ಸುದ್ದಿಗಳು

ಹಂಸಲೇಖ ಬಗ್ಗೆ ಲವ್ಲಿ ಸ್ಟಾರ್ ಪ್ರೇಮ್ ಕಿರುನುಡಿ !

ಯೋಗವು ಓಮ್ಮೆ ಬರುವುದು ನಮಗೆ, ಯೋಗ್ಯತೆಯೊಂದೇ ಉಳಿವುದು ಕೊನೆಗೆ. ನಿಜ ಈ ಮಾತೆಷ್ಟು ಸತ್ಯ ಅಲ್ವಾ. ಆದ್ರೆ ಇವತ್ತಿಗೆ ಚಿತ್ರರಂಗದಲ್ಲಿ ಯೋಗ ಅನ್ನೋದು ಫೇವರಿಸಂ ಆಗಿದೆ. ಕಲೆಗಿಂತ ಕಾಂಚಾಣ ಮಾತನಾಡ್ತಿದೆ. ಯೋಗ್ಯತೆ ಜಸ್ಟ್‌ ವ್ಯಾಪಾರಕ್ಕಷ್ಟೇ ಸೀಮತವಾಗಿದೆ.ಆ ಯೋಗ್ಯತೆ ಇರೋರ ಪಾಲಿಗೆ ಪ್ರಶಸ್ತಿ, ಪುರಸ್ಕಾರಗಳೆಲ್ಲಾ ಮರೀಚಿಕೆಯಾಗಿದೆ. ಇದಕ್ಕೆ ಉದಾಹರಣೆಯಂದ್ರೆ, ನೆನಪಿರಲಿ ಪ್ರೇಮ್‌ ನಾದಬ್ರಹ್ಮನ ಹಂಸಲೇಖರ ವಿಚಾರವಾಗಿ ಬರೆದಿರೋ ಒಂದು ಕಿರುನುಡಿ.

ನನಗೆ ತಿಳಿದಂತೆ ೩೦೦ ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಿತ್ಯ ಹಾಗು ಸಂಗೀತ ನೀಡಿದ ಸಂಗೀತ ನಿರ್ದೇಶಕರು ಭಾರತದಲ್ಲಿ ಯಾರು ಇಲ್ಲ ಪ್ರಪಂಚದಲ್ಲಿ ಇದ್ದಾರೋ ಗೊತ್ತಿಲ್ಲ . ಆದರೆ ಸುವರ್ಣ ಕರ್ನಾಟಕದಲ್ಲಿ ಜೀವಂತ ದಂತ ಕಥೆಯಾಗಿ ಸಾಹಿತ್ಯ ಸಂಗೀತಕ್ಕೆ ಮತ್ತೊಂದು ಹೆಸರಾಗಿ ನನ್ನ ಗುರುಗಳಾದ ಹಂಸಲೇಖ ಸಾರ್‌ ಇದ್ದಾರೆ . ಅವರಿಗೆ ಬರಿ ಕರ್ನಾಟಕ ರತ್ನ ಅಲ್ಲದೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಬೇಕು ಎಂದು ಸುಮಾರು ವೇದಿಕೆಗಳಲ್ಲಿ ಪ್ರಸ್ತಾಪ ಮಾಡಿದ್ದೇನೆ ಆದರೆ ಸಂಬಂಧ ಪಟ್ಟ ಯಾರು ಇದರ ಬಗ್ಗೆ ಆಸಕ್ತಿ ತೋರುತ್ತಿಲ್ಲ . ಸೈಫ್ ಅಲಿ ಖಾನ್ ಅಂತ ನಟನಿಗೆ ಪದ್ಮಶ್ರೀ ಸಿಗುತ್ತದೆ ನಮ್ಮ ನಾದ ಬ್ರಹ್ಮನಿಗೆ ಸರ್ಕಾರ ಶಿಫಾರಸ್ಸು ಮಾಡುವುದಿಲ್ಲ ಎನ್ನುವುದು ನಾಚಿಕೆಗೇಡು .

ಗುರುಗಳೇ ಪ್ರಶಸ್ತಿ ಪುರಸ್ಕಾರಗಳನ್ನು ಮೀರಿ ಬೆಳೆದವರು ನೀವು ನಿಮಗೆ ಪ್ರಶಸ್ತಿ ಕೊಡದೆ ಇರುವುದು ಸರ್ಕಾರಗಳ ದೌರ್ಭಾಗ್ಯ .೬ ಕೋಟಿ ಕನ್ನಡಿಗರ ಹೃದಯ ಕಮಲ ಪ್ರಶಸ್ತಿ ಸದಾ ನಿಮಗೆ ಮೀಸಲು .ಚಿತ್ರರಂಗಕ್ಕೆ ನೂರಾರು ಸಂಗೀತ ನಿರ್ದೇಶಕರು ಆದರೆ ಕನ್ನಡ ಚಿತ್ರರಂಗಕ್ಕೆ ಒಬ್ಬರೇ ಸಾವಿಲ್ಲದ ಸಂಗೀತ ಸಾಗರ ಹಂಸಲೇಖ ಎಂದು ಹೇಳಲಾಗಿದೆ.

ಬೆಳೆಗಾರರು ಬೆಲೆಕಾಣಲಿ.. ಕಲೆಗಾರರು ನೆಲೆ ಕಾಣಲಿ

ಆದಾಗಲೇ, ಇದು ನಮ್‌ ಇಂಡಿಯಾ ಅಂತ ಹಂಸಲೇಖ ಬರೆದಿರೋ ಒಂದು ಹಾಡಿನ ಸಾಲಿದೆ. ಆದ್ರೆ ನಿಜ ಹೇಳಬೇಕು ಅಂದ್ರೆ, ನಿಜವಾದ ಎಷ್ಟೋ ಕಲೆಗಾರರಿಗೆ ಇನ್ನೂ ನೆಲೆ ಸಿಕ್ಕಿಲ್ಲ. ಬೆಳೆಗಾರರಿಗೆ ಬೆಲೆಯೂ ಸಿಕ್ಕಿಲ್ಲ. ಅರ್ಥಾತ್‌ ಅಸಾಮಾನ್ಯ ಕಲಾಸಾಧಕರಿಗೆ ಇನ್ನೂ ಬೆಲೆ ಸಿಕ್ಕಿಲ್ಲ ಅಂದ್ರೆ ನೀವು ನಂಬಲೇ ಬೇಕು.

Tags