ಸುದ್ದಿಗಳು

‘ದಿ ವಿಲನ್’ ಗಾಗಿ ಕಾದು ಕುಳಿತ ಕಿಚ್ಚ

ಬೆಂಗಳೂರು, ಸೆ.14: ‘ದಿ ವಿಲನ್ ‘ ಸಿನಿಮಾಗಾಗಿ ನಾನು ಖಾದು ಕುಳಿತಿರುವೆ ಅಂತಾ ತಮ್ಮ ಟ್ವಿಟ್ಟರ್ ಮೂಲಕ ಸುದೀಪ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಸಿನಿಮಾಗಾಗಿ ಕಾದು ಕುಳಿತ ಸುದೀಪ್

ಸದ್ಯ ‘ದಿ ವಿಲನ್’ ಯಾವಾಗ ಬಿಡುಗಡೆಯಾಗುತ್ತೋ ಅಂತ ಕಾಯ್ತಾ ಇದ್ದಾರೆ ಅಭಿಮಾನಿಗಳು. ಈಗಾಗಲೇ ‘ದಿ ವಿಲನ್’ ಬಿಡುಗಡೆ ದಿನಾಂಕ ಕೂಡ ಅನೌನ್ಸ್ ಆಗಿದೆ. ಇಷ್ಟು ದಿನ ಕಾತುರಾರಿದ್ದ ಅಭಿಮಾನಿಗಳಿಗೆ ದಿನಾಂಕ ನಿಗದಿಯಾಗಿರುವುದಂತೂ ಖುಷಿಯ ಸಂಗತಿ ಅಂದರೆ ತಪ್ಪಾಗಲ್ಲ. ಇದೀಗ ಅಭಿಮಾನಿಗಳು ಅಷ್ಟೆ ಅಲ್ಲ ನಟ ಕಿಚ್ಚ ಸುದೀಪ್ ರಿಗೂ ‘ದಿ ವಿಲನ್’ ಬಿಡುಗಡೆ ಯಾವಾಗ ಆಗುತ್ತೆ ಅಂತಿದ್ದಾರೆ.

ಸಿನಿಮಾ ತಂಡದ ಅನುಭವ ಹಂಚಿಕೊಂಡ ಸುದೀಪ್

ಹೌದು, ದಿ ವಿಲನ್ ಸದ್ಯ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ ಸಿನಿಮಾ. ಈ ಸಿನಿಮಾ ಮುಂದಿನ ತಿಂಗಳು ೧೮ ರಂದು ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ದಿನಾಂಕ ನಿಗಧಿಯಾಗಿರುವ ಹಿನ್ನೆಲೆ ಅಭಿಮಾನಿಗಳಿಗೆ ಕಾತುರತೆ ಅಷ್ಟಿಷ್ಟಲ್ಲ. ಇದೀಗ ನಟ ಸುದೀಪ್ ಕೂಡ ಸಿನಿಮಾ ಬಿಡುಗಡೆಗೆ ಕಾದು ಕುಳಿತಿದ್ದಾರೆ, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಕಿಚ್ಚ, ಪ್ರೇಮ್ ಗೆ ಸಿನಿಮಾ ಬಿಡುಗಡೆಯ ಶುಭಾಷಯ ಕೋರಿದ್ದಾರೆ. ನಿಮ್ಮ ಕೆಲಸ ಅಧ್ಭುತ, ನೀವು ಎಂಥಹ ಕೆಲಸಗಾರರು ಅಂತ ನನಗೆ ಗೊತ್ತು. ನಿಮ್ಮಂಥ ಹಾಗೂ ಒಳ್ಳೆಯ ತಂತ್ರಜ್ಞರ ಜೊತೆ ಕೆಲಸ ಮಾಡಿರುವುದು ಖುಷಿಯಾಗಿದೆ. ಈಗಾಗಲೇ ಸಿನಿಮಾಗಾಗಿ ನಾನು ಕಾಯುತ್ತಾ ಇದ್ದೇನೆ ಅಂತಾ ಬರೆದುಕೊಂಡಿದ್ದಾರೆ.

Tags

Related Articles