ಸುದ್ದಿಗಳು

ಸಿನಿಮಾ ಇಷ್ಟವಾಗದಿದ್ದಲ್ಲಿ ಹಣ ವಾಪಸ್

ವಿಭಿನ್ನ ಸ್ಟೋರಿ ಹೊಂದಿರುವ ‘ಐ ಲವ್ ಯು’ ಚಿತ್ರ

ಬೆಂಗಳೂರು, ಸೆ.26: ನಿರ್ದೇಶಕ ಆರ್.ಚಂದ್ರು ಹಾಗೂ ರಿಯಲ್‌ಸ್ಟಾರ್ ಉಪೇಂದ್ರ ಅವರ ಕಾಂಬಿನೇಷನ್‌ ನ ಸಿನಿಮಾ ‘ಬ್ರಹ್ಮ’ ಹಿಟ್ ಆಗಿದ್ದು, ಅದೇ ಜೋಡಿ ಇಲ್ಲಿ ಮತ್ತೊಮ್ಮೆ ಒಂದಾಗಿದ್ದು, ಮತ್ತೊಂದು ವೈಶಿಷ್ಟ್ಯವಾದ ಸಿನಿಮಾದ ಮೂಲಕ ಕಮ್ ಬ್ಯಾಕ್ ಆದ ಈ ಜೋಡಿ ಸಿನಿಮಾದಲ್ಲೂ ಸ್ಪೆಷಲ್. ಇದೀಗ ಈ ಸಿನಿಮಾ ನಿರ್ದೇಶಕರು ಪ್ರೇಕ್ಷಕರಿಗೆ ಒಂದು ಸವಾಲ್ ಹಾಕಿದ್ದಾರೆ.

‘ಬ್ರಹ್ಮ’ ಚಿತ್ರದ ಜೋಡಿ, ಮತ್ತೆ ಮಾಡ್ತಿದೆ ಮೋಡಿ

ಆರ್.ಚಂದ್ರು ನಿರ್ದೇಶನದಲ್ಲಿ ತಯಾರಾಗುತ್ತಿರುವ  ‘ಐ ಲವ್ ಯು’ ಸಿನಿಮಾ ಮುಹೂರ್ತದಿಂದಲೂ ಒಂದಲ್ಲಾ ಒಂದು ಸುದ್ದಿಯಿಂದ ಸದ್ದು ಮಾಡುತ್ತಿದೆ. ಇದೀಗ ಚಿತ್ರದ ಫಸ್ಟ್ ಲುಕ್ ಎಲ್ಲರ ಗಮನ ಸೆಳಿದಿದೆ.. ಆರ್.ಚಂದ್ರು ಹಾಗೂ ಉಪೇಂದ್ರ ಅವರ ಕಾಂಬಿನೇಷನ್ ಈಗಾಗಲೇ ಒಂದು ಬಾರಿ ಕ್ಲಿಕ್ ಆಗಿದ್ದು, ಈ ಬಾರಿ ಮತ್ತಷ್ಟು ಕ್ಯೂರಿಯಾಸಿಟಿ ಸಹಜವಾಗಿಯೇ ಕ್ರಿಯೇಟ್ ಮಾಡುತ್ತಿದೆ.  ಸಿನಿಮಾ ಇಷ್ಟವಾಗದೇ ಇದ್ದಲ್ಲಿ ಹಣ ವಾಪಸ್

