ಸುದ್ದಿಗಳು

“ಮದುವೆಯಾದ್ಮೇಲೆ ನನ್ನ ಬ್ಯಾಟಿಂಗ್ ಇಂಪ್ರೂ ಆಗಿದೆ” : ಗೂಗ್ಲಿ ನಿರ್ದೇಶಕ…!

ಇಷ್ಟು ದಿವಸ ನಾನು ಬೌಲರ್ ಅಂದುಕೊಂಡಿದ್ದೆ. ಇತ್ತೀಚೆಗೆ ಬ್ಯಾಂಟಿಂಗು ಸ್ವಲ್ಪ ಇಂಪ್ರೂವ್ ಆಗ್ತಿದೀನಿ ಅಂತಾ ಕೋಚ್‌ಗಳು ಅಂತಾರೆ …ಪವನ್ ಒಡೆಯರ್ ಟ್ವೀಟ್‌ಗೆ..,   …‘ಮ್ಯಾರೇಜ್ ಮಿರಾಕಲ್ಸ್’ : ಕಿಚ್ಚ ಸುದೀಪ್ ರೀಟ್ವೀಟ್‌

ಬೆಂಗಳೂರು, ಆ.24: ಸದ್ಯ ಗಾಂಧಿನಗರದಲ್ಲಿ ಕೆಸಿಸಿ ಜ್ವರ ಶುರುವಾಗಿದೆ. ಅಭಿಮಾನಿಗಳಲ್ಲೂ ಕೂಡಾ ಅಷ್ಟೇ ಕಾತುರ ಶುರುವಾಗಿದೆ. ಇಡೀ ಚಿತ್ರರಂಗದ ದಿಗ್ಗಜರು ಈ ಕ್ರಿಕೆಟ್ ಪಂದ್ಯದಲ್ಲಿ ಭಾಗಿಯಾಗೋದನ್ನು ನೋಡೋದೆ ಒಂದು ಭಾಗ್ಯ. ಇದೀಗ ಈ ಪಂದ್ಯಕ್ಕಾಗಿ ಸಿನಿಮಾದವರ ತರಬೇತಿ ಕೂಡ ಜೋರಾಗಿಯೇ ನಡೀತಾ ಇದೆ. ಈಗಾಗಲೇ ಬಹಳಷ್ಟು ಮಂದಿ ಮೈದಾನಕ್ಕಿಳಿದು ಆಟವನ್ನು ಪ್ರಾರಂಭ ಮಾಡಿದ್ದಾರೆ. ಈ ಬೆನ್ನಲ್ಲೇ ನಿರ್ದೇಶಕ ಪವನ್ ಒಡೆಯರ್ ಬ್ಯಾಟಿಂಗ್ ಆಡುವ ಒಂದು ವಿಡಿಯೋ ತುಣಕನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬ್ಯಾಂಟಿಗ್ ಇಂಫ್ರೂವಾಗಿದೆ..

ಹೌದು, ಸದ್ಯ ಕೆಸಿಸಿಯ ಆಟ ಜೋರಾಗಿ ನಡೀತಾ ಇದ್ದು, ಸಿನಿಮಾ ಮಂದಿ ಕೂಡ ಬಿಡುವಿನ ವೇಳೆಯಲ್ಲಿ ಆಟವಾಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಮದುವೆಯಾದ ನಿರ್ದೇಶಕ ಪವನ್ ಒಡೆಯರ್ ಕೂಡ ಇದೀಗ ಮೈದಾನಕ್ಕಿಳಿದಿದ್ದಾರೆ. ಚೆಂಡೆಸೆತದಲ್ಲಿ ನಿಸ್ಸೀಮರಾಗಿರೋ ಪವನ್ ಇದೀಗ ಬ್ಯಾಟಿಂಗ್ ಮಾಡೋದನ್ನೂ ಕೂಡ ಕರಗತ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬ್ಯಾಟಿಂಗ್‌ನ ಒಂದು ವಿಡಿಯೋ ತುಣುಕನ್ನ ಹಾಕಿ ಒಂದಿಷ್ಟು ಮಾತುಗಳನ್ನು  ಹೇಳಿದ್ದಾರೆ.

ಇಷ್ಟು ದಿವಸ ನಾನು ಬೌಲರ್ ಅಂದುಕೊಂಡಿದ್ದೆ. ಇತ್ತೀಚೆಗೆ ಬ್ಯಾಂಟಿಂಗು ಸ್ವಲ್ಪ ಇಂಪ್ರೂವ್ ಆಗ್ತಿದೀನಿ ಅಂತಾ ಕೋಚ್‌ಗಳು ಅಂತಾರೆ  ಎಂದು ಬರೆದುಕೊಂಡಿದ್ದರು. ಈ ಟ್ವೀಟ್‌ಗೆ ಕಿಚ್ಚ ಸುದೀಪ್, ತಮಾಷೆಯಾಗಿ ರೀಟ್ವೀಟ್ ಮಾಡಿದ್ದಾರೆ. ‘ಮ್ಯಾರೇಜ್ ಮಿರಾಕಲ್ಸ್’ ಅಂತಾ ಬರೆದು ನಗುವ ಗೊಂಬೆಯನ್ನು ಹಾಕಿದ್ದಾರೆ. ಒಟ್ನಲ್ಲಿ ಇದನ್ನೆಲ್ಲಾ ನೋಡುತ್ತಾ ಇದ್ದರೆ ಈ ಬಾರಿಯ ಕ್ರಿಕೆಟ್ ಪಂದ್ಯಾವಳಿ ಜೋರಾಗಿಯೇ  ನಡೆಯುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

Tags

Related Articles