ಸುದ್ದಿಗಳು

‘ಲೈಫ್ ಜೊತೆ ಒಂದ್ ಸೆಲ್ಫಿ’ ತೆಗೆದುಕೊಳ್ಳಲು ತಯಾರಾದ ಚಿತ್ರತಂಡ

ಬೆಂಗಳೂರು, ಆ.21: ಹೇಳಿ ಕೇಳಿ ಇದು ಸೆಲ್ಫಿ ಯುಗ. ಯುವಕರಿಗಷ್ಟೇ ಅಚ್ಚುಮೆಚ್ಚಿನ ಸೆಲ್ಫಿ ಅಲ್ಲ ಹಿರಿಯರು ಕೂಡಾ ಇದಕ್ಕೆ ಮರುಳಾಗಿ ಬಿಟ್ಟಿದ್ದಾರೆ. ಈಗಿನ ಟ್ರೆಂಡ್ ಜೊತೆ ಜೊತೆಯಲ್ಲಿ ಹೋಗುವುದು ದಿನಕರ್ ತೂಗುದೀಪ ಅವರಿಗೆ ಹೊಸದೇನಲ್ಲ. ದಿನಕರ್ ಅವರ ನಿರ್ದೇಶನದ ನಾಲ್ಕನೇ ಸಿನಿಮಾ ಇದು. ಈ ಹಿಂದೆ ಅವರು ‘ಜೊತೆ ಜೊತೆಯಲಿ’, ‘ಸಾರಥಿ’, ‘ನವಗ್ರಹ’ ಸಿನಿಮಾಗಳ ನಿರ್ದೇಶನ ಮಾಡಿದ್ದಾರೆ.ಪತ್ನಿಯ ಕಥೆಗೆ ಗಂಡನ ನಿರ್ದೇಶನ

ಪತ್ನಿ ಮಾನಸ ಅವರ ಕಥೆಗೆ ದಿನಕರ್ ಅಚ್ಚುಕಟ್ಟಾದ ಚಿತ್ರಕಥೆ ಬರೆದು `ಲೈಫ್ ಜೊತೆ ಒಂದು ಸೆಲ್ಫಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದೇ ಶುಕ್ರವಾರ ಈ ಚಿತ್ರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಪ್ರೀತಿ ಸ್ನೇಹಗಳ ಸುತ್ತ ಹೆಳೆಯಲ್ಪಟ್ಟ ಸೂಕ್ಷ್ಮ ಕಥಾ ಹಂದರಕ್ಕೆ ನಿರ್ದೇಶಕ ದಿನಕರ್ ತೂಗುದೀಪ ಮುದ್ದಾದ ಪಾತ್ರವರ್ಗವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಹಿರಿಯ ನಟಿ ಸುಧಾರಾಣಿ  ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.  ಸಾಧು ಕೋಕಿಲ, ಚಿತ್ರ ಶೆಣೈ, ದೀಪಕ್ ಶೆಟ್ಟಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಲವ್ಲಿ ಸ್ಟಾರ್ ಪ್ರೇಮ್‍, ಮಾದಕ ಬೆಡಗಿ ಹರಿಪ್ರಿಯಾ ಹಾಗೂ ಸುಂದರ ಯುವಕ ಪ್ರಜ್ವಲ್ ದೇವರಾಜ್ ಮುಖ್ಯ ಪಾತ್ರದ ಚಿತ್ರಕ್ಕೆ ವಿರಾಟ್ ಸಾಯಿ ಕ್ರಿಯೇಷನ್ ನಿರ್ಮಾಣದಲ್ಲಿ ಸಮೃದ್ಧಿ ಮಂಜುನಾಥ್ (ಕೋಲಾರ) ಹಣ ಹೂಡಿದ್ದಾರೆ. ವಿ. ಹರಿಕೃಷ್ಣ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಚಿಂತನ್ ಎ ವಿ ಸಂಭಾಷಣೆ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ಕೆ ಎಂ ಪ್ರಕಾಶ್ ಸಂಕಲನ ಒದಗಿಸಿದ್ದಾರೆ.

 

Tags