ಸುದ್ದಿಗಳು

‘ಕೃಷ್ಣಲೀಲಾ’ ಮಯೂರಿಗೆ ಒಲಿದು ಬಂದ ಮಹಿಳಾ ಪ್ರಾಧಾನ್ಯ ಚಿತ್ರ…!

ಬೆಂಗಳೂರು, ಆ.25:  ‘ಕೃಷ್ಣಲೀಲಾ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ನೀಡಿದ್ದ ನಟಿ ಮಯೂರಿ ಕ್ಯಾತರಿ  ಈಗ ಮತ್ತಷ್ಟು ಸುದ್ದಿಯಲ್ಲಿದ್ದಾರೆ. ‘ಕೃಷ್ಣಲೀಲಾ’ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಪಡೆಯುತ್ತಿದ್ದಂತೆಯೇ ಮಯೂರಿಗೆ ಬ್ಯಾಕ್ ಟು ಬ್ಯಾಕ್ ಚಿತ್ರದ ಆಫರ್ ಗಳು ಬಂದಿವೆ. ಈಗ ಮಯೂರಿಯವರು ಪುನೀತ್ ಶರ್ಮನ್ ನಿರ್ದೇಶನದ ‘