ಸುದ್ದಿಗಳು

ಜಗ್ಗೇಶ್ ರಿಂದ ಮತದಾರರಿಗೆ ಥ್ಯಾಂಕ್ಸ್ !

ಜಗ್ಗೇಶ್ ಬಿಜೆಪಿ ಅಭ್ಯರ್ಥಿಯಾಗಿ ಯಶವಂತಪುರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಆದರೆ ಈಗ ಆ ಕ್ಷೇತ್ರದಿಂದ ಸೋಲನ್ನು ಕಂಡಿದ್ದಾರೆ. ಜಗ್ಗೇಶ್ ಸುಮಾರು 45 ಸಾವಿರ ಮತಗಳ ಅಂತರದಿಂದ ಸೋಲನ್ನು ಕಂಡಿದ್ದಾರೆ. ಜಗ್ಗೇಶ್ ಚುನಾವಣೆಯ ಫಲಿತಾಂಶದಲ್ಲಿ ಮೂರನೇ ಸ್ಥಾನ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಜೆಡಿಎಸ್ ಪಕ್ಷದ ಜವರಾಯಿ ಗೌಡರಿದ್ದಾರೆ.

ಫಲಿತಾಂಶದಲ್ಲಿ ಕಡಿಮೆ ಮತ ಪಡೆದು ಸೋಲು ಕಂಡಿದ್ದಕ್ಕೆ ಬೇಸರ ಮತ್ತು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದು, ಕೋಟಿಗಟ್ಟಲೆ ಖರ್ಚು ಮಾಡಿ ಅವರು ಪಡೆದ ಮತ. ಯಾವುದು ಇಲ್ಲದೆ ಅಭಿಮಾನದಿಂದ ನಾನು ಪಡೆದ ಮತದ ಪ್ರತಿ ನಿಮಗಾಗಿ. ನನ್ನ ಪ್ರಕಾರ ಪ್ರೀತಿ ಅಂದರೆ ಇದೆ ನಾನು ಗಳಿಸಿರುವುದು. ಹೃದಯತುಂಬಿ ಬಂತು. ನನ್ನ ಬದುಕೆ ಹೀಗೆ ಸೋಲಿನ ಮೇಲೆ, ಸಿಂಹಾಸನ ಹಾಕಿ ಕೂರೋದು.   Frm ಶ್ರೀರಾಮಪುರ footpath to here my beautiful life journey.. . ಆಶಾವಾದ ಬದುಕು ಎಂದು ಬೇಸರದಿಂದ ಟ್ವೀಟ್ ಮಾಡಿದ್ದಾರೆ.

ಕಳೆದ ಚುನಾವಣೆಯಲ್ಲಿ 12 ಸಾವಿರ ಮತವಿದ್ದ ಯಶವಂತಪುರ. ಭಾ.ಜ.ಪ..ನನ್ನ 10ದಿನದ ಶ್ರಮಕ್ಕೆ.. ಹಾಗು ಹಣ ಹೆಂಡ ಹಂಚದೆ. ಕಲಾವಿದನೆಂಬ ಅಭಿಮಾನದಿಂದ 52,946 ಮತ ನೀಡಿದ ಯಶವಂತಪುರದ ಮಹನೀಯರಿಗೆ ಧನ್ಯವಾದ. ನಾನು ಸೋತರು ನನ್ನ ಮೇಲಿನ ಅಭಿಮಾನ ಗೆದ್ದಿದೆ. ಮೂರು ತಿಂಗಳ ಮೊದಲೇ ಅಖಾಡಕ್ಕೆ ಇಳಿಸಿದ್ದರೆ ಚಿತ್ರಣ ಬೇರೆ ಇರುತ್ತಿತ್ತು. ಆದರು ಹೆಮ್ಮೆಯಿದೆ ಎಂದು ಬರೆದುಕೊಂಡಿದ್ದಾರೆ.

ನಾನು 15 ದಿನದ ಅಭ್ಯರ್ಥಿ. ನನ್ನ ಪಲಿತಾಂಶಕ್ಕಿಂತ ನನಗೆ ನನ್ನ ಪಕ್ಷದ ಫಲಿತಾಂಶ ಮುಖ್ಯ. ರಾಯರ ದಯೆಯಿಂದ ಗಡಿ ತಲುಪಿದೆ ನನ್ನ ಪಕ್ಷ. ಸಂಭವಾಮಿ ಯುಗೇ ಯುಗೇ. ನನ್ನ ಪಕ್ಷ ಗೆಲ್ಲುತ್ತದೆ. ಅಂದ ಮೇಲೆ ನನ್ನ ಬಯಕೆ ಗೆದ್ದಿದೆ. ನಮ್ಮ ಮನೆ ಗದ್ದರೆ ಮನೆಯವರು ಗೆದ್ದಂತೆ. ನೆಮ್ಮದಿಯಾಗಿ ಬಾಳಿ ನಂಬಿಕೆಯಿಂದ ಬದುಕುವ ಈ 5 ವರ್ಷ. ಜೈ ಯಡಿಯೂರಪ್ಪ ಜೈ ಮೋದಿಜಿ ಎಂದು ಟ್ವೀಟ್ ಮಾಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *