ಸುದ್ದಿಗಳು

ಕುತೂಹಲ ಹುಟ್ಟಿಸುತ್ತಿರುವ “ಗಹನ” ಸಿನಿಮಾ

ಬೆಂಗಳೂರು, ಆ.13: ಹೆಸರಿನಲ್ಲೇ ಒಂದು ರೀತಿಯ ಕುತೂಹಲ ಹುಟ್ಟಿಸಿರುವ “ಗಹನ” ಎನ್ನುವ ಚಿತ್ರವೊಂದು ಇದೀಗ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸ್ಥಿರ ಛಾಯಾಗ್ರಹಕನಾಗಿ ಕೆಲಸ ಮಾಡುತ್ತಿದ್ದ ಸ್ಟಿಲ್ ಸೀನು ರವರು ತಮ್ಮ ‘ಓಂ ಶ್ರೀ ಸಾಯಿರಾಂ”  ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಜೊತೆಗೆ ಸ್ಥಿರ ಚಿತ್ರಣದಿಂದ ಸಿನಿಮಾ ಛಾಯಾಗ್ರಹಕನಾಗಿಯೂ ಭಡ್ತಿ ಪಡೆಯುತ್ತಿರುವುದು ವಿಶೇಷ.

ಕರಾವಳಿಯಲ್ಲಿ ಬಿರುಸಿನ ಚಿತ್ರೀಕರಣ

ಈ ಸಿನಿಮಾ ಈಗಾಗಲೇ ಎರಡು ಹಂತದ ಚಿತ್ರೀಕರಣವನ್ನು ಮುಗಿಸಿಕೊಂಡಿದ್ದು  ಇತ್ತೀಚೆಗೆ ಮಂಗಳೂರು, ಚಾರ್ಮಾಡಿ ಘಾಟ್, ಉಡುಪಿ, ಶಿರಾಡಿ ಘಾಟ್, ಮಂಗಳೂರು ಮುಂತಾದ ಕರಾವಳಿಯ ಭಾಗಗಳಲ್ಲಿ ಮೂರನೇ ಹಂತದ ಚಿತ್ರೀಕರಣವನ್ನೂ ಕೂಡ ಮುಗಿಸಿಕೊಂಡು ಬೆಂಗಳೂರಿಗೆ ಮರಳಿದೆ.ಉಡುಪಿಯ ಪ್ರಸಿದ್ಧ ಸಮುದ್ರ ತೀರ ಹಾಗೂ ಡೆಲ್ಟಾ ಪಾಯಿಂಟ್ ನಲ್ಲಿ ಒಂದು ಹಾಡು ಮತ್ತು ಒಂದು ಹೊಡೆದಾಟದ ಸನ್ನಿವೇಶವನ್ನು ಚಿತ್ರೀಕರಿಸಿರುವುದಾಗಿ ನಿರ್ದೇಶಕರು ತಿಳಿಸಿದ್ಧಾರೆ. ಇಲ್ಲಿಯವರೆಗೆ ಹೊರಾಂಗಣದ ದೃಶ್ಯಗಳನ್ನು ಸೆರೆಹಿಡಿದಿರುವ ಗಹನ ತಂಡ ಉಳಿದ ಒಳಾಂಗಣ ದೃಶ್ಯಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.ಈ ಚಿತ್ರಕ್ಕೆ ಕತೆ,ಚಿತ್ರಕತೆ, ನಿರ್ದೇಶನದ ಜವಾಬ್ದಾರಿಯನ್ನು ಪ್ರೀತ್ ಹಾಸನ್ ವಹಿಸಿಕೊಂಡಿದ್ಧಾರೆ. ತಾರಾಗಣದಲ್ಲಿ ಆದಿತ್ಯ ಶೆಟ್ಟಿ, ಶರಣ್ಯ ಗೌಡ, ರಂಜಿನಿ, ಶಿವು, ಇಂಚರ ಭೂಮಯ್ಯ ಮುಂತಾದವರು ನಟಿಸಿದ್ದು ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ತಾವು ಅಂದುಕೊಂಡಂತೆ ಸಿನಿಮಾ ಮೂಡಿಬರುತ್ತಿರುವುದು ಎಲ್ಲರಲ್ಲೂ ಸಂತೋಷವನ್ನುಂಟು ಮಾಡಿದೆ ಎಂದು ನಿರ್ಮಾಪಕ, ನಿರ್ದೇಶಕರು ಸಂತಸ ವ್ಯಕ್ತಪಡಿದ್ದಾರೆ.

Tags