ಸುದ್ದಿಗಳು

ಸಮ್ಮಿಶ್ರ ಸರ್ಕಾರ ಉರುಳಿಸಲು ‘ರಾಜಕುಮಾರ’ ಸಿನಿಮಾ ನಿರ್ಮಾಪಕರ ಸಂಚು?

ಬೆಂಗಳೂರು, ಸೆ.14: “ರಾಜಕುಮಾರ”  ಕನ್ನಡ ಸಿನಿಮಾ ರಂಗದಲ್ಲಿ ಇಂಥದ್ದೊಂದು ಸಿನಿಮಾ ಬಂತಲ್ಲಪ್ಪಾ ಅಂತ ಪ್ರೇಕ್ಷಕರು ಖುಷಿಯಿಂದ ನೋಡಿದಂಥ ಚಿತ್ರ .ಯಾವುದೇ ಸ್ಟಾರ್ ವಾರ್ ಇಲ್ಲದೆ , ಎಲ್ಲ ವರ್ಗದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ನೋಡಿದ ಸಿನಿಮಾ . ಪ್ರೇಕ್ಷಕರ ಮನಸ್ಸನ್ನು ಮೆಚ್ಚಿಸುವ ಜೊತೆಯಲ್ಲಿ ಸಾಕಷ್ಟು ಪ್ರಶಸ್ತಿಯನ್ನು ಪಡೆದುಕೊಂಡ ಚಿತ್ರ ‘ರಾಜಕುಮಾರ’.

ಅದಷ್ಟೇ ಅಲ್ಲದೆ ಪುನೀತ್ ರಾಜ್ ಕುಮಾರ್ ವೃತ್ತಿ ಜೀವನದಲ್ಲೇ ಒಂದು ಮಹತ್ವದ ಬದಲಾವಣೆಯನ್ನು ತಂದುಕೊಟ್ಟಂತಹ ಸಿನಿಮಾ . ಚಿತ್ರ  ಬಿಡುಗಡೆಯಾಗಿ ಪ್ರಶಸ್ತಿ ಪಡೆದುಕೊಂಡು ಬಾಕ್ಸ್ ಆಫೀಸ್ ನಲ್ಲೂ ಸಾಕಷ್ಟು ಸದ್ದು ಮಾಡಿದ್ದು ಆಯಿತು ಆದರೆ ಈಗೇಕೆ ಈ ಸಿನಿಮಾ ವಿಚಾರ ಅಂತೀರಾ ವಿಷಯ ಇದೆ.‘ರಾಜಕುಮಾರ’ ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರು

ಸದ್ಯ ರಾಜ್ಯದಲ್ಲಿ ಹಾಟ್ ಟಾಪಿಕ್ ಆಗಿರುವಂತಹ ಸಮ್ಮಿಶ್ರ ಸರ್ಕಾರ ಉರುಳುತ್ತೆ ಎನ್ನುವುದಕ್ಕೂ “ರಾಜಕುಮಾರ” ಸಿನಿಮಾಗೂ ಸಂಬಂಧವಿದೆ . ಸಮ್ಮಿಶ್ರ ಸರ್ಕಾರವನ್ನು ಉರುಳಿಸುವಲ್ಲಿ ರಾಜಕುಮಾರ ಸಿನಿಮಾದ ನಿರ್ಮಾಪಕರು ಕೂಡ ಕೈ ಜೋಡಿಸಿದ್ದಾರೆ ಎಂಬ ವಿಚಾರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಹೊರ ಹಾಕಿದ್ದಾರೆ . ಸರ್ಕಾರ ಉಳಿಸುವ ಕಿಂಗ್ ಪಿನ್ ಗಳಲ್ಲಿ ಸಿನಿಮಾ ನಿರ್ಮಾಪಕರಾದ ವಿಜಯ್ ಕಿರಗಂದೂರು ಅವರ ಹೆಸರು ಕೂಡ ಸೇರಿಕೊಂಡಿದೆ. ಮಲ್ಲೇಶ್ವರಂ ಶಾಸಕರಾದ ಅಶ್ವತ್ಥ್ ನಾರಾಯಣ್ ಹಾಗೂ ವಿಜಯ ಕಿರಗಂದೂರು ಸಂಬಂಧಿಕರು , ಆದ್ದರಿಂದ ಸಮ್ಮಿಶ್ರ ಸರ್ಕಾರ ಉರುಳಿಸಲು ವಿಜಯ್ ಕಿರಗಂದೂರು ಕೈಹಾಕಿದ್ದಾರೆ ಎನ್ನುವ ವಿಚಾರವನ್ನು ಕುಮಾರಸ್ವಾಮಿ ತಿಳಿಸಿದ್ದಾರೆ .ವಿಜಯ್ ಕಿರಗಂದೂರು ಈ ಹಿಂದೆ “ನಿನ್ನಿಂದಲೇ”, “ ರಾಜಕುಮಾರ” , “ಮಾಸ್ಟರ್ ಪೀಸ್” ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಸದ್ಯ ರಾಕಿಂಗ್ ಸ್ಟಾರ್ ಯಶ್ ಅಭಿನಯದ’ ಕೆಜಿಎಫ್’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Tags