ಸುದ್ದಿಗಳು

ಕನ್ನಡ ರಾಜ್ಯೋತ್ಸವಕ್ಕೆ ಕೆಜಿಎಫ್ ಸಿನಿಮಾ ತೆರೆಗೆ..?

ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಕೆಜಿಎಫ್

ಬೆಂಗಳೂರು, ಆ.25: ಕನ್ನಡ ಚಲನಚಿತ್ರರಂಗದಲ್ಲಿ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಸಿನಿಮಾ “ಕೆಜಿಎಫ್” ಕಳೆದ ೨ ವರ್ಷಗಳಿಂದ ಚಿತ್ರೀಕರಣದಲ್ಲಿ ತೊಡಗಿತ್ತು. ಇದೀಗ ಈ ಸಿನಿಮಾದ ಚಿತ್ರೀಕರಣ ಮುಗಿದಿದ್ದು ಇನ್ನೇನು ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ.

ಹೌದು, ಕೆಜಿಎಫ್ ಸಿನಿಮಾ ಕನ್ನಡ ರಾಜ್ಯೋತ್ಸವಕ್ಕೆ ತೆರೆಗೆ ಬರಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಚಿತ್ರೀಕರಣ ಮುಗಿಸಿರೋ ಚಿತ್ರತಂಡ ಸದ್ಯ ವಿಎಫ್ ಎಕ್ಸ್ ಕೆಲಸ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಇದೆ. ಇದೊಂದು ಮುಗಿದ್ರೆ ಸಿನಿಮಾ ತೆರೆಗೆ ಬರೋದು ಖಂಡಿತ. ಈಗಾಗಲೇ ಇದನ್ನು ಮುಗಿಸುವ ಹಂತದಲ್ಲಿರುವ ಚಿತ್ರತಂಡ ಕನ್ನಡ ರಾಜ್ಯೋತ್ಸವಕ್ಕೆ ತೆರೆಗೆ ಬರುತ್ತೆ ಅಂತಾ ಸಿನಿ ಮೂಲಗಳು ತಿಳಿಸಿವೆ.

ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಈ ಸಿನಿಮಾ ಹಲವಾರು ನಿರೀಕ್ಷೆಗಳನ್ನು  ಇಟ್ಟುಕೊಂಡಿದೆ. ಇನ್ನು ಚಿತ್ರಮಂದಿರಕ್ಕೆ ಕಾಲಿಟ್ಟ ಮೊದಲ ದಿನವೇ ಈ ಸಿನಿಮಾ ಹೌಸ್ ಫುಲ್ ಆಗೋದರಲ್ಲಿ ಎರಡು ಮಾತಿಲ್ಲ.

Tags