ಬಾಲ್ಕನಿಯಿಂದಸುದ್ದಿಗಳು

ವಿಶಿಷ್ಟ, ಸ್ವಾದಿಷ್ಟವೀ ವಸಿಷ್ಠ ಸಿಂಹ…!

ನಾಗತಿಹಳ್ಳಿ ಚಂದ್ರಶೇಖರ್ ಬಳಿ ಮೆಚ್ಚುಗೆ ಪಡೆದ ವಸಿಷ್ಟಸಿಂಹ

 

ಬೆಂಗಳೂರು, ಸೆ-4: ಟಗರು ಸಿನಿಮಾ ಮೂಲಕ ಚಿಟ್ಟೆ ಅಂತಾನೆ ಹೆಸರುವಾಸಿಯಾದ ನಟ ವಸಿಷ್ಠ ಸಿಂಹ. ಕನ್ನಡ ಸಿನಿಮಾ ರಂಗದಲ್ಲಿ ಭರವಸೆಯ ನಟ ಎಂದೆನಿಸಿಕೊಂಡ ಈ ನಟ ಸದ್ಯ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾದಲ್ಲಿ ವಸಿಷ್ಠ ಸಿಂಹ ಹಾಗೂ ಮಾನ್ವಿತಾ ಹರೀಶ್ ಒಟ್ಟಿಗೆ ನಟಿಸುತ್ತಿರೋದು ಗೊತ್ತಿರೋ ವಿಚಾರ. ಈಗಾಗಲೇ ಈ ಸಿನಿಮಾ ಶೂಟಿಂಗ್ ಲಂಡನ್‌ನಲ್ಲಿ ಭರದಿಂದ ಸಾಗಿದೆ.ನನಗೆ ಅಪಾರ ಭರವಸೆ ಇದೆ. ಈತ ಕನ್ನಡಕ್ಕೆ ಮಾತ್ರವಲ್ಲ; ಭವಿಷ್ಯದಲ್ಲಿ ಬಹುಭಾಷೆಗಳಲ್ಲಿ ನಾಯಕನಾಗಿ ಪ್ರಕಟಗೊಳ್ಳಲಿರುವ ಪ್ರತಿಭೆ. ಈತನ ಶರೀರವೂ-ಶಾರೀರವೂ ಅನನ್ಯ. ನಮ್ಮ ಹೆಸರಿಡದ ಇಂಗ್ಲೆಂಡ್ ಸಿನಿಮಾದ ನಾಯಕ ವಿಶಿಷ್ಟ ಸ್ವಾದಿಷ್ಟವೀ “ವಸಿಷ್ಠ ಸಿಂಹ”.ಕಾದು ನೋಡಿ ಈತನ ಘರ್ಜನೆಯನ್ನು! ಇನ್ನು ಇವ ಖಳನಲ್ಲ …

ಈ ಸಿನಿಮಾಗಾಗಿ ವಸಿಷ್ಠ ತಮ್ಮ ಲುಕ್ ಬದಲಾಯಿಸಿದ್ದಾರೆ. ಹೇರ್ ಸೈಲ್ ಕೂಡ ಬದಲಾಗಿದೆ. ಇದಿಗ ಈ ನಟ ನಿರ್ದೇಶಕರಿಂದ ಕೂಡಾ ಮೆಚ್ಚುಗೆ ಪಡೆದಿದ್ದಾರೆ. ಈಗಾಗಲೇ ಟಗರು ಸಿನಿಮಾ ಮೂಲಕ ಸಾಕಷ್ಟು ಜನ ಮನ್ನಣೆ ಪಡೆದಿದ್ದ ಈ ನಟ ಇದೀಗ ನಿರ್ದೇಶಕರಿಂದಲೂ ಸೈ ಎನಿಸಿಕೊಂಡಿದ್ದಾರೆ.

ಇನ್ನು ನಿರ್ದೇಶಕ ನಾಗತಿಹಳ್ಳೀ ಚಂದ್ರಶೇಖರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇವರಿಬ್ಬರ ಫೋಟೋ ಒಂದನ್ನ ಪೋಸ್ಟ್ ಕೂಡಾ ಮಾಡಿದ್ದಾರೆ. ಜೊತೆಗೆ ಇದಕ್ಕೆ ಅಡಿಬರಹವನ್ನೂ ಹಾಕಿದ್ದಾರೆ. ಏನಂತಾ ಗೊತ್ತಾ…”..ನನಗೆ ಅಪಾರ ಭರವಸೆ ಇದೆ. ಈತ ಕನ್ನಡಕ್ಕೆ ಮಾತ್ರವಲ್ಲ, ಭವಿಷ್ಯದಲ್ಲಿ ಬಹುಭಾಷೆಗಳಲ್ಲಿ ನಾಯಕನಾಗಿ ಪ್ರಕಟಗೊಳ್ಳಲಿರುವ ಪ್ರತಿಭೆ. ಈತನ ಶರೀರವೂ – ಶಾರೀರವೂ ಅನನ್ಯ. ನಮ್ಮ ಹೆಸರಿಡದ ಇಂಗ್ಲೆಂಡ್ನಲ್ಲಿ ಚಿತ್ರೀಕರಣಗೊಂಡ ಸಿನಿಮಾದ ನಾಯಕ  ವಿಶಿಷ್ಟ, ಸ್ವಾದಿಷ್ಟವೀ ವಸಿಷ್ಠ ಸಿಂಹ…!,  ಕಾದು ನೋಡಿ ಈತನ ಘರ್ಜನೆಯನ್ನು… ಇನ್ನು ಇವ ಖಳನಲ್ಲ ..ನಾಯಕ…ನಾಯಕ..!”, ಅಂತಾ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Tags