ಸುದ್ದಿಗಳು

ಈ ಫೋಟೋದಲ್ಲಿರುವ ಸ್ಯಾಂಡಲ್ ವುಡ್ ನಟರು ಯಾರು ಗೊತ್ತಾ?

ಈಗ ಸ್ಯಾಂಡಲ್ ವುಡ್ ನ ಇಬ್ಬರು ಘಟಾನುಘಟಿ ನಟರ ಬಾಲ್ಯದ ಫೋಟೋ ಜಾಲಾತಾಣದಲ್ಲಿ ಹರಿದಾಡುತ್ತಿದೆ.

ಬೆಂಗಳೂರು,ಜು.23: ಈ ಬಾಲ್ಯದ ನೆನಪುಗಳೇ ಹಾಗೆ ನಮ್ಮನ್ನ ಅನೇಕ ಭಾರಿ ಕಾಡುತ್ತಿರುತ್ತವೆ. ಅದು ಒಂದು ಥರಾ ಮಧುರ ನೆನಪು, ಎಲ್ಲರಿಗೂ ಸದಾ ಮರುಕಳಿಸುತ್ತಲೇ ಇರುತ್ತವೆ. ಬಾಲ್ಯದ ಕ್ಷಣಗಳು ಒಮ್ಮೆ ಕಣ್ಣ ಮುಂದೆ ಬಂದರೆ ಸಾಕು ಹಾಗೇ ಅದೇ ಲೋಕದಲ್ಲಿ ಕಳೆದು ಹೋಗುತ್ತೇವೆ.  . ಆದರಲ್ಲೂ ಸೆಲೆಬ್ರಿಟಿಗಳ ಬಾಲ್ಯದ ಜೀವನದ ಬಗ್ಗೆ ಅಭಿಮಾನಿಗಳಿಗೆ ಕುಊಹಲ ಇದ್ದೇ ಇರುತ್ತದೆ.

ಬಾಲ್ಯದ ನೆನಪು

ಈಗ ಸ್ಯಾಂಡಲ್ ವುಡ್ ನ ಇಬ್ಬರು ಘಟಾನುಘಟಿ ನಟರ ಬಾಲ್ಯದ ಫೋಟೋ ಜಾಲಾತಾಣದಲ್ಲಿ ಹರಿದಾಡುತ್ತಿದೆ. ಆ ನಟರು ಯಾರು ಎಂಬುದನ್ನು ಆ ಫೋಟೋ ನೋಡಿದಾಗ ಕೊಂಚ ಗುರುತು ಹಿಡಿಯಲು ಕಷ್ಟವಾದರೂ ಸೂಕ್ಷ್ಮವಾಗಿ ಗಮನಿಸಿದರೆ ಹುರುತು ಹಿಡಿಯಬಹುದು.

ಈ ಫೋಟೋದಲ್ಲಿ ಖ್ಯಾತ ನಟರುಗಳಾದ ಕಿಚ್ಚ ಸುದೀಪ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಚಿಕ್ಕವರಾಗಿರುವಾಗ ಜೊತೆಗಿರುವ ಚಿತ್ರ ಇದಾಗಿದ್ದು, ಸಮಾರಂಭವೊಂದಕ್ಕೆ ಇಬ್ಬರು ಹೋಗಿದ್ದ ವೇಳೆ ಈ ಚಿತ್ರ ತೆಗೆದಿರಬಹುದೆನ್ನಲಾಗಿದೆ. ಈ ಫೋಟೋವನ್ನ ನೋಡಿದರೆ ಮತ್ತೆ ಈ ನಟರಿಗೆ ತಮ್ಮ ಹಳೆಯ ಮಧುರ ನೆನೆಪು ಮರುಕಳಿಸುವುದಂತೂ ಸುಳ್ಳಲ್ಲ!!

 

Tags