ಸುದ್ದಿಗಳು

ಬಿಡುಗಡೆಗೆ ತಯಾರಾದ ‘ವೇಷಧಾರಿ’…!

'ವೇಷಧಾರಿ' ಎಂಬ ಕಾದಂಬರಿಯನ್ನೇ ಚಿತ್ರಕಥೆಯನ್ನಾಗಿ ಹೆಣೆದಿದ್ದಾರೆ

ಪ್ರಪಂಚದಲ್ಲಿ ಮುಖವಾಡಗಳನ್ನ ಧರಿಸಿ ಜನರಿಗೆ ಮೋಸ ಮಾಡುವ ಜನರೇ ಹೆಚ್ಚಾಗಿದ್ದಾರೆ, ಅದು ಅವರ ನಿಜವಾದ ವೇಷವಲ್ಲ ಅವರ ಅಸಲಿ ಮುಖವಾಡವೇ ಬೇರೆ ಇದೆ ಎಂದು ಹೇಳಲು ಹೊರಟಿರುವ ಚಿತ್ರ ಈ ವೇಷಧಾರಿ.

ಬೆಂಗಳೂರು, ಸೆ.06: ಹೆಣ್ಣು ಹೊನ್ನು ಮಣ್ಣು ಇವು ತಾನಾಗಿಯೇ ಒಲಿಯಬೇಕು. ಇವುಗಳ ಹಿಂದೆ ಬೆನ್ನು ಹತ್ತಿ ಹೋದ್ರೆ ಅನುಭವಿಸೋ, ಎದುರಿಸೊ ಸಮಸ್ಯೆಗಳು ನೂರೆಂಟು. ಇದೆ ಎಳೆಯನ್ನಿಟ್ಟುಕೊಂಡು ಚಿತ್ರವೊಂದು ಗಾಂಧಿನಗರದಲ್ಲಿ ಸದ್ದು ಮಾಡಲು ತಯಾರಾಗಿದೆ, ಈ ಕುರಿತ ಚಿತ್ರದ ಟೀಸರ್‌ವೊಂದನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ಚಿತ್ರೀಕರಣವೆಲ್ಲ ಮುಗಿಸಿ ತೆರೆಗೆ ಬರಲು ತಯಾರಾಗಿದೆ. ಈ  ಕುರಿತು ಮಾಹಿತಿ ಇಲ್ಲಿದೆ ನೋಡಿ.

ವಿಕ್ರಮಾದಿತ್ಯಗೆ ಇದು ಮೊದಲ ನಿರ್ದೇಶನದ ಚಿತ್ರ.

ವೇಷಧಾರಿ… ಸದ್ಯ ಚಿತ್ರದ ಟೀಸರ್ ಬಿಡುಗಡೆ ಮಾಡಿರೋ ಚಿತ್ರತಂಡ, ಚಿತ್ರಕ್ಕೆ ವಿಕ್ರಮಾದಿತ್ಯ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಆರ್ಯನ್, ಶೃತಿ ಮತ್ತು ಸೋನಮ್ ನಾಯಕ ನಾಯಕಿಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ತಾವೆ ಬರೆದು ಬಿಡುಗಡೆ ಮಾಡಿದ ವೇಷಧಾರಿ ಎಂಬ ಕಾದಂಬರಿಯನ್ನೇ ಚಿತ್ರಕಥೆಯನ್ನಾಗಿ ಹೆಣೆದಿದ್ದಾರೆ ನಿರ್ದೇಶಕ ವಿಕ್ರಮಾದಿತ್ಯ.ಚಿತ್ರಕಥೆ

ಪ್ರಪಂಚದಲ್ಲಿ ಮುಖವಾಡಗಳನ್ನ ಧರಿಸಿ ಜನರಿಗೆ ಮೋಸ ಮಾಡುವ ಜನರೇ ಹೆಚ್ಚಾಗಿದ್ದಾರೆ, ಅದು ಅವರ ನಿಜವಾದ ವೇಷವಲ್ಲ ಅವರ ಅಸಲಿ ಮುಖವಾಡವೇ ಬೇರೆ ಇದೆ ಎಂದು ಹೇಳಲು ಹೊರಟಿರುವ ಚಿತ್ರ ಈ ವೇಷಧಾರಿ. ಚಿತ್ರದ ನಾಯಕ ಆರ್ಯನ್ ಹೆಣ್ಣು ಹೊನ್ನು ಮಣ್ಣು ಇವುಗಳ ಬೆನ್ನ ಬೀಳುತ್ತಾನೆ, ಆಸೆಪಟ್ಟಾಗ ಇದಾವುದು ನಮಗೆ ಸಿಗುವುದಿಲ್ಲ, ಇದಾವುದು ಬೇಡ ಎಂದು ಎಲ್ಲವನ್ನು ತ್ಯಜಿಸಿದಾಗ ಅದಾಗೆ ನಮ್ಮನ್ನು ಹಿಂಬಾಲಿಸುತ್ತೆ, ಇದೆಲ್ಲದರ ಮದ್ಯೆ ನಾಯಕ ಹೇಗೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾನೆ ಎಂಬುದನ್ನು ವೇಷಧಾರಿ ಮೂಲಕ ಹೇಳ ಹೊರಟಿದೆ ಚಿತ್ರತಂಡ.

ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ಸಕ್ರಿಯವಾದ ಚಿತ್ರ

ಬಹುತೇಕ ಚಿತ್ರೀಕರಣವನ್ನು ಮುಗಿಸಿರುವ ‘ವೇಷಧಾರಿ’ ಚಿತ್ರ ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ಸಕ್ರಿಯವಾಗಿದೆ, ಮುಂದಿನ ತಿಂಗಳು ಚಿತ್ರವನ್ನು ತೆರೆಯ ಮೇಲೆ ತರುವ ಪ್ಲಾನ್ ಚಿತ್ರತಂಡದ್ದಾಗಿದೆ. ಸದ್ಯ ಚಿತ್ರದ ಟೀಸರ್ ಮೂಲಕ ಪ್ರೇಕ್ಷಕರ ಮುಂದೆ ಬಂದಿರುವ ವೇಷಧಾರಿ ಚಿತ್ರ ತೆರೆಯ ಮೇಲೆ ಬಂದ ನಂತರ ಯಾವ ರೀತಿ ಕಮಾಲ್ ಮಾಡುಲಿದೆ ಅಂತಾ ಕಾದುನೋಡಬೇಕು.

Tags

Related Articles