ಹೊಸ ವಿಚಾರ ಏನಪ್ಪಾ ಅಂದರೆ ಈ ಸಿನಿಮಾ ನೋಡಿ ಇಷ್ಟವಾಗದೇ ಇದ್ದಲ್ಲಿ ಹಣ ವಾಪಸ್ ಮಾಡುವುದಾಗಿ ಆರ್.ಚಂದ್ರು ಸಿದ್ದವಾಗಿದ್ದಾರಂತೆ. ‘ಚಾರ್ ಮಿನಾರ್’ ಸಿನಿಮಾ ಬಂದಾಗಲೂ ಕೂಡ ಆರ್. ಚಂದ್ರು ಈ ರೀತಿಯೇ ಹೇಳಿದ್ದರು. ಇದೀಗ ಈ ಸಿನಿಮಾಕ್ಕೂ ಹಾಗೆ ಹೇಳುತ್ತಿದ್ದಾರೆ. ಈ ಚಿತ್ರವನ್ನು  ಉಪೇಂದ್ರ ಅವರ  ‘ಎ’, ‘ಉಪೇಂದ್ರ’ , ‘ತಾಜ್‌ಮಹಲ್’, ‘ಚಾರ್‌ಮಿನಾರ್’ ಸಿನಿಮಾವನ್ನು ಮಿಶ್ರಣ ಮಾಡಿದರೆ, ಯಾವ ರೀತಿಯಾದ ಎಂಟರ್‌ಟೈನ್ಮೆಂಟ್ ಸಿಗುತ್ತದೆ ಹಾಗೆ, ಅದ್ಭುತವಾಗಿ ನಿರ್ಮಿಸಿದ್ದಾರಂತೆ.. ಇನ್ನು ಈ ಚಿತ್ರದ ಮುಖ್ಯಪಾತ್ರದಲ್ಲಿ ರಿಯಲ್‌ಸ್ಟಾರ್ ಉಪೇಂದ್ರ, ರಚಿತಾ ರಾಮ್ ಹಾಗೂ ಸೋನು ಗೌಡ ಕಾಣಿಸಿಕೊಳ್ಳಲಿದ್ದಾರೆ.. ಬ್ರಹ್ಮ ಚಿತ್ರದಲ್ಲಿ ಉಪೇಂದ್ರ ಅವರನ್ನು ಫುಲ್ ಮಾಸ್ ಆಗಿ ತೋರಿಸಿದ್ದ ಆರ್.ಚಂದ್ರು ಈ ‘ಐ ಲವ್ ಯೂ’ ಚಿತ್ರದಲ್ಲಿ ಕಾಲೇಜ್ ಬಾಯ್ ಆಗಿ ತೋರಿಸಲಿದ್ದಾರೆ.. ಉಪೇಂದ್ರ ಈ ಚಿತ್ರದಲ್ಲಿ ಮೂರು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ..

ಕನ್ನಡ, ತೆಲುಗು ಭಾಷೆಯಲ್ಲಿ ತಯಾರಾಗುತ್ತಿರುವ ಸಿನಿಮಾ

ಈ ‘ಐ ಲವ್ ಯೂ’ ಚಿತ್ರ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ತಯಾರಾಗುತ್ತಿದ್ದು, ಸದ್ಯ ಚಿತ್ರೀಕರಣ ಆಲ್‌ಮೋಸ್ಟ್ ಕಂಪ್ಲೀಟ್ ಆಗಿದ್ದು, ಹಾಡುಗಳು ಹಾಗೂ ಫೈಟ್ ಬಾಕಿ ಇದ್ದು, ಆದಷ್ಟು ಬೇಗ ಚಿತ್ರೀಕರಣ ಮುಗಿಸಿ,  ಇದೇ ಡಿಸೆಂಬರ್‌ನಲ್ಲಿ ಸಿನಿಮಾವನ್ನು  ತೆರೆಗೆ ತರುವ ಯೋಜನೆ  ಮಾಡಿದೆ ಚಿತ್ರತಂಡ. ಆರ್.ಚಂದ್ರು ಈ ಸಿನಿಮಾಗೆ ನಿರ್ಮಾಣ ಕೂಡಾ ಮಾಡಿದ್ದಾರೆ.. ಇನ್ನು ಚಿತ್ರದ ಟ್ರೇಲರ್ ಯಾವ ರೀತಿ ಇರಲಿದೆ ಎಂದು ಕಾದು ನೋಡಬೇಕು.

 

Tags