ಸುದ್ದಿಗಳು

ಜಗ್ಗೇಶ್ ಸೋಲಲು ಕಾರಣಗಳೇನು ಗೊತ್ತಾ..?

ಸದ್ಯ ನೆನ್ನೆತಾನೆ ೧೦೧೮ ರ ಚುನಾವಣೆಯ ಫಲಿತಾಂಶ ಬಂದಿದೆ. ಆದರೆ ಕೆಲವೊಂದು ನಾಯಕರಿಗೆ ಕಹಿ ಸಿಕ್ಕಿದೆ. ಅದರಲ್ಲಿ ನಟ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್  ಕೂಡ ಸೋಲನ್ನು ಅನುಭವಿಸಿದ್ದಾರೆ. ಆದ್ರೆ ಜಗ್ಗೇಶ್ ಸೋಲಿಗೆ ಕಾರಣ ಏನು ಅನ್ನೋದ್ರ ಫೂಲ್ ಡೀಟೇಲ್ಸ್ ಇಲ್ಲಿದೆ..

ಹೌದು, ಜಗ್ಗೇಶ್ ಬಿಜೆಪಿ ಪಕ್ಷದ ಮುಖಂಡರಾಗಿದ್ದು ಕೊನೆ ಗಳಿಗೆಯಲ್ಲಿ ಟಿಕೆಟ್ ಹಂಚಿಕೆಯಾಯ್ತು. ಆದ್ರೆ ಸಿಕ್ಕ ಸಮಯಾಕಾಶವನ್ನ ಪ್ರಚಾರದಲ್ಲಿ ತೊಡಗಿಕೊಂಡಿದ್ದರು , ಆದರೆ ಜಗ್ಗೇಶ್ ಚುನಾವಣೆಯಲ್ಲಿ ಹಿನ್ನಡೆ ಪಡೆದುಕೊಂಡಿರುವುದರ ನೇರ ಹೊಣೆಯನ್ನ ಪಕ್ಷವೇ ಹೊತ್ತುಕೊಳ್ಳಬೇಕಾಗಿದೆ. ಸೋಲಿಗೆ ನಿಜವಾದ ಕಾರಣ ಬಹಿರಂಗ ಪಡಿಸಿದ ನಟ ಜಗ್ಗೇಶ್ ಅದೇ ಬಹುಮತ ಗಳಿಸಿದ್ದರೆ ಅದರ ಹೊಣೆ ಜಗ್ಗೇಶ್ ತೆಗೆದುಕೊಳ್ಳುತ್ತಿದ್ದರು.

ಇನ್ನು ಜಗ್ಗೇಶ್ ಸೋಲಿಗೆ ಪ್ರಮುಖ ಕಾರಣ ಅಂದ್ರೆ ತುಂಬಾ ದೊಡ್ಡ ಕ್ಷೇತ್ರ ಯಂಶವಂತಪುರ ಅತೀ ದೊಡ್ಡ ವಿಧಾನಸಭಾ ಕ್ಷೇತ್ರ ಯಶವಂತಪುರದಿಂದ ಆರಂಭವಾಗಿ ಹೆಮ್ಮಿಗೆಪುರ, ದೊಡ್ಡ ಬಿದರಕಲ್ಲು, ಹೇರೋಹಳ್ಳಿ, ಉಲ್ಲಾಳು, ಕೆಂಗೇರಿ ವರೆಗೂ ಕ್ಷೇತ್ರ ವಿಸ್ತಾರವಾಗಿದೆ.

ಕ್ಷೇತ್ರ ದೊಡ್ಡದಾಗಿರುವುದರಂದ ಪ್ರಚಾರಕ್ಕಾಗಿ ಸಾಕಷ್ಟು ದಿನಗಳು ಬೇಕಾಗುತ್ತೆ. ಆದರೆ ಯಶವಂತಪುರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ಬಿಜೆಪಿ ಪಕ್ಷ ತುಂಬಾ ನಿಧಾನ ಮಾಡಿತ್ತು. ಸಾಕಷ್ಟು ಕ್ಷೇತ್ರಗಳಲ್ಲಿರುವ ಸಮಸ್ಯೆಗಳನ್ನ ತಿಳಿದುಕೊಳ್ಳಲು ನವರಸನಾಯಕನಿಗೆ ಸಮಯ ಸಿಗಲಿಲ್ಲ. ಬಿಜೆಪಿ ಅವರ ಸುಳಿವಿಲ್ಲ ಶೋಭಾ ಕರಂದ್ಲಾಜೆ ನಂತರ ಯಶವಂತಪುರ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಯಾವುದೇ ಅಭ್ಯರ್ಥಿ ಆಗಲಿ ಅಥವಾ ಮುಖಂಡರಾಗಲಿ ಭೇಟಿ ನೀಡಿಲ್ಲ. ಹಾಗಾಗಿ ಅಲ್ಲಿಯ ಜನರು ಬಿಜೆಪಿ ಪಕ್ಷದವರನ್ನು ಮರೆತೇ ಬಿಟ್ಟಿದ್ದಾರೆ.

ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ಗೌಡ ವಿಜಯ ಸಾಧಿಸಿದ್ದರು ಹಾಗಾಗಿ ಸುಮಾರು ಐದಕ್ಕೂ ಹೆಚ್ಚು ವರ್ಷ ಬಿಜೆಪಿ ಪಕ್ಷದವರ ಪರಿಚಯ ಜನರಿಗೆ ಕಳೆದು ಹೋಗಿತ್ತು. ಅದಷ್ಟೇ ಅಲ್ಲದೆ ಪಕ್ಷದ ಪರವಾಗಿ ಮುನ್ನಡೆಸುವವರು ಯಾರು ಇಲ್ಲದ ಕಾರಣ ಕಾರ್ಯಕರ್ತರು ಕಣ್ಮರೆ ಆದರು.

ನಟ ಜಗ್ಗೇಶ್ ಅವರಿಗೆ ಯಶವಂತಪುರ ಹೊಸ ಕ್ಷೇತ್ರ. ಕ್ಷೇತ್ರ ಪರಿಚಯ ಮಾಡಿಕೊಂಡು ಅಲ್ಲಿಯ ಜನರ ಕಷ್ಟ ಸುಖಗಳನ್ನ ಅರಿತುಕೊಳಲು ಸಮಯ ಬೇಕಿತ್ತು. ನವರಸ ನಾಯಕನಿಗೆ ಕ್ಷೇತ್ರ ಮಾತ್ರ ಹೊಸತು ರಾಜಕೀಯ ಅಲ್ಲ ಎನ್ನುವುದನ್ನ ಅವರು ತೆಗೆದುಕೊಂಡಿರುವ ಮತಗಳಲ್ಲಿಯೇ ಸಾಬೀತು ಮಾಡಿದ್ದಾರೆ. ಎನ್ನುವುದು ಆ ಕ್ಷೇತ್ರದ ಜನರ ಅಭಿಪ್ರಾಯ.

ಒಟ್ನಲ್ಲಿ ಯಾವುದೇ ಪಾತ್ರವನ್ನು ನೀರು ಕುಡಿದಂತೆ ನಿಭಾಯಿಸುವ ಜಗ್ಗೇಶ್ ಗೆ ರಾಜಕಾರಣ ಅನ್ನೋದು ಅಷ್ಟು ಸುಲಭವನ್ನ ಅನ್ನೋದು ಗೊತ್ತಾಗಿದೆ.

 

Tags

Related Articles

Leave a Reply

Your email address will not be published. Required fields are marked *