ಸುದ್ದಿಗಳು

ಕೇರಳದ ಪ್ರವಾಹ ಪೀಡಿತರ ನೆರವಿಗೆ ನಿಂತ ಕಲಾವಿದರು…!

ತಿರುವನಂತಪುರಂ, ಆ.15: ಈ ಬಾರಿ ಕರ್ನಾಟಕದಲ್ಲಿ ಭಾರೀ ಮಳೆಯಾಗಿದ್ದು, ಮಲೆನಾಡು, ಕರಾವಳಿಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚೇ ಮಳೆಯಾಗಿದೆ. ಆದರೆ ಇದಕ್ಕಿಂತ ಅಧಿಕವಾಗಿ ವರುಣನ ಆರ್ಭಟಕ್ಕೆ ಸಿಲುಕಿದ್ದು ಮಾತ್ರ ನಮ್ಮ  ನೆರೆ ರಾಜ್ಯವಾದ ಕೇರಳ. ಘೋರ ಮಳೆಗೆ ಕೇರಳದಲ್ಲಿ ಅನೇಕ ಆಸ್ತಿ ಪಾಸ್ತಿ, ಜೀವನ ನಷ್ಟವಾಗಿದೆ.  ಇಡೀ ಕೇರಳದ ಸ್ಥಿತಿ ಸದ್ಯಕ್ಕೆ ಗಂಭೀರವಾಗಿದ್ದು, ಪ್ರವಾಹಕ್ಕೆ ಕೇರಳ ರಾಜ್ಯವು ನಲುಗಿ ಹೋಗಿದೆ. ಈ ಸಂಬಂಧ ಕೇರಳದ ಪ್ರವಾಸ ಸಂತ್ರಸ್ತರಿಗೆ ಅನೇಕ ಮಂದಿ ತಮ್ಮ ಕೈಲಾದ ಸಹಾಯ ಮಾಡಿದ್ದು, ಚಿತ್ರರಂಗದ ನಟರೂ ಈ ಪಟ್ಟಿಯಲ್ಲಿದ್ದಾರೆ.

ಸಂತ್ರಸ್ತರಿಗೆ ನೆರವಾಗುತ್ತಿರುವ ನಟರು

ದೇವರನಾಡಲ್ಲಿ ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ರಾಷ್ಟದ ಹಲವು ರಾಜ್ಯಗಳು ಸಿಎಂ ಫಂಡ್ ಗೆ ಸಹಾಯ ಮಾಡಿದ್ದಾರೆ. ಚಿತ್ರರಂಗದ ಕಲಾವಿದರು ಕೇರಳದ ನೆರವಿಗೆ ನಿಂತಿದ್ದು, ಮಲಯಾಳಂ ಇಂಡಸ್ಟ್ರಿಯ ಸಿನಿತಾರೆಯರ ಜೊತೆಯಲ್ಲಿ ತಮಿಳು, ತೆಲುಗು ಹಾಗೂ ನಮ್ಮ ಕನ್ನಡ ಕಲಾವಿದರು ಕೂಡ ಬೆಂಬಲಕ್ಕೆ ನಿಂತಿದ್ದಾರೆ ಎಂಬುದು ಸಮಾಧಾನಕರ ವಿಚಾರ. ನಟ ಕಮಲ್ ಹಾಸನ್, ಸೂರ್ಯ, ವಿಜಯ್ ದೇವರಕೊಂಡ, ಅರ್ಜುನ್, ರಜನೀಕಾಂತ್ ಹಾಗೂ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವರು ಧನ ಸಹಾಯ ಮಾಡಿದ್ದಾರೆ.ಪವರ್ ಸ್ಟಾರ್ ಪುನೀತ್

