ಸುದ್ದಿಗಳು

‘ಭೈರವ ಗೀತ’ ಹೊಸ ಪೋಸ್ಟರ್ ಬಿಡುಗಡೆ

ಬೆಂಗಳೂರು, ಆ.19: ‘ಟಗರು’ ಸಿನಿಮಾದಲ್ಲಿ ಡಾಲಿಯಾಗಿ ಮಿಂಚಿದ್ದ ಧನಂಜಯ್ ಇದೀಗ ಭೈರವ ಗೀತಾ ಸಿನಿಮಾದಲ್ಲಿ ನಟಿಸ್ತಾ ಇರೋದು ಗೊತ್ತೇ ಇದೆ. ಟಗರು ನಂತರ ಸಾಕಷ್ಟು ಆಫರ್ ಗಳಲ್ಲಿ ಭೈರವ ಗೀತಾ ಕೂಡ ಒಂದು. ಈ ಸಿನಿಮಾದಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಡಾಲಿ. ಇದೀಗ ಈ ಸಿನಿಮಾದ ಹೊಸದೊಂದು ಪೋಸ್ಟರ್ ಬಿಡುಗಡೆಯಾಗಿದೆ.

ಹೌದು, ‘ಭೈರವಗೀತಾ’ ಈ ಸಿನಿಮಾವನ್ನು ಯುವ ಪ್ರತಿಭೆಯಾದ ಸಿದ್ಧಾರ್ಥ್ ಮೊದಲ ಬಾರಿಗೆ ಡೈರೆಕ್ಟ್ ಮಾಡಿದ್ದು, ರಾಮ್ ಗೋಪಾಲ್ ವರ್ಮಾ ನಿರ್ಮಾಣ ಮಾಡ್ತಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಪ್ರಮೋಶನ್ ಪೋಸ್ಟರ್ ಬಿಡುಗಡೆಯಾಗಿದ್ದು, ದಕ್ಷಿಣ ಚಿತ್ರರಂಗ ಮೆಚ್ಚುಗೆ ವ್ಯಕ್ತಪಡಿಸಿದೆ. ಇದೀಗ ಇನ್ನೊಂದು ಪೋಸ್ಟರ್ ನಲ್ಲೂ ಕೂಡ ಡಾಲಿ ಸಕ್ಕತ್ತಾಗಿ ಕಾಣಿಸ್ತಾ ಇದ್ದಾರೆ.

ಈ ಪೋಸ್ಟರ್ ನಲ್ಲಿ ಡಾಲಿ ಖಡಕ್ಕಾಗಿ ಕಾಣ್ತಾ ಇದ್ದಾರೆ. ಕೈಯಲ್ಲಿ ಕೊಡಲಿ ಹಿಡಿದಿರೋ ಡಾಲಿ ಯಾರನ್ನೋ ಕೊಲೆ ಮಾಡಿದ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಇನ್ನು, ಧನಂಜಯ್ ಸುತ್ತಾ ಮುತ್ತಾ ಕೆಲಸಗಾರರು ಬೆಚ್ಚಿ ಬೆರಗಾಗಿ ನೋಡ್ತಾ ಇರೋದು ಈ ಪೋಸ್ಟರ್ ನಲ್ಲಿ ಕಾಣಿಸುತ್ತಿದೆ. ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಪ್ರೀತಿ ಕಥೆ ಹೇಳುವ ಚಿತ್ರವೇ ಭೈರವ ಗೀತಾ. ಹಾಗೆಯೇ, ನಾಯಕದ ನಟಿ ಇರಾ ದಬ್ಬಾಳಿಕೆ ಮಾಡೊ ಭೂ ಮಾಲೀಕನ ಮಗಳ ಪಾತ್ರ ಮಾಡ್ತಿದ್ದಾರೆ.ಇರಾಗೆ ಭೈರವ ಗೀತಾ ಸಿನಿಮಾ ಚೊಚ್ಚಲ ಸಿನಿಮಾವಾಗಿದೆ.

ಈ ‘ಭೈರವ ಗೀತಾ’ ಚಿತ್ರ ತೆಲುಗು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಪ್ರಾರಂಭವಾಗಲಿದೆ. ಟಾಲಿವುಡ್ ಮತ್ತು ಸ್ಯಾಂಡಲ್‌ವುಡ್ ಎರಡು ಭಾಷೆಗಳಲ್ಲೂ ಚಿತ್ರದ ಟೈಟಲ್ ಒಂದೇ ಆಗಿರುತ್ತೆ ಎರಡೂ ಭಾಷೆಗೂ ಒಂದೇ ಹೋಲಿಕೆಯಾಗುತ್ತೆ, ಅಂದ್ಹಾಗೆ ಟಗರು ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಮಾಸ್ತಿ ಈ ಭೈರವ ಗೀತಾ ಚಿತ್ರಕ್ಕೂ ಕನ್ನಡದಲ್ಲಿ ಸಂಭಾಷಣೆಯನ್ನು ಬರೆದಿದ್ದಾರೆ.

Tags