ ಅವರು ನಿರ್ಮಿಸಿದ್ದಾರೆ. ‘ಟಗರು’ ಚಿತ್ರದಲ್ಲಿ ಶಿವರಾಜ್ ಕುಮಾರ್, ದೇವರಾಜ್, ಧನಂಜಯ್, ವಶಿಷ್ಠ ಎನ್.ಸಿಂಹ, ,ಮಾನ್ವಿತ, ಭಾವನ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಜಪಾನ್ ಮತ್ತು ಕೀನ್ಯಾ ದೇಶಗಳಲ್ಲಿ ಪ್ರದರ್ಶನಗೊಂಡ ಸಿನಿಮಾ

ಚರಣ್ ರಾಜ್‍ರವರ ಸಂಗೀತ ನಿರ್ದೇಶನ ಮಾಡಿದ್ದಾರೆ. ಉತ್ತಮ ಛಾಯಾಗ್ರಹಣವನ್ನು ಮಹೇಂದ್ರ ಸಿಂಹ ಮಾಡಿರುತ್ತಾರೆ. ಮೊದಲ ಬಾರಿಗೆ. ರಾಜ್ಯಾದ್ಯಾಂತ ಮಲ್ಟಿಪ್ಲೆಕ್ಸ್‍ನಲ್ಲಿ ಭರ್ಜರಿ ಪ್ರದರ್ಶನಗೊಂಡ ಚಿತ್ರ ಇದಾಗಿದೆ. ಟಗರು ಚಿತ್ರವು ಕೀನ್ಯಾ ಮತ್ತು ಜಪಾನ್ ದೇಶಗಳಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಚಲನಚಿತ್ರವೆಂದು ವರದಿಯಾಗಿದೆ. ಈ ಚಲನಚಿತ್ರವು 15 ಕೇಂದ್ರಗಳಲ್ಲಿ ಯಶಸ್ವಿಯಾಗಿ 100 ದಿನಗಳ ಪೂರ್ಣಗೊಂಡಿತು.ಚಿತ್ರಕಥೆ

ಪೊಲೀಸ್ ಅಧಿಕಾರಿಯಾಗಿದ್ದ ಶಿವಣ್ಣ ಗೋವಾದಿಂದ ಒಂದು ಹುಡುಗಿ (ಮಾನ್ವಿತ) ಕರೆದುಕೊಂಡು ಬರುತ್ತಾನೆ. ಬರುವ ದಾರಿಯಲ್ಲಿ ಇಬ್ಬರು ಅವರವರ ಹಿಂದಿನ ಸಿಹಿ-ಕಹಿ ಘಟನೆಗಳನ್ನು ನೆನಸಿಕೊಳ್ಳುತ್ತಾರೆ. ಹೀರೋಯಿನ್ ಮಾನ್ವಿತ ಶಿವಣ್ಣನ್ನು ಪ್ರೀತಿಸುತ್ತಾಳೆ. ಅಕ್ಕ (ಬಾವನ) ವಿಲನ್‍ ಗಳಿಂದ ಹತ್ಯೆಗೊಂಡಿರುವ ವಿಷಯ ಮಾನ್ವಿತಾಗೆ ತಿಳಿದಿರುವುದಿಲ್ಲ.ವಿಲನ್ ಪಾತ್ರದಲ್ಲಿ ಮಿಂಚಿರುವ ಡಾಲಿ ಧನಂಜಯ ಶಿವನಿಗೆ ಏಕೆ ವಿರುದ್ಧವಾಗುತ್ತಾನೆ? ಶಿವ ಎಂಬ ಖಡಕ್ ಅಧಿಕಾರಿ ಸಮಾಜದಲ್ಲಿರುವ ಕೆಟ್ಟವರನ್ನು ಹೇಗೆ ಮಟ್ಟ ಹಾಕುತ್ತಾನೆ ಎಂಬುದೇ ಈ ಚಿತ್ರದ ಕಥೆ. ಸೂಪರ್ ಹಿಟ್ “ಟಗರು” ಇದೇ ಗುರುವಾರ ಸಂಜೆ 7 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Tags