ಸುದ್ದಿಗಳು

ನಟಿಯಿಂದ ಸಂಘಟನೆ ಕಾರ್ಯಕರ್ತನಿಗೆ ಜೀವ ಬೆದರಿಕೆ

ಬೆಂಗಳೂರು, ಸೆ.14: ಇತ್ತೀಚಿನ ದಿನಗಳಲ್ಲಿ ನಟಿಯರಿಗೆ ಮೋಸ, ವಂಚನೆ ಆರೋಪಗಳು ಕೇಳಿ ಬರುತ್ತಿದ್ದವು.  ಆದರೆ ಈಗ ನಟಿಯಿಂದಲೇ ಸಂಘಟನೆ ಕಾರ್ಯಕರ್ತರೊಬ್ಬರಿಗೆ ಜೀವ ಬೆದರಿಕೆ ಬಂದಿದೆ.

ನಟಿಯಿಂದ ಜೀವ ಬೆದರಿಕೆ ಆರೋಪ

ಹೌದು,  ಆದಿಶಕ್ತಿ ಮಹಿಳಾ ಸಂಘದ ಕಾರ್ಯಕರ್ತನ ಮೇಲೆ ಚಿತ್ರ ನಟಿ ಸುಷ್ಮಿತಾ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಅಷ್ಟೆ ಅಲ್ಲದೆ ಹಣಕ್ಕಾಗಿ ಜೀವ ಬೆದರಿಕೆ ಹಾಕಿದ್ದಾರೆಂದು ಆದಿಶಕ್ತಿ ಮಹಿಳಾ ಸಂಘದ ಕಾರ್ಯಕರ್ತ ರಘು ಆರೋಪಿಸಿದ್ದಾರೆ. ರಘುವಿಗೆ ಹಲ್ಲೆ ಮಾಡಿಸಿ ನಂತರ ಅವರ ಕಾರು ಹಣವನ್ನು ಸುಲಿಗೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನು, ಈ ಹಿಂದೆ ನಟಿ ಸುಷ್ಮಿತಾ ಈ ಸಂಘವನ್ನು ಉದ್ಘಾಟನೆ ಮಾಡಿದ್ದರು. ಅಷ್ಟೆ ಅಲ್ಲ, ಕಾರ್ಯಕರ್ತ ರಘು ಒಬ್ಬರೇ ಹಣ ಮಾಡುತ್ತಿದ್ದಾರೆಂದು ಆರೋಪ ಕೂಡ ಮಾಡಿದ್ದರು. ಇದಾದ ನಂತರ ಇದೀಗ ಪ್ರಾಣ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ.

ನಟಿ ಸುಷ್ಮಿತಾ ವಿರುದ್ಧ ದೂರು ದಾಖಲು

ಇನ್ನು, ಈ ವಂಚನೆ ಕಥೆ ಸೆಪ್ಟೆಂಬರ್ ೨ನೇ ತಾರೀಖಿನಂದು ನಡೆದಿದೆ. ಬಸವೇಶ್ವರನಗರದ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿರುವುದು. ಇನ್ನು ಜೀವ ಬೆದರಿಕೆ ಅಷ್ಟೆ ಅಲ್ಲದೇ ಅವರ ಬಳಿ ಇದ್ದ ಕಾರು, ಹಣ ಸೇರಿದಂತೆ ಲ್ಯಾಪ್‌ಟಾಪ್ ದೋಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಇನ್ನು ಈ ವಿಚಾರವಾಗಿ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಚಿತ್ರನಟಿ ಸುಷ್ಮಿತಾ ಸೇರಿದಂತೆ ಒಟ್ಟು ೬ ಮಂದಿ ವಿರುದ್ಧ ದೂರನ್ನು ನೀಡಿದ್ದಾರೆ ರಘು.

ದೂರಿನಲ್ಲಿ ಏನೆಲ್ಲಾ ಉಲ್ಲೇಖ

ಇನ್ನು, ದೂರಿನಲ್ಲಿ ಸಂಘದ ಎಲ್ಲಾ ಹೊಣೆಯನ್ನು ನಾನೊಬ್ಬನೇ ಹೊತ್ತಿಕೊಳ್ಳಲು ಸಾಧ್ಯವಿಲ್ಲ, ಸಂಘಕ್ಕೆ ಬರುತ್ತಿದ್ದ ಹಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದೆ. ಸುಷ್ಮಿತಾ ತಾವು ನೀಡಿದ್ದ ಹಣವನ್ನು ಹಿಂದಿರುಗಿಸಬೇಕೆಂದು ಹೇಳಿದ್ದರು, ಇದರ ಜೊತೆಗೆ ಈ ಹಣದಲ್ಲಿ ನೀವೊಬ್ಬನೆ ದುಡ್ಡು ಪಡೆಯುತ್ತಿದ್ದೀಯ ಅಂತ ಆರೋಪಿಸಿದ್ದರು. ಅಷ್ಟೆ ಅಲ್ಲದೆ ನನ್ನ ಬಳಿ ಇರುವ ವಸ್ತುಗಳನ್ನು ದೋಚಿಕೊಂಡು ಜೀವ ಬೆದರಿಕೆ ಹಾಕಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಒಟ್ಟಿನಲ್ಲಿ ಈ ವಿಚಾರವಾಗಿ ನಟಿ ಸುಷ್ಮಿತಾ ಏನು ಮಾತನಾಡಿಲ್ಲ. ಸತ್ಯಾ ಸತ್ಯತೆ ಹೊರಬರಬೇಕೆಂದರೆ ತನಿಖೆ ನಡೆಯುವರೆಗೂ ಕಾಯಲೇಬೇಕು.

Tags

Related Articles