ಜೀವನ ಶೈಲಿಬಾಲ್ಕನಿಯಿಂದಸುದ್ದಿಗಳು

“..ಕನ್ನಡ ಕಲಿಯೊ.. ಕನ್ನಡ ಕಲಿಯೊ… ಕಲಿಯೊ ಮುಂಡೆದೇ..”

“..ಉಣ್ಕೊಂಡ್ ತಿನ್ಕೊಂಡ್ ಇದ್ಮೇಲೆ ಭಾಷೆ ಕಲಿತ್ರೆ ಮರ್ಯಾದೆ..!”

 

ಕೊನೆಗೂ, ಸೆಂಚುರಿ ಸ್ಟಾರ್ ಶಿವಣ್ಣ  ತಮ್ಮ ಮೃದುವಾದ ಕೊರಳಿಂದ  ಖಡಕ್ ಸಂದೇಶವನ್ನೇ ನೀಡಿದ್ದಾರೆ..  ಗೀತರಚನಕಾರ ಕವಿರಾಜ್ ಲೇಖನಿಯಿಂದ ಮೂಡಿರುವ ಈ ಹಾಡಿಗೆ ಧ್ವನಿಯಾದ  ಶಿವಣ್ಣ ..

ಬೆಂಗಳೂರು, ಸೆ.3ಹೊಟ್ಟೆಪಾಡಿಗಾಗಿ ಕರುನಾಡಿಗೆ ಬಂದು, ಇಲ್ಲಿನ ಸೊಂಪಾದ ವಾತಾವರಣ ಅನುಭವಿಸಿ, ಇಲ್ಲಿಗೇ ಮನಸೋತು ಝಾಂಢಾ ಊರಿ ನಾಲ್ಕಂತಸ್ತಿನ ಮನೆಗಳ  ಕಟ್ಕೊಂಡ್ರೂನೂ  ಕನ್ನಡ  ಸುತರಾಂ ಕಲಿಯದ ಪರಭಾಷಾ ಹುಂಬರಿಗೆ ‘ತಾರಕಾಸುರ’ ತಗಲ್ಹಾಕಂಡವ್ರೆ..!!

                       ಕನ್ನಡ ಕಲಿಯೊ.. ಕನ್ನಡ ಕಲಿಯೊ… ಕಲಿಯೊ ಮುಂಡೆದೇ

                       ಉಣ್ಕೊಂಡ್ ತಿನ್ಕೊಂಡ್ ಇದ್ಮೇಲೆ ಭಾಷೆ ಕಲಿತ್ರೆ ಮರ್ಯಾದೆ

ಆಹಾ! ಕೊನೆಗೂ ಶಂಖದಿಂದ ಬಂದ್ರೇ ಮಾತ್ರ ತೀರ್ಥ..!! ಅನ್ನೋ ಹಾಗೆ  ಚಂದನವನದ ‘ಕಿಂಗ್’ ಶಿವರಾಜ್ ಕುಮಾರ್ ಮುಗ್ಧ ಕಂಠದಿಂದಲೇ ಕನ್ನಡದ ಕಲಿಕೆಯ ವಿರೋಧಿಸುವ ಪರಭಾಷಾ ಹುಂಬರಿಗೆ ಚಾಟಿಯೇಟು ಬೀಸಲಾಗಿದೆ. ಗೀತರಚನಕಾರ ಕವಿರಾಜ್ ಲೇಖನಿಯಿಂದ ಮೂಡಿರುವ ಈ ಹಾಡಿಗೆ ಧ್ವನಿಯಾದ  ಶಿವಣ್ಣ  ತಮ್ಮ ಮೃದುವಾದ ಕೊರಳಿಂದ  ಖಡಕ್ ಸಂದೇಶವನ್ನೇ ನೀಡಿದ್ದಾರೆ..  

‘ತಾರಕಾಸುರ’ ಸಿನಿಮಾದ ನಾಯಕನ ಇಂಟ್ರಡಕ್ಷನ್ ಹಾಡಿಗೆ ಶಿವಣ್ಣ ಹಾಡಿದ್ದು , ‘ರಥಾವರ’ ಸಿನಿಮಾ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ.

ಕನ್ನಡಿಗರು ಅಂದರೇನು..?…,ಎಂದು  ವಿವರಿಸುತ್ತಾ ಸಾಗುವಲ್ಲಿ ಅವರ ನಡೆ-ನುಡಿ-ಸ್ವಭಾವಗಳ ಕುರಿತು ಸ್ಥೂಲ ಪರಿಚಯ ಮಾಡಿಕೊಡುವ ಈ ಹಾಡು ‘ನೀರನ್ನು ಕೇಳಲು, ಎಳನೀರನ್ನು ಕೊಡುವ ಜನ ನಮ್ಮವರು..!’ ಎಂದು ಬಣ್ಣಿಸುತ್ತಾ ನಡೆದಿದೆ. ಕೋಟಿ ಕನ್ನಡಿಗರ ಕಿವಿ ಇದ ಕೇಳಿ ನೆಟ್ಟಗಾಗುವುದು ಮಾತ್ರವಲ್ಲ ಒಂದಷ್ಟು ವಾರಗಳುದ್ದಕ್ಕೂ ಎಲ್ಲೆಡೆ ಇದು ಪ್ರಚಲಿತವಾಗಿ ಜನರಂಜನೆಗೆ ಕಾರಣವಾಗುವ ಸಕಲ ಲಕ್ಷಣಗಳೂ ಈ ಗೀತೆಯಲ್ಲಿದೆ.

ಕೆ ಫಾರ್ ಕಂಗ್ಲೀಷ್, ಕಾವೇರಿ ನೀರು ಕೇಳ್ತಿರಾ..?, ಇಂಗ್ಲೆಂಡ್ ಗೆ  ಹೋದಾಗ್ ಇಂಗ್ಲೀಷ್ ಮಾತಾಡ್ತೀರಾ..! ಪ್ಯಾರಿಸ್ ಗೆ ಹೋದ್ರೆ ಅಲ್ಲಿ ಫ್ರೆಂಚ್ ಮಾತಾಡ್ತೀರಾ….!! ಇಲ್ಲಿಗ್ ಬಂದ್ ಭಾಷೆ ಮಾತ್ರ ಕಲಿಯಾಕ್ಕಿಲ್ಲಾ ಯಾಕ್ಹೀಂಗ್ ಆಡ್ತೀರಾ..??!! ಎಂದು ಮೂದಲಿಸಿ ಹಾಡಿರುವ ಶಿವಣ್ಣ ಕೂಲ್ ಗಾಯಕನಾಗಿ ಮನಸೆಳೆಯುತ್ತಾರೆ.  ಧರ್ಮ-ವಿಶ್ ಸಂಗೀತ ನಿರ್ದೇಶನ ಮಾಡಿರುವ ಹಾಡನ್ನು ಕವಿರಾಜ್ ಮನಸಾರೆ ಬರೆದಿದ್ದಾರೆ.

 

Tags