ಪವರ್ ಸ್ಟಾರ್ ಪುನೀತ್ ಅವರು, ಕೇವಲ ನಟನೆಯಲ್ಲಿ ಮಾತ್ರ ತೊಡಗಿಸಿಕೊಂಡಿಲ್ಲ. ಬದಲಾಗಿ ಸಮಾಜ ಸೇವೆಯಲ್ಲಿಯೂ ಸಕ್ರಿಯವಾಗಿದ್ದಾರೆ ಎಂಬುದಕ್ಕೆ ಇತ್ತೀಚಿಗೆ ಅವರು ಕೇರಳದ ಸಂತ್ರಸ್ತರ ಸಹಾಯ ನಿಧಿಗೆ ನೆರವು ನೀಡಿರುವುದೇ ಸಾಕ್ಷಿ. ಹೌದು. ಪುನೀತ್ ರಾಜ್ ಕುಮಾರ್ ಅವರು 5 ಲಕ್ಷ ರೂ. ಹಣವನ್ನು ಕೇರಳದ ಸಿಎಂ ನಿಧಿಗೆ ನೀಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.ಸಿಂಗಮ್ ಬ್ರದರ್ಸ್

ದಕ್ಷಿಣ ಭಾರತದ ಖ್ಯಾತ ನಟರುಗಳಾದ ಸೂರ್ಯ ಕಾರ್ತಿ ಸಹೋದರರು ತಲಾ 25 ಲಕ್ಷ ರೂ.ಹಣವನ್ನು ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ನೀಡಿದ್ದು, ಕೇರಳದ ಜನರ ನೋವಿನಲ್ಲಿ ತಾವೂ ಭಾಗಿಯಾಗಿದ್ದಾರೆ. ಟಾಲೀವುಡ್ ಸ್ಟೈಲಿಂಗ್ ಸ್ಟಾರ್ ಅಲ್ಲು ಅರ್ಜುನ್ ಅವರು ಕೂಡಾ, ಕೇರಳದ ಸಂತ್ರಸ್ತರ ನೆರವಿಗೆ 25 ಲಕ್ಷ ರೂ. ನೀಡಿದ್ದಾರೆ.ತೆಲುಗು ರೈಸಿಂಗ್ ಸ್ಟಾರ್ ವಿಜಯ್ ದೇವರಕೊಂಡ

ಅಂತೆಯೇ ಖ್ಯಾತ ತೆಲುಗು ರೈಸಿಂಗ್ ಸ್ಟಾರ್ ವಿಜಯ್ ದೇವರಕೊಂಡ ಅವರು ಕೂಡ ಕೇರಳ ಜನರ ನೆರವಿಗೆ ಬಂದಿದ್ದು, 5 ಲಕ್ಷ ಹಣವನ್ನ ಪ್ರವಾಹ ಪೀಡಿತರ ನಿಧಿಗೆ ನೀಡಿದ್ದಾರೆ. ‘ ಜತೆಗೆ ತನ್ನ ಇಷ್ಟವಾದ ಸ್ಥಳಗಳಲ್ಲಿ ಕೇರಳವೂ ಒಂದಾಗಿದ್ದು, ಈಗಿನ ಪರಿಸ್ಥಿತಿ ನಿಜಕ್ಕೂ ಬೇಸರ ತರುವಂತಿದೆ. ಆದಷ್ಟು ಬೇಗ ಕೇರಳ ರಾಜ್ಯವು ಸಹಜ ಸ್ಥಿತಿಗೆ ಬರಲಿ ಎಂದು ಪ್ರಾರ್ಥನೆ ಮಾಡಿಕೊಂಡಿದ್ದಾರೆ.ನಟರು ಮಾತ್ರವಲ್ಲದೇ ನಟಿಯರು ಕೂಡಾ, ಕೇರಳದ ಸಂತ್ರಸ್ತರ ನೆರವಿನಲ್ಲಿ ಭಾಗಿಯಾಗಿದ್ದು ಕೇರಳದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ 1 ಲಕ್ಷ ರೂ. ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದಲ್ಲದೇ ಮಲಯಾಳಂ ಕಲಾವಿದರ ಸಂಘ 10 ಲಕ್ಷ ರೂ, ಮಮ್ಮುಟಿ 15 ಲಕ್ಷ ರೂ, ದುಲ್ಕರ್ ಸಲ್ಮಾನ್ 10 ಲಕ್ಷ ರೂ, ಮೋಹನ್ ಲಾಲ್ 25 ಲಕ್ಷ ರೂ. ಸೇರಿದಂತೆ ಇನ್ನು ಹಲವರು ಸಿಎಂ ನಿಧಿಗೆ ಹಣ ನೀಡಿದ್ದಾರೆ.

Tags