ಸುದ್ದಿಗಳು

ಸೆನ್ಸಾರ್ ಮಂಡಳಿ ವಿರುದ್ಧ ಗರಂ ಆದ ನಿರ್ಮಾಪಕ, ನಿರ್ದೇಶಕರು…!

ಎಲ್ಲಾ ಸಿನಿಮಾಗಳಿಗೂ ಎ ಸರ್ಟಿಫೀಕೇಟ್ ನೀಡುತ್ತಿದ್ದಾರೆ

ಪ್ರಾದೇಶಿಕ ಸೆನ್ಸಾರ್ ಮಂಡಳಿಯ ವಿರುದ್ಧ ಕನ್ನಡ ಚಿತ್ರರಂಗದ ಹಲವಾರು ನಿರ್ಮಾಪಕರು, ನಿರ್ದೇಶಕರು ಗರಂ ಆಗಿದ್ದಾರೆ. ಇತ್ತೀಚೆಗೆ ಸೆನ್ಸಾರ್ ಮಂಡಳಿಯ ನಡೆ ಉದ್ಯಮಕ್ಕೆ ಬೇಸರ ತಂದಿದೆ. ನಿಗದಿತ ವೇಳೆಗೆ ಸಿನಿಮಾಗಳನ್ನ ಸೆನ್ಸಾರ್ ಮಾಡುತ್ತಿಲ್ಲ. ಜೊತೆಗೆ ಎಲ್ಲಾ ಸಿನಿಮಾಗಳಿಗೂ ಎ ಸರ್ಟಿಫಿಕೇಟ್ ಕೊಡ್ತಿದ್ದಾರೆ. ಇದರಿಂದ ನಿರ್ಮಾಪಕರು ಸಂಕಷ್ಟದಲ್ಲಿ ಸಿಲುಕುತ್ತಿದ್ದಾರೆ. ನಿಗದಿತ ವೇಳೆಗೆ ಸಿನಿಮಾಗಳನ್ನ ರಿಲೀಸ್ ಮಾಡಲಾಗದೇ, ಬಡ್ಡಿ ಚಕ್ರಬಡ್ಡಿಯನ್ನ ಕಟ್ಟಿ ಬೀದಿಗೆ ಬರ್ತಿದ್ದಾರೆ. ಚಿತ್ರಗಳಿಗೆ ಎ ಸರ್ಟಿಫಿಕೇಟ್ ಕೊಡ್ತಿರೋದ್ರಿಂದ ಸಬ್ಸೀಡಿ, ಸ್ಯಾಟಿಲೈಟ್ ರೈಟ್ಸ್ ಇನ್ನಿತರೆ ಸಿನಿಮಾ ವ್ಯಾಪಾರಕ್ಕೆ ಅದು ಅಡ್ಡಿಯಾಗ್ತಿದೆ ಎಂದು ಹೇಳಲಾಗಿದೆ.

ನಿರ್ಮಾಪಕ ಮತ್ತು ನಿರ್ದೇಶಕರನ್ನು ಅಗೌರವದಿಂದ ಕಾಣುತ್ತಿದ್ದಾರೆ

ಇದೆಲ್ಲಾದ್ರ ಜೊತೆಗೆ ಸೆನ್ಸಾರ್ ಮಂಡಳಿ ನಿರ್ಮಾಪಕ, ನಿರ್ದೇಶಕರನ್ನ ಅಗೌರವದಿಂದ ಕಾಣ್ತಿದೆ. ಇಷ್ಟೆಲ್ಲಾ ಕಾರಣಗಳನ್ನಿಟ್ಟುಕೊಂಡು ನಾಳೆ ಅಂದ್ರೆ ೨೫ನೇ ತಾರೀಖು ಬೆಳಗ್ಗೆ ೧೦ಗಂಟೆಗೆ ಫಿಲಂ ಚೇಂಬರ್ ಎದುರು ನೊಂದ ನಿರ್ಮಾಪಕರು, ನಿರ್ದೇಶಕರುಗಳು ಸೆನ್ಸಾರ್ ಬೋರ್ಡ್ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಈಗಾಗ್ಲೇ ನಿರ್ಮಾಪಕರ ವಲಯ ಮತ್ತು ನಿರ್ದೇಶಕರುಗಳ ವಲಯಕ್ಕೆ ಹೀಗೊಂದು ಸುತ್ತೋಲೆಯನ್ನ ನೊಂದ ನಿರ್ಮಾಪಕ, ನಿರ್ದೇಶಕರು ಕಳುಹಿಸಿದ್ದಾರೆ.

ಪ್ರತಿಭಟನೆ ಮಾಡಲು ತೀರ್ಮಾನಿಸಿರುವ  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ನಿರ್ಮಾಪಕ/ಕಿ. ಆತ್ಮೀಯರೇ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಯಿಂದಾ ದಿನಾಂಕ ೨೫/೦೭/೨೦೧೮(ಬುಧವಾರ) ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸೆನ್ಸಾರ್ ಬೋರ್ಡ್) ಯ ಪ್ರಾದೇಶಿಕ ಅಧಿಕಾರಿಯ ವಿರುದ್ಧ ಕೆಳಕಂಡ ವಿಷಯಗಳನ್ನು ವಿರೋಧಿಸಿ ಬೆಳಗ್ಗೆ ೧೦ ಗಂಟೆಗೆ ಪ್ರತಿಭಟನೆ ಮಾಡಲು ತೀರ್ಮಾನಿಸಿದೆ. ಸೆನ್ಸಾರ್ ಮಾಡಿದ ಬಹುಪಾಲು ಚಿತ್ರಗಳಿಗೆ ‘ಎ’ ಸರ್ಟಿಫಿಕೇಟ್ ಕೊಡುವುದು .ನಿರ್ಮಾಪಕರು ಮತ್ತು ನಿರ್ದೇಶಕರುಗಳ ಜೊತೆ ಸರಿಯಾದ ರೀತಿಯಲ್ಲಿ ನಡೆದುಕೊಳ್ಳದೆ, ಅಗೌರವವಾಗಿ ಕಾಣುವುದು. ಸರಿಯಾದ ಸಮಯಕ್ಕೆ ಸೆನ್ಸಾರ್ ಮಾಡದೆ ವಿಳಂಬ ಮಾಡುವುದು. ಇನ್ನು ಹಲವಾರು ವಿಷಯಗಳ ಹಿನ್ನೆಲೆ ಧರಣಿ ಮಾಡೋದಾಗಿ ತಿಳಿಸಿದ್ದಾರೆ.

Tags