ಸುದ್ದಿಗಳು

‘ಹಸಿವು ಮತ್ತು ಅರಿವು’ ಆಡಿಯೋ ಅನಾವರಣ…!

ಬೆಂಗಳೂರು, ಆ.21: ನೃತ್ಯ ನಿರ್ದೇಶಕ ಎಂ.ಆರ್. ಕಪಿಲ್ ಅವರ ನಿರ್ದೇಶನದ ಹಸಿವು ಮತ್ತು ಅರಿವು ಚಲನ ಚಿತ್ರದ ಹಾಡುಗಳ ದ್ವನಿ ಸುರುಳಿ ಬಿಡುಗಡೆ ಸಮಾರಂಭ ಕಳೆದ ಶನಿವಾರ ಕಂಠೀರವ ಸ್ಟುಡಿಯೋ ಆವರಣದಲ್ಲಿ ನೆರವೇರಿತು. ಈ ಹಿಂದೆ ಹಳ್ಳಿ ಸೂಗಡು ಎಂಬ ಹೆಸರಿನಲ್ಲಿ ಸಾಹಿತಿ ಡಾ.ದೊಡ್ಡರಂಗೇಗೌಡರ ಬಯೋಪಿಕ್ ಆಧಾರಿತ ಚಲನ ಚಿತ್ರವನ್ನು ನಿರ್ದೇಶಿಸಿದ್ದ ಕಪಿಲ್ ಅವರು ಈ ಬಾರಿ ದೇಶ ಹಾಗು ಪ್ರಪಂಚವನ್ನು ಕಾಡುತ್ತಿರುವ ಗಂಭೀರವಾದ ಸಮಸ್ಯೆಯೊಂದನ್ನು ಇಟ್ಟುಕೊಂಡು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.ಕಪಿಲ್ ಅವರೇ ಕಥೆ ಚಿತ್ರಕಥೆ, ಸಂಭಾಷಣೆ ರಚಿಸಿರುವ ಈ ಚಿತ್ರದ ಹಾಡುಗಳನ್ನು ಸಿನಿ ಮ್ಯೂಸಿಕ್ ಕಂಪನಿ ಮಾರುಕಟ್ಟೆಗೆ ತಂದಿದೆ.  ಪತ್ರಕರ್ತ ಜಗದೀಶ ಅವರ ಸಾರಥ್ಯದಲ್ಲಿ ಆರಂಭಗೊಂಡಿರುವ ಸಿನಿಮ್ಯಾಜಿಕ್ ಮೂಲಕ ಹೊರ ಬರುತ್ತಿರುವ ಮೊದಲ ಮ್ಯೂಸಿಕ್ ಆಲ್ಬಂ ಇದಾಗಿದೆ. ಶ್ರೀಮತಿ ಶೋಭಾವತಿ  ಕಪಿಲ್ ಅವರ ನಿರ್ಮಾಣದಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಸಮಾಜ ಸೇವಕರಾದ ಎಸ್.ನಾಗರಾಜ್ ಅನೇಕಲ್ ಅವರ ಸಹಕಾರವಿದೆ. ಜಿ.ರಾಘವೇಂದ್ರ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಉದಯಲೇಖಾ ಅವರ ಸಾಹಿತ್ಯದಲ್ಲಿ ಮೂಡಿ ಬಂದಿರುವ ಅನ್ನದ ಹಸಿವು ಅನ್ನದ ಅರಿವು ಎಂಬ ಟೈಟಲ್ ಸಾಂಗ್ ಮಾತ್ರ ಇದೆ. ಗಾಯಕ ಬದ್ರಿಪ್ರಸಾದ ಈ ಹಾಡಿಗೆ ದನಿಯಾಗಿದ್ದಾರೆ. ಭುವನೇಶ್ವರಿ ಬಲರಾಮ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಸುಚೇಂದ್ರ ಪ್ರಸಾದ್

ಹಿರಿಯ ನಟ ಸುಚೇಂದ್ರ ಪ್ರಸಾದ್ ಹಾಗು ಎಸ್.ನಾಗರಾಜ್ ಸೇರಿ ಈ ಚಿತ್ರದ ಹಾಡಿನ  ದ್ವನಿಸುರುಳಿಯನ್ನು ಲೋಕಾರ್ಪಣೆ ಮಾಡಿದರು ಹಸಿವು ಎನ್ನುವುದು ಒಂದು ಸಾಮಾಜಿಕ ಸಮಸ್ಯೆಯಾಗಿದ್ದು ಉಳ್ಳವರು ಅನ್ನವನ್ನು ಎಂದು ವ್ಯರ್ಥಮಾಡಬೇಡಿ. ಹಸಿದವರಿಗೆ ನೀಡಿ ಅವರ ಹಸಿವಿನ ದಾಹ ತೀರಿಸಿ. ಇದು ಕೂಡ ಒಂದು ರೀತಿಯ ದೇಶಸೇವೆ ಎಂಬುದನ್ನು ಹಸಿವು ಮತ್ತು ಅರಿವು ಎಂಬ ಈ ಚಿತ್ರದ ಮೂಲಕ ನಿರ್ದೇಶಕ ಹಾಗು ನಿರ್ಮಾಪಕರೂ ಆಗಿರುವ ಒ.ಖ.ಕಪಿಲ್ ಹೇಳ ಹೊರಟಿದ್ದಾರೆ.

Tags

Related Articles