ಸುದ್ದಿಗಳು

ಯಶ್ ತಾಯಿಗೆ ಬಾಡಿಗೆ ಕೊಡುವಂತೆ ಹೈಕೋರ್ಟ್ ಆದೇಶ…!

ನುಂಗಲಾರದ ತುತ್ತಾದ ಹೈಕೋರ್ಟ್ ತೀರ್ಪು

ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಇನ್ನು ಪ್ರತಿ ತಿಂಗಳು ೪೦  ಸಾವಿರ ರೂಪಾಯಿ ಬಾಡಿಗೆ ನೀಡುವಂತೆ ಪೊಲೀಸರು ರಾಜಿ ಮಾಡಿದ್ದರು. ಆದ್ರೆ ಅದಾದ ನಂತರವೂ ಬಾಡಿಗೆ ನೀಡದೆ ಸತಾಯಿಸಿದ್ದರು ಅಂತ ದೂರು ದಾರರು ಆರೋಪಿಸಿದ್ದಾರೆ.

ಬೆಂಗಳೂರು, ಸೆ.06: ಮನೆ ಬಾಡಿಗೆ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದ ಯಶ್ ಕುಟುಂಬ ಇದೀಗ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ. ಮನೆ ವಿವಾದಕ್ಕೆ ಸಂಬಂಧಿಸಿದಂತೆ ಸೇಷನ್ಸ್ ಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿರೋ ಹೈಕೋರ್ಟ್ ವಿಭಾಗೀಯ ಪೀಠ ಯಶ್ ತಾಯಿ ಪುಷ್ಪಾವತಿಗೆ ಬಾಡಿಗೆ ಕಟ್ಟುವಂತೆ ಸೂಚನೆ ನೀಡಿದೆ.ಮನೆ ಮಾಲೀಕರ ಆರೋಪ

 

ಹೌದು, ​ಬನಶಂಕರಿಯ 3ನೇ ಹಂತದ ಕತ್ರಿಗುಪ್ಪೆಯಲ್ಲಿರುವ ಮುನಿಪ್ರಸಾದ ಹಾಗೂ ಡಾ. ವನಜಾ ಅವರ ಮನೆಯನ್ನು 2010ರ ಅಕ್ಟೋಬರ್ ನಲ್ಲಿ 11 ತಿಂಗಳ ಅವಧಿಗೆ ಭೋಗ್ಯಕ್ಕೆ ಪಡೆದಿದ್ದ ಯಶ್ ಕುಟುಂಬ. 2011ರಲ್ಲಿ ಭೋಗ್ಯದ ಅವಧಿ ಮುಗಿದ ಬಳಿಕ ಯಶ್ ತಾಯಿ ಅಲ್ಪಸ್ವಲ್ಪ ಬಾಡಿಗೆ ಕೊಟ್ಟ ನಂತರ  ಆ ಮನೆಯಲ್ಲಿಯೇ ವಾಸ ಮುಂದುವರೆಸಿದ್ದರು. ಆದ್ರೆ ಬಾಡಿಗೆ ಕೊಟ್ಟ ಮಾಲೀಕರು ಎಷ್ಟೇ ಹೇಳಿದ್ರು ಮನೆ ಕಾಲಿ ಮಾಡಿರಲಿಲ್ಲ. ಹಾಗಾಗಿ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಇನ್ನು ಪ್ರತಿ ತಿಂಗಳು ೪೦  ಸಾವಿರ ರೂಪಾಯಿ ಬಾಡಿಗೆ ನೀಡುವಂತೆ ಪೊಲೀಸರು ರಾಜಿ ಮಾಡಿದ್ದರು. ಆದ್ರೆ ಅದಾದ ನಂತರವೂ ಬಾಡಿಗೆ ನೀಡದೆ ಸತಾಯಿಸಿದ್ದರು ಅಂತ ದೂರು ದಾರರು ಆರೋಪಿಸಿದ್ದಾರೆ.ಈ ವಿಚಾರ ಸಂಬಂಧ ವಿಚಾರಣೆಯನ್ನು ಹೈಕೋರ್ಟ್ ಕೈಗೆತ್ತಿಕೊಂಡಿದೆ. ಕೂಡಲೇ ಹಣ ನೀಡಿದರೆ, ಮಾರ್ಚ್ 31ರವರೆಗೆ ಅದೇ ಮನೆಯಲ್ಲಿ ಮುಂದುವರೆಯಬಹುದು. ಇಲ್ಲದಿದ್ದಲ್ಲಿ ಡಿಸೆಂಬರ್​ಗೆ ಮನೆ ಖಾಲಿ ಮಾಡಲು ಸಹ ವಿಭಾಗೀಯ ಪೀಠ ಆದೇಶಿಸಿದೆ. ಸದ್ಯ ಇದೀಗ ಮತ್ತೆ ಈ ವಿಚಾರ ರಾಕಿಂಗ್ ಸ್ಟಾರ್ ಗೆ ನುಂಗಲಾರದ ತುತ್ತಾಗಿದೆ.

 

Tags

Related Articles