ಸುದ್ದಿಗಳು

ಡಾಲಿ – ಚಿಟ್ಟೆ ಯ ಸ್ನೇಹ ಸಂಬಂಧ….

ಧನಂಜಯ್ ಉರುಫ್ ಡಾಲಿ, ವಸಿಷ್ಠ ಸಿಂಹ ಉರುಫ್ ಚಿಟ್ಟೆಇಬ್ಬರನ್ನ ಒಮ್ಮೆ ನೆನೆಸಿಕೊಂಡರೆ ಸಾಕು ಕಣ್ಮುಂದೆ ಬರೋದು ಯಾವ ಸಿನಿಮಾನೂ ಅಲ್ಲ ‘ಟಗರು’ ಸಿನಿಮಾ. ಈ‌ ಇಬ್ಬರಿಗೂ ಒಳ್ಳೆ ಬ್ರೇಕ್ ನೀಡಿದ ಈ ಸಿನಿಮಾ ನಂತರ ಆಫರ್ ಗಳ ಸುರಿಮಳೆಯನ್ನೇ ಹರಿಸಿತ್ತು. ಈಗಾಗ್ಲೆ ಸಾಕಷ್ಟು ಸಿನಿಮಾಗಳ ಆಫರ್ ಕೈಯಲ್ಲಿ ಹಿಡಿದಿದ್ದಾರೆ ಡಾಲಿ. ಇನ್ನು ವಸಿಷ್ಠ ಕೂಡ ಸದ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಇಬ್ಬರು ಸದ್ಯ ಸಿನಿಮಾದಲ್ಲಿದ್ದರು ಒಳ್ಳೆ ಫ್ರೆಂಡಾಗಿದ್ದಾರೆ.

ನಿಜ ಜೀವನದಲ್ಲಿ ಸ್ನೇಹ ಜೋಡಿಗಳು

ಹೌದು, ಸ್ನೇಹ ಸಂಬಂಧ ಅನ್ನೋದು ಯಾರಿಗೂ ಬಿಟ್ಟಿಲ್ಲ. ಸ್ನೇಹಕ್ಕೆ ಅಂಥಾನೆ ಅದೆಷ್ಟೋ ಸಿನಿಮಾಗಳು ಬಂದಿವೆ. ಯಶಸ್ವಿಯಾಗಿ ಮುನ್ನುಗ್ಗಿವೆ. ಈಗಾಗ್ಲೆ ಅನೇಕ ಸಿನಿಮಾಗಳಲ್ಲಿ ಈ ಸ್ನೇಹಕ್ಕೆ ಬೆಲೆ ಇದೆ. ಈ ಸ್ನೇಹ ಕೇವಲ ಹೊರ ಪ್ರಪಂಚ, ಕಾಲೇಜು ಹುಡುಗರಲ್ಲಿ ಅಷ್ಟೆ ಅಲ್ಲ ಸಿನಿಮಾ ಮಾಯಾಬಜಾರ್ ನಲ್ಲು ನಿಕಟ ಸ್ನೇಹವಿದೆ. ಡಾಲಿ-ಚಿಟ್ಟೆ ಅಂತಾನೇ ಫೇಮಸ್ ಆಗಿರೋ ಇವರ ಸ್ನೇಹ ಇಂದಿಗೂ ಜೀವಂತ. ಸಿನಿಮಾದ ಮೂಲಕ ಸ್ನೇಹಿತರಾದ ಇವರು ಜೀವದ ಗೆಳೆಯರು. ಈಗಾಗ್ಲೆ ಟಗರು ಸಿನಿಮಾದ ಮೂಲಕ ಒಂದಾಗಿರೋ ಈ ಜೋಡಿ ನಿಜ ಜೀವನದಲ್ಲಿ ಸ್ನೇಹ ಜೋಡಿಗಳೇ.ಹಾಸನದ ಪ್ರತಿಭೆಗಳು

ಇಬ್ಬರೂ ಹಾಸನದ ಪ್ರತಿಭೆಗಳೇ. ಮೈಸೂರಿನಲ್ಲಿ ರಂಗಭೂಮಿ, ಓದೋದ್ರಲ್ಲಿ ಬ್ಯುಸಿಯಾಗಿದ್ದರು.. ಐಟಿ ಕ್ಷೇತ್ರಗಳಲ್ಲೂ ಕೂಡ ಸಾಕಷ್ಟು ಕೆಲಸ ಮಾಡಿದ್ದ ಇವರು ಮುಂದೆ ಒಂದಾಗಿದ್ದು, ಸಿನಿಮಾದಲ್ಲಿ. ವಸಿಷ್ಠ ಮತ್ತು ಧನಂಜಯ್​ ಫ್ರೆಂಡ್​ಶಿಪ್ ಆರಂಭವಾದದ್ದು ಬೆಂಗಳೂರಿನಲ್ಲಿ. ಧನಂಜಯ್​ ಡೈರೆಕ್ಟರ್​ ಸ್ಪೆಷಲ್​ ಸಿನಿಮಾ ಮಾಡುವಾಗ ವಸಿಷ್ಠ ಆಗಷ್ಟೇ ನಟನೆಯತ್ತ ಹೋಗಿದ್ದರು.

ಇದೇ ಸಮಯದಲ್ಲಿ ಒಂದು ಇಂಗ್ಲಿಷ್ ಆಲ್ಬಂನಲ್ಲಿ ಒಂದಾಗಿ ನಟಿಸಿದ್ದರು. ಅದೇ ಅವರ ಫಸ್ಟ್ ಮೀಟ್. ಫಸ್ಟ್ ಮೀಟ್​ನಲ್ಲೇ ‘ವಸಿಷ್ಠ ನೀನು ಒಳ್ಳೆಯ ವಿಲನ್​ ಆಗಬಹುದು‘ ಅಂತಾ ಹೇಳಿದ್ದರಂತೆ ಧನಂಜಯ್​. ಹಾಗೆ ಪ್ರಾರಂಭವಾದ ಇವರು ಸ್ನೇಹ ಸಂಬಂಧ ನಂತರ ಕಾಫಿ, ಪಾರ್ಟಿಗಳಲ್ಲಿ ಜೊತೆಯಾಗುತ್ತಿದ್ದರು.

ಟಗರು ಸಿನಿಮಾಗೂ ಮೊಲದೇ ಅಂಥದ್ದೇ ಕತೆಯೊಂದು ಹುಡುಕಿ ಬಂದಿತ್ತು. ಇಬ್ಬರೂ ಡಾಲಿ-ಚಿಟ್ಟೆಯಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಡೈರೆಕ್ಟರ್​ ಮತ್ತೆ ಬರಲಿಲ್ಲ. ಅಂದಿನಿಂದ ಇಬ್ಬರ ನಡುವಿನ ಸ್ನೇಹ ಇನ್ನಷ್ಟು ಗಟ್ಟಿಯಾಗಿತ್ತು. ಟಗರು ಸಿನಿಮಾದ ಬಳಿಕವಂತೂ ಕನ್ನಡದ ‘ಭಲೇ ಜೋಡಿ’ಯಾಗ್ಬಿಟ್ಟಿದ್ದಾರೆ. ಸದ್ಯ ಮುಂದೆಯೂ ಜೊತೆಯಾಗಿ ನಟಿಸೋ ಇಷ್ಟವಿರುವ ಇವರ ಸ್ನೇಹ ನೂರು ಕಾಲ ಚೆನ್ನಾಗಿರಲಿ ಎಂದು ಹಾರೈಸುತ್ತಾ , ಸ್ನೇಹಿತರ ದಿನದ ಶುಭಾಷಯಗಳನ್ನು ಕೋರೋಣ.

Tags