ಸುದ್ದಿಗಳು

‘ಗಮ್ಯ’ ತಂಡದಿಂದ ಮತ್ತೊಂದು ಚಿತ್ರ…!

ಕನ್ನಡ ಚಿತ್ರರಂಗದಲ್ಲಿ ಹೊಸದಾಗಿ ಸಿನಿಮಾ ಮಾಡಲು ಹೊರಡುವ ನಿರ್ದೇಶಕನಿಗೆ  ಮೊದಲು ಎದುರಾಗುವುದು ನಿರ್ಮಾಪಕರ ಕೊರತೆ. ಈವಷಯದಲ್ಲಿ ಕೆಲವರಿಗೆ ಬೇಗನೇ ಸಿಗುತ್ತಾರೆ. ಇನ್ನು ಕೆಲವರಿಗೆ ತುಂಬಾ ನಿಧಾನವಾಗುತ್ತದೆ.

ಆದರೆ ಇನ್ನು ಕೆಲವು ಅದೃಷ್ಟವಂತರಿರುತ್ತಾರೆ…ಹೇಗೆಂದರೆ ಒಂದು ಸಿನಿಮಾ ಇನ್ನು ಮುಗಿದೇ ಇರುವುದಿಲ್ಲ.ಅಷ್ಟರಲ್ಲಿ ಮತ್ತೊಂದು ಸಿನಿಮಾಕ್ಕೆ ನಿರ್ಮಾಪಕರು ಸಿಕ್ಕಿರುತ್ತಾರೆ. ಬಹುಶಃ ಈ ರೀತಿ ಆಗೋದು ಆ ನಿರ್ದೇಶಕನಿಗೆ ಪ್ರತಿಭೆ ಇದ್ದಾಗ ಮಾತ್ರ. ಅಂತಹದ್ದೆ ಅವಕಾಶ “ಗಮ್ಯ” ಎನ್ನುವ ಚಿತ್ರ ನಿರ್ದೇಶನ ಮಾಡ್ತಿರುವ ಭುವನ್ ನಾಯ್ಕ್ ಗೆ ಸಿಕ್ಕಿದೆ.ಕಥೆ ಒಪ್ಪಿದ ಪ್ರಿಯಾಂಕ ಉಪೇಂದ್ರ

ಎಲ್ಲಾ ಹೊಸ ಮುಖಗಳನ್ನಿಟ್ಟುಕೊಂಡು ಗಮ್ಯ ಅನ್ನುವ ಹಾರರ್  ಸಿನಿಮಾ ನಿರ್ದೇಶನ ಮಾಡುತ್ತಿರುವ ಭುವನ್ ನಾಯ್ಕ್ ರವರಿಗೆ ಮತ್ತೊಬ್ಬರು ನಿರ್ಮಾಪಕರು ತಮಗೆ ಸಿನಿಮಾ ಮಾಡಿಕೊಡುವಂತೆ ಆಫರ್ ನೀಡಿದ್ದಾರಂತೆ. ಈಗಾಗಲೇ ಪ್ರಿಯಾಂಕ ಉಪೇಂದ್ರ ರವರಿಗೆ ಕಥೆ ಹೇಳಿರುವ ನಿರ್ದೇಶಕರು ಅವರನ್ನು ಒಪ್ಪಿಸಿಕೊಂಡು ಬಂದಿದ್ದಾರೆ. ಜೊತೆಗೆ ಗಾಳಿಪಟ ಖ್ಯಾತಿಯ ಭಾವನ ರಾವ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುವುದು ಬಹುತೇಕ  ಪಕ್ಕಾ ಆಗಿದೆಯಂತೆ.ನಿರ್ದೇಶಕರು ಮಾಡಿಟ್ಟುಕೊಂಡಿದ್ದ ಕಥೆಯನ್ನು ಕೇಳಿದ ಪ್ರಿಯಾಂಕ ಗ್ರೀನ್ ಸಿಗ್ನಲ್ ಕೊಟ್ಟಿದ್ದು ನಿರ್ದೇಶಕರು ಸಂತೋಷದ ಮೂಡ್ ನಲ್ಲಿದ್ದಾರೆ.

ಇದೊಂದು ಮಹಿಳಾ ಪ್ರಧಾನ ಚಿತ್ರ

ಆ ಚಿತ್ರದ ಕಥೆ ನಾಯಕಿ ಪ್ರಧಾನವಾಗಿದ್ದು ವಾಸ್ತವ  ಅಂಶಗಳ ಮೇಲೆ ಬೆಳಕು ಚೆಲ್ಲಲಿದೆಯಂತೆ.ಗಾಳಿಪಟ ಖ್ಯಾತಿಯ ಭಾವನ ರಾವ್ ಪ್ರಿಯಾಂಕ ತಂಗಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.. ಹಾಗೇ ಈ ಚಿತ್ರದಲ್ಲಿ ಬರುವ ಮಗು ಮತ್ತು ಹುಚ್ಚನ ಪಾತ್ರ ಕೂಡ ಮುಖ್ಯವಾದ ಪಾತ್ರಗಳಾಗಿರುತ್ತವೆಯಂತೆ. ಗಮ್ಯ ಮುಗಿಸಿದ ಕೂಡಲೇ ಪ್ರಿಯಾಂಕ ರವರು ಡೇಟ್ಸ್ ಕೊಡಲು ತಯಾರಿರುವುದಾಗಿ ತಿಳಿದು ಬಂದಿದೆ.

ನಿರ್ದೇಶಕರು ಕೂಡ ಗಮ್ಯ ಮುಗಿದ ಕೂಡಲೇ ತಮ್ಮ ಎರಡನೇ ಸಿನಿಮಾದ ತಯಾರಿಯಲ್ಲಿ ತೊಡಗಿಕೊಳ್ತಾರಂತೆ. ಗಮ್ಯ ಚಿತ್ರಕ್ಕೆ ಹಾಗೂ ನಿರ್ದೇಶಕರ ಎರಡನೇ ಸಿನಿಮಾಕ್ಕೆ ಒಳ್ಳೆದಾಗಲಿ.

Tags