ಸುದ್ದಿಗಳು

ಹಾಲಿವುಡ್ ಶೈಲಿಯ ಹೆಸರಿನೊಂದಿಗೆ “ಲೀಸ” ಎಂಟ್ರಿ !

“ಲೀಸ”  ಹೆಸರು ಕೇಳಿದ ತಕ್ಷಣ ಯಾವುದೋ ಹಾಲಿವುಡ್ ಸಿನಿಮಾ ಕನ್ನಡದಲ್ಲಿ ಬರ್ತಿದೆ ಅಂತ ನೀವೇನಾದ್ರು ಅಂದ್ಕೊಂಡ್ರೆ ನಿಮ್ಮ ಊಹೆ ಖಂಡಿತ ತಪ್ಪು.ಆದರೆ ಹಾಲಿವುಡ್ ಮಾದರಿಯಲ್ಲೇ ಒಂದು ಆಧುನಿಕ ಟ್ರೆಂಡ್ ನ ಹೆಸರನ್ನಿಟ್ಟುಕೊಂಡು ಕನ್ನಡದ ಕೆಲವು ಉತ್ಸಾಹಿ ಯುವಕರ ತಂಡ,ಉತ್ತಮ ಕಥೆ,ವಿಭಿನ್ನ ನಿರೂಪಣ ಶೈಲಿ ಹಾಗೂ ಉತ್ತಮ ತಂತ್ರಜ್ಞಾನಗಳ ಬಳಕೆಯೊಂದಿಗೆ “ಲೀಸ”ಅನ್ನೋ ಸಿನಿಮಾ ಸಂಪೂರ್ಣ ಚಿತ್ರೀಕರಣ ಮುಗಿಸಿಕೊಂಡು ತೆರೆಗೆ ಬರಲು ಸಜ್ಜಾಗಿ ನಿಂತಿದೆ.

ಈ ಸಿನಿಮಾವನ್ನು ಹಲವಾರು ಅನುಭವಿ ನಿರ್ದೇಶಕರುಗಳ ಜೊತೆ ಕೆಲಸ ಮಾಡಿರುವ ಮುತ್ತು ಎಂಬ ಯುವ ನಿರ್ದೇಶಕ ನಿರ್ದೇಶಿಸುತ್ತಿದ್ದು ಪಾರ್ವತಿ ಕೊರಳಿ ಪ್ರೊಡಕ್ಸನ್ ಅಡಿಯಲ್ಲಿ ಅವಿನಾಶ್, ಜನ್ ಕಟ್ಟಿ, ದಿವ್ಯಶ್ರೀ ,ಮುತ್ತು ಹಾಗೂ ದಯಾನಂದ್ ಎಂಬ ಸಮಾನ ಮನಸ್ಕ ಗೆಳೆಯರು ಕೂಡಿ ನಿರ್ಮಾಣ ಮಾಡುತ್ತಿರುವುದು ವಿಶೇಷ.

ಇನ್ನೂ ಈ ಸಿನಿಮಾಕ್ಕೆ ಸಿನಿಟೆಕ್ ಸೂರಿ ಛಾಯಾಗ್ರಹಣ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಹೊಸ ಯುವಕರ,ಹೊಸ ಹೊಸ ಆಲೋಚನೆಗಳೊಂದಿಗೆ ಸಿನಿಮಾ ಕ್ಷೇತ್ರಕ್ಕೆ ಬಂದು ಯಶಸ್ವಿಯಾಗುತ್ತಿರುವವರ ಸಾಲಿಗೆ “ಲೀಸ” ಸಿನಿಮಾ ತಂಡ ಕೂಡ ಸೇರ್ಪಡೆಗೊಂಡಿದೆ. ಕೇಳಲು ತುಂಬಾ ಸ್ಟೈಲಿಷ್ ಎನಿಸುವ “ಲೀಸ”ಅನ್ನೋ ಸಿನಿಮಾ ಟೈಟಲ್, ಡಿಸೈನ್ ಎಲ್ಲವೂ ಸಿನಿಮಾ ಅಭಿಮಾನಿಗಳಲ್ಲಿ ಹೊಸದೊಂದು ಕುತೂಹಲವನ್ನು ಕೆರಳಿಸಿಬಿಟ್ಟಿದೆ.

ಒಂದು ಹೊಸ ಸಿನಿಮಾ ಗೆದ್ದರೆ ಮತ್ತು ಹಲವು ಜನರಿಗೆ ಆಕ್ಸಿಜನ್ ಸಿಕ್ಕಂತೆ. ಆದ್ದರಿಂದ ಹೊಸ ಹುಡುಗರ ಈ ಹೊಸ ಪ್ರಯತ್ನ ಯಶಸ್ವಿಯಾಗಲಿ.

ಲೇಖನ:- ನಾಗೇಶ್ ಕಾರ್ತಿಕ್

Tags

Related Articles

Leave a Reply

Your email address will not be published. Required fields are marked *