ಸುದ್ದಿಗಳು

ಬಾಲನಟಿಯಾಗಿ ಪುಟಾಣಿ ಐಶ್ವರ್ಯಾ ಉಪೇಂದ್ರ !

ಚಂದನವನದ ಅನೇಕ ಬಾಲ ನಟ, ನಟಿಯರಾದವರು ಇಂದು ಖ್ಯಾತ ನಟರಾಗಿ ಖ್ಯಾತಿ ಪಡೆದಿದ್ದಾರೆ. ಜೊತೆಗೆ  ಸೂಪರ್ ಸ್ಟಾರ್ಸ್ ಆಗಿದ್ದಾರೆ. ಚಿಕ್ಕಂದಿನಿಂದಲೆ ಬಣ್ಣ ಹಚ್ಚಿ ನಟನೆ ಮಾಡಿದ ಎಷ್ಟೋ ಮಂದಿ ಇಂದು ಬಹುಭಾಷಾ ತಾರೆಗಳಾಗಿ ಮೆರೆಯುತ್ತಿದ್ದಾರೆ.

ಬೇಬಿ ಶಾಮಿಲಿ ಯಾರಿಗೆ ಗೊತ್ತಿಲ್ಲ ಹೇಳಿ ಬೇಬಿ ಶಾಮಿಲಿ ಬಾಲ್ಯದಲ್ಲಿ ಮಾಡಿದ ಸಿನಿಮಾಗಳು ಇಂದಿಗೂ ಎಲ್ಲರಿಗೂ ಫೇವರೇಟ್. ಇನ್ನು ನಮ್ಮ ಚಿನ್ನಾರಿ ಮುತ್ತ ವಿಜಯ್‌ ರಾಘವೇಂದ್ರ ಕೂಡ ಬಾಲ್ಯದಿಂದಲೇ ಬಣ್ಣ ಹಚ್ಚಿ  ಪ್ರಶಸ್ತಿ ಪಡೆದ ಪ್ರತಿಭೆ. ಇಂತಹ ನಟರನ್ನು ಕೊಟ್ಟ ನಮ್ಮ ಸ್ಯಾಂಡಲ್‌ ವುಡ್‌ ನಲ್ಲಿ ಅನೇಕ ಬಾಲ್ಯ ಪ್ರತಿಭೆಗಳು ಬೆಳೆದು ದೊಡ್ಡ ಪ್ರತಿಭೆಗಳಾಗಿ ನಿಂತಿವೆ. ಆ ಸಾಲಿಗೆ ಈಗ ಐಶ್ವರ್ಯಾ ಸೇರಲಿದ್ದಾರೆ. ಇದು ಯಾರು ಐಶ್ವರ್ಯಾ ಅಂತೀರಾ . ಐಶ್ವರ್ಯಾ ಯಾರು ಅಲ್ಲ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕ ಮಗಳು ಕಣ್ರೀ.

ಉಪೇಂದ್ರ ಮತ್ತು ಪ್ರಿಯಾಂಕ ಮಗಳು ಐಶ್ವರ್ಯಾ ಉಪೇಂದ್ರ ಇದೇ ಮೊದಲ ಬಾರಿಗೆ ಲೋಹಿತ್ ನಿರ್ದೇಶನದ ಹೌರಾ ಬ್ರಿಡ್ಜ್‌ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸ್ಯಾಂಡಲ್ ವುಡ್‌ ಗೆ ಬಾಲನಟಿಯಾಗಿ ಪುಟಾಣಿ ಐಶ್ವರ್ಯಾ ಉಪೇಂದ್ರ ಎಂಟ್ರಿ ನೀಡಿದ್ದಾರೆ. ಚಂದನವನದಲ್ಲಿ ಮೊದಲ ಇನ್ನಿಂಗ್ಸ್  ಶುರು ಮಾಡಿದ್ದಾರೆ .

Tags

Related Articles

One Comment

Leave a Reply

Your email address will not be published. Required fields are marked *