ಸುದ್ದಿಗಳು

ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಾಗಿ ಹಂಸಲೇಖ !

ಹಂಸಲೇಖ..ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ. 1973ರಲ್ಲಿ “ತ್ರಿವೇಣಿ” ಚಿತ್ರದ “ನೀನಾ ಭಗವಂತ” ಹಾಡಿನ ಮೂಲಕ ಗೀತ ರಚನೆಕಾರರಾಗಿ ಚಿತ್ರರಂಗವನ್ನು ಪ್ರವೇಶಿಸಿದ ಇವರು ಇದುವರೆಗೆ ಸಂಗೀತ , ಸಾಹಿತ್ಯ ಒದಗಿಸಿರುವ ಚಿತ್ರಗಳು ಮುನ್ನೂರಕ್ಕೂ ಹೆಚ್ಚು. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲೆಯಾಳಂ ಭಾಷಾ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ. ಹಂಸಲೇಖ, ಜೂನ್ 23, 1951 ರಲ್ಲಿ ಜನಿಸಿದ್ರು. ಇವರ ಮೂಲ ಹೆಸರು “ಗಂಗರಾಜು”.

ಹಂಸಲೇಖ ರವರ “ವಿಶ್ವರಂಗಭೂಮಿ ” ಎಂಬ ಪರಿಕಲ್ಪನೆ.

ಹಂಸಲೇಖರವರ “ವಿಶ್ವರಂಗಭೂಮಿ ” ಎಂಬ ಪರಿಕಲ್ಪನೆ ಎಂಬ ಕನಸನ್ನು ಸಾಕಾರ ಗೊಳಿಸುವ ನಿಟ್ಟಿನಲ್ಲಿ ಚೆನ್ನಪಟ್ಟಣದ ಬಳಿ ನರಸಿಂಹ ಸ್ವಾಮಿ ದೇವರ ಗುಡ್ಡದ ತಪ್ಪಲಲ್ಲಿ ವಸತಿ ಮತ್ತು ವಿದ್ಯಾಲಯ ನಿರ್ಮಾಣ ಸಾಗಿದೆ,ಇನ್ನು ಎರಡು ವರ್ಷದಲ್ಲಿ ಒಂದೂವರೆ ಸಾವಿರ ವಿದ್ಯಾರ್ಥಿಗಳು ಕಲೆ-ಶಿಕ್ಷಣದಲ್ಲಿ ತೊಡಗಿಸಿಕೊಳ್ಳುವ ಕನಸಿದೆ. ಆ ವಿದ್ಯಾರ್ಥಿಗಳು ಸೃಷ್ಟಿಸಲಿರುವ ಬೃಹತ್ ದೇಸಿ ಸೊಗಡಿನ ನೃತ್ಯ ರೂಪಕಗಳು ಅಲ್ಲಿ ಪ್ರದರ್ಶಿಸಲ್ಪಡುತ್ತವೆ. ಮೈಸೂರನ್ನು ನೋಡ ಬಯಸುವ ಪ್ರವಾಸಿಗರಿಗೆ ನಡುವಿನಲ್ಲಿಯೇ ಒಂದು ಸಾಂಸ್ಕೃತಿಕ ಲೋಕದ ದರ್ಶನವನ್ನು ಹಂಸಲೇಖರವರ “ವಿಶ್ವರಂಗಭೂಮಿ” ನೀಡಲಿದೆ. “ನಮನ”

ಇನ್ನೂ ಕೋಗಿಲೆ ಕಂಟ ಹಂಸಲೇಖ, ಕಥೆ, ಚಿತ್ರಕತೆ, ಸಂಭಾಷಣೆ ಹೀಗೆ ಹಲವು ರಂಗಗಳಲ್ಲಿ ತಮ್ಮ ಪ್ರತಿಭೆಯನ್ನ ತೋರ್ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

 

 

 

Tags