ಸುದ್ದಿಗಳು

ತಮಿಳುನಾಡಿನಲ್ಲಿ ಯಶ್ ಹವಾ

ಬೆಂಗಳೂರು, ಸೆ.14: ತಮಿಳುನಾಡಿನಲ್ಲೂ ಯಶ್ ತಮ್ಮ ಹವಾ ಎಬ್ಬಿಸಿದ್ದಾರೆ. ತಮಿಳುನಾಡು ಪೋಸ್ಟರ್ ಗಳಲ್ಲಿ ಯಶ್ ಪೋಟೋ ಎದ್ದು ಕಾಣುತ್ತಿದೆ.

ಸಿನಿಮಾ ಸ್ಟಾರ್ ನಟರು ಅಂದರೆ ಅಭಿಮಾನಿಗಳು ಸಾಮಾನ್ಯ. ಕನ್ನಡ ಭಾಷೆಯಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ ನಟ ಯಶ್. ಕಿರುತೆರೆಯ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಈ ನಟ ಇದೀಗ ಸ್ಟಾರ್ ನಟರ ಸಾಲಿನಲ್ಲಿ ನಿಂತು, ಕನ್ನಡ ಸಿನಿಮಾ ರಂಗದಲ್ಲಿ ಬೇರು ಬಿಟ್ಟಿರುವ ನಾಯಕ ನಟ ಅಂದರೆ ತಪ್ಪಾಗಲಾರದು. ಈಗಾಗಲೇ ಕನ್ನಡಿಗರು ಅಷ್ಟೆ ಅಲ್ಲದೆ. ಹೊರ ದೇಶಗಳಲ್ಲೂ ಅಭಿಮಾನಿಗಳು ಇರುವುದು  ಗೊತ್ತಿರುವ ವಿಚಾರ. ಇದೀಗ ಈ ನಟ ತಮಿಳು ನಾಡಿನಲ್ಲೂ ಹವಾ ಸೃಷ್ಟಿ ಮಾಡಿದ್ದಾರೆ.ಯಶ್ ಕನ್ನಡ ಸಿನಿಮಾ ಬಿಟ್ಟು ಬೇರಾವ ಭಾಷೆಯಲ್ಲೂ ನಟಿಸಿಲ್ಲ. ಕನ್ನಡಕ್ಕಾಗಿಯೇ ತಮ್ಮ ತನು ಮನ ಅರ್ಪಿಸಿದ್ದಾರೆ. ಹಾಗಂತ ಇವರು ಭೇರೆ ಭಾಷೆಯ ವಿರೋಧಿಯೂ ಅಲ್ಲ. ಕಷ್ಟ ಅಂತ ಬಂದಾಗ ಯಾವುದೇ ರಾಜ್ಯ ಇರಲಿ ಯಾವುದೇ ಭಾಷೆ ಇರಲಿ ಸಹಾಯ ಹಸ್ತ ಚಾಚಿದ್ದಾರೆ. ಈಗಾಗಲೇ ಸಾಮಾಜಿಕ ಕಾರ್ಯದಲ್ಲೂ ತಮ್ಮನ್ನ ತಾವು ತೊಗಡಿಸಿಕೊಂಡಿದ್ದಾರೆ. ವಿಚಾರ ಏನಪ್ಪಾ ಅಂದರೆ ಈ ನಟ ತಮಿಳಿಗರ ಮನ ಗೆದ್ದಿದ್ದಾರೆ. ತಮಿಳು ನಾಡಿನ ಪೋಸ್ಟರ್‌ಗಳಲ್ಲಿ ಈ ನಟನ ಪೋಟೋ ಇದೆ.ಈಗಾಗಲೇ ಆಗಷ್ಟ್ ೧೫ ರಂದು ಸ್ವಾತಂತ್ರ ದಿನಾಚರಣೆ ಅಂಗವಾಗಿ ಹಾಕಿದ್ದ ಪೋಸ್ಟರ್ ಒಂದರಲ್ಲಿ ಈ ನಟನ ಪೋಟೋ ಇದೆ. ಇದನ್ನು ನೋಡಿದರೆ ಎಲ್ಲ ಕಲಾವಿದರು ಒಂದೇ ಎನ್ನವು  ಸಂದೇಶ ಸಾರುತ್ತಿರುವುದಂತೂ ಸತ್ಯ ಎಂಬಂತಾಗಿದೆ.

Tags