ಸುದ್ದಿಗಳು

ಅರ್ಜುನ್ ಗೌಡ ಆದ ಪ್ರಜ್ವಲ್ ದೇವರಾಜ್ !

ಲಕ್ಕಿ ಶಂಕರ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅರ್ಜುನ್‌ ಗೌಡ ಎಂಬ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್‌ ಮೂರು ಶೇಡ್‌ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಅರ್ಜುನ್‌ ಗೌಡ ಆ್ಯಕ್ಷನ್‌ ಮತ್ತು ಲವ್‌ಸ್ಟೋರಿಯನ್ನು ಬೆರೆಸಿ ಮಾಡಿರುವ ಕಥೆಯಾಗಿದೆ

ಪ್ರಜ್ವಲ್‌ ದೇವರಾಜ್‌ ಅವರ ಸಿನಿಮಾ ಕೆರಿಯರ್‌ ನಲ್ಲಿ ಅತಿ ಹೆಚ್ಚು ಬಜೆಟ್‌ ನ ಸಿನಿಮಾ ಇದಾಗಲಿದ್ದು, ಕಲಾಸಿಪಾಳ್ಯ, ಲಾಕಪ್‌ ಡೆತ್‌,ಶಕ್ತಿಯಂತಹ ಆ್ಯಕ್ಷನ್‌ ಸಿನಿಮಾಗಳ ಸಾಲಿಗೆ ಈ ಚಿತ್ರವೂ ಸೇರಿಕೊಳ್ಳಲಿದೆ ಎನ್ನುತ್ತಾರೆ ನಿರ್ದೇಶಕ ಲಕ್ಕಿ ಶಂಕರ್‌.

ಸತತ ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದ ಪ್ರಜ್ವಲ್‌ ದೇವರಾಜ್‌ ಗೆ ಚೌಕ ಸಿನಿಮಾ ಒಂದೊಳ್ಳೆ ಬ್ರೇಕ್‌ ನೀಡಿತ್ತು. ಆ ನಂತರ ಅವರು ಸಿನಿಮಾಗಳ ಆಯ್ಕೆಯಲ್ಲಿ ಬಹಳ ಎಚ್ಚರ ವಹಿಸುತ್ತಿದ್ದಾರೆ. ಈಗ ಅರ್ಜುನ್‌ ಗೌಡ ಸಹ ಸ್ಕ್ರಿಪ್ಟ್‌ ಬಹಳ ವಿಶೇಷವಾಗಿದ್ದು, ಹಾಗಾಗಿ ಒಪ್ಪಿಕೊಂಡಿದ್ದಾರಂತೆ. ಈ ಸಿನಿಮಾಗೆ ಮುಗ್ಥವಾಗಿರುವ ಹುಡುಗಿ ನಾಯಕಿಯ ಪಾತ್ರಕ್ಕೆ ಬೇಕಾಗಿದ್ದು, ನಿರ್ದೇಶಕರು ಅದರ ಹುಡುಕಾಟದಲ್ಲಿ ಇದ್ದಾರೆ.

Tags

Related Articles