ಸುದ್ದಿಗಳು

ಗ್ರಾಮೀಣ ಸೊಗಡಿನಲ್ಲಿ ‘ಆನೆಬಲ’ ದ ಅನಾವರಣ !

ಜನತಾ ಟಾಕೀಸ್ ಸಂಸ್ಥೆ ಯಿಂದ ನಿರ್ಮಾಣವಾಗುತ್ತಿರುವ ” ಆನೆಬಲ”  ಚಿತ್ರವು ಹಲವು ಕಾರಣಕ್ಕೆ ಗಮನ ಸೆಳೆಯುತ್ತಿದೆ

ಒಂದು ವಿಶೇಷ ಚಿತ್ರಕತೆಗೆ:- ಈ ಚಿತ್ರದ ಕಥೆಯು ಹಳ್ಳಿಯ ಪರಿಸರ, ಅಲ್ಲಿನ ಜನ ಜೀವನದಲ್ಲಿ ಹಾಸು ಹೊಕ್ಕಾಗಿರುವ ಕಲೆ,ಹಾಸ್ಯ,ನೋವು,ನಲಿವುಗಳ ಸಂಪೂರ್ಣ ಚಿತ್ರಣವನ್ನು ಅಲ್ಲಿನ ನೈಜ ಕಲಾವಿದರ ಮುಖಾಂತರ ಹೇಳಲು ಆನೆಬಲ ಚಿತ್ರತಂಡ ತಯಾರಿ ಮಾಡಿಕೊಂಡಿದೆ.

ಮತ್ತೊಂದು ಎಲ್ಲಾ ಪಾತ್ರಗಳು ನೈಜವಾಗಿ ಅಭಿನಯಿಸುತ್ತಿರುವುದು;-ಈ ಚಿತ್ರದ ಮತ್ತೊಂದು ವಿಶೇಷ ಎಂದರೆ ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಎಲ್ಲಾ ಕಲಾವಿದರು ಕೂಡ ಅಲ್ಲಿನ ಹಳ್ಳಿ ಪರಿಸರದಲ್ಲಿ ಹುಟ್ಟಿ ಬೆಳೆದು,ನೈಜ ಕಲೆಯನ್ನು ಮೈಗೂಡಿಸಿಕೊಂಡಿರುವಂತಹವರೇ. ಅಂತಹ ಹಲವಾರು ಪ್ರತಿಭೆಗಳನ್ನು ಹುಡುಕಿ ಒಂದು ಒಳ್ಳೆ ವೇದಿಕೆಯನ್ನು ‘ಆನೆಬಲ’ ಚಿತ್ರತಂಡ ಅವರಿಗೆ ಒದಗಿಸಿಕೊಟ್ಟಿದೆ.ಇದರಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ಚಿತ್ರತಂಡ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಾಗೇ ಜೀವ ತುಂಬಿರುವುದು ಎಲ್ಲರಿಗೂ ಖುಷಿ ನೀಡಿದೆ.

ಹೌದು ಈ ಚಿತ್ರದ ಕೇಂದ್ರ ಭಾಗವೇ ಗ್ರಾಮ;- ಹಳ್ಳಿ ಎಂದಾಕ್ಷಣ ಎಲ್ಲರಿಗೂ ನೆನಪಿಗೆ ಬರೋದು ಅಲ್ಲಿನ ಹಸಿರು ತುಂಬಿದ ವಾತಾವರಣ,ತಾಜಾ ಸೊಗಡಿನ ಕಲೆ,ಮುಗ್ಧ ಜನರ ಮುಖಗಳು,ಕೆರೆ ಕಟ್ಟೆಗಳು. ಇಂತಹ ಸುಂದರ ಪರಿಸರವನ್ನು ತೆರೆಯ ಮೇಲೆ ನೈಜವಾಗಿ ತರಬೇಕೆಂದರೆ ಛಾಯಾಗ್ರಹಣ ತುಂಬಾ ಮುಖ್ಯವಾಗಿರುತ್ತದೆ. ಅಂತಹ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಛಾಯಾಗ್ರಾಹಕ  ಬೆಟ್ಟೇಗೌಡರು ನಿರ್ವಹಿಸಿ ವಿಶೇಷವಾದ  ಫ಼್ರೇಮ್ ಇಟ್ಟು ಶೂಟ್ ಮಾಡಿದ್ದಾರೆ.

ಇನ್ನು ಒಂದು ಚಿತ್ರದ ನಿಜವಾದ ನಾಯಕ ಅಂದರೆ ಅದು ಆ ಸಿನಿಮಾದ ನಿರ್ದೇಶಕ. ಯಾಕೆಂದರೆ ಇಡೀ ಸಿನಿಮಾದ ಸಂಪೂರ್ಣ ಕಲ್ಪನೆ ಅವರ ಮನಸ್ಸಿನಲ್ಲಿರುತ್ತದೆ. ಇಂತಹ ಒಂದು ಗ್ರಾಮೀಣ ಹಿನ್ನೆಲೆಯಲ್ಲಿನ ಸುಂದರ ಚಿತ್ರವನ್ನು ಸೂನಗಹಳ್ಳಿ ರಾಜು ತುಂಬಾ ಅಚ್ಚುಕಟ್ಟಾಗಿ ತೆರೆಗೆ ತರಲೂ ಶ್ರಮ ಹಾಕಿದ್ದಾರೆ. ಅವರ ಕಲ್ಪನೆಯ ಕೂಸಾಗಿ ‘ಆನೆಬಲ’ ಅದ್ಭುತವಾಗಿ ಮೂಡಿಬರುತ್ತಿರುವುದು ಈ ಚಿತ್ರದ ಮತ್ತೊಂದು ವಿಶೇಷ. ನಿರ್ದೇಶಕ ಸೂನಗಹಳ್ಳಿ ರಾಜು ಅವರು ಇಡೀ ಚಿತ್ರವನ್ನು ಕ್ಯಾಂಡಿಡ್ ಫೋಟೋಗ್ರಫಿನಲ್ಲಿ ಶೂಟ್ ಮಾಡುತ್ತಿದ್ದು ನೈಜವಾಗಿ ಮೂಡಿ ಬರುತ್ತಿದೆ.

ಒಟ್ಟು ನಾಲ್ಕು ಹಾಡುಗಳಿದ್ದು ಈಗಾಗಲೇ ಎರಡು ಹಾಡುಗಳನ್ನ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಕಂಪೋಸ್ ಮಾಡಿದ್ದಾರೆ.ಡಾ.ವಿ.ನಾಗೆಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.

ಚಿತ್ರತಂಡ ಸಹಜವಾಗಿ ಬರಲು ಹಸಿರು ಮತ್ತು ಗ್ರಾಮಗಳ ವಿಶೇಷ ಸ್ಥಳಗಳನ್ನು ಹುಡುಕಿ ಶೂಟ್ ಮಾಡಲು ಸಿದ್ಧತೆ ಮಾಡಿಕೊಂಡಿದೆ.

ಹೊಸ ಬಗೆಯಲ್ಲಿ  ಈ ಚಿತ್ರ ಮೂಡಿ ಬರುತ್ತಿದ್ದು.ಗೆಳಯರಾದ ಹೆಚ್.ಕೆ.ಗಿರೀಶ್, ಲೀಲೇಶ್ , ಶರತ್ ರಾಮಣ್ಣ , ಎಂ.ಎಸ್.ರಘುನಂದನ್,  ಶಿವಮೂರ್ತಿ , ಬಿ.ಟಿ.ಮಹೇಶ್ ಸೇರಿ ಈ ಚಿತ್ರ ನಿರ್ಮಿಸುತ್ತಿದ್ದಾರೆ.

ಲೇಖನ:- ನಾಗೇಶ್ ಕಾರ್ತಿಕ್

 

Tags

Related Articles

Leave a Reply

Your email address will not be published. Required fields are marked *