ಸುದ್ದಿಗಳು

ಕೊಳ್ಳೆಗಾಲದಲ್ಲಿ ಗಿಡ ನೆಡುವುದರ ಮೂಲಕ ಸಂಭ್ರಮಿಸಿದ ಚಾಲೆಂಜಿಂಗ್ ಸ್ಟಾರ್…!

ಬೆಂಗಳೂರು, ಆ.21: ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಗೆ ಪ್ರಾಣಿ ಪಕ್ಷಿಗಳೆಂದರೆ ಪಂಚ ಪ್ರಾಣ ಅನ್ನೋದು ಗೊತ್ತಿರೋ ವಿಚಾರವೇ ಸರಿ. ಈಗಾಗಲೇ ಪ್ರಾಣಿಗಳಿಗೆ ಅಂತಾನೆ ಫಾರ್ಮ್ ಹೌಸ್ ಕಟ್ಟಿಸಿರೋ ದರ್ಶನ್ ಆಗಾಗ ಕಾಡು ಪ್ರದಕ್ಷಿಣೆ ಕೂಡಾ ಮಾಡ್ತಾರೆ. ಪ್ರಾಣಿ ಪಕ್ಷಿ, ಗಿಡ, ಮರ ಬಳ್ಳಿ ಹೀಗೆ ಪರಸರದ ಬಗ್ಗೆ ವಿಶೇಷ ಕಾಳಜಿ ಇರೋ ಈ ನಟ ಸದ್ಯ ಗಿಡ ನೆಡೋದ್ರಲ್ಲಿ ನಿರತರಾಗಿದ್ದಾರೆ.

ಹೌದು, ದರ್ಶನ್ ತಮ್ಮ ಸಿನಿಮಾಗಳಿಗೆ ಎಷ್ಟು ಪ್ರಾಮುಖ್ಯತೆ ಕೊಡ್ತಾರೋ ಅಷ್ಟೆ ಪ್ರಾಮುಖ್ಯತೆ ಪ್ರಾಣಿ ಪಕ್ಷಿಗಳಿಗೆ ಕೊಡುತ್ತಾರೆ. ಅಷ್ಟೆ ಅಲ್ಲ ಪರಿಸರ ಕಾಳಜಿ ಇರೋ ನಟರ ಸಾಲಿನಲ್ಲಿ ನಿಲ್ಲೋ ನಟ ಕೂಡ ಹೌದು. ಸದ್ಯ ಈ ನಟ ಕೊಳ್ಳೆಗಾಲದಲ್ಲಿ ಗಿಡನೆಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Today More exclusive pic

A post shared by ABHI Darshan (@abhi_dacchu7999) on

ಗಿಡ ನೆಡುವ ಮೂಲಕ ಪರಿಸರ ಉಳಿಸಿ

ಕೊಳ್ಳೇಗಾಲದ ಮಲೆಮಹದೇಶ್ವರ ಬೆಟ್ಟದಲ್ಲಿ ಗಿಡನೆಡುವ ಮೂಲಕ ಪರಿಸರ ಉಳಿಸಿ ಅನ್ನೋ ಸಂದೇಶ ನೀಡಿದ್ದಾರೆ ದರ್ಶನ್. ಈಗಾಗಲೇ ಹಲವಾರು ಕಡೆಗಳಲ್ಲಿ ಇಂಥಹ ಸಾಮಾಜಿಕ ಕೆಲಸಗಳನ್ನು ಈ ಹಿಂದೆಯೂ ಸಾಕಷ್ಟು ಮಾಡಿದ್ದಾರೆ ಇದೀಗ ಮತ್ತೊಮ್ಮೆ ಇಂಥಹ ಕೆಲಸ ಮಾಡುತ್ತಿದ್ದಾರೆ.

ಸಾಮಾಜಿಕ ಕೆಲಸ ಮಾಡುವ ನಟರಲ್ಲಿ ದರ್ಶನ್ ಕೂಡ ಒಬ್ಬರು, ಅಭಿಮಾನಿಗಳ ಕಷ್ಟಕ್ಕೆ ಸ್ಪಂದಿಸೋ ಹಾಗೂ ಇಂಥಹ ಕೆಲಸಗಳನ್ನು ಬಹು ಕಾಲದಿಂದಲೂ ಮಾಡುತ್ತಿರೋ ಈ ನಟ ಕಳೆದ ಕೆಲವೊಂದಿಷ್ಟು ದಿನಗಳ ಹಿಂದೆ ೧೫ ದಿನ ಅರಣ್ಯ ಜೀವನ ಮಾಡಿದ್ದರು, ಅರಣ್ಯ ಇಲಾಖೆ ರಾಯಬಾರಿ ಆದ ಮೇಲಂತು ಅರಣ್ಯವನ್ನೇ ಮನೆ ಮಾಡಿಕೊಂಡಿದ್ದಾರೆ.

Tags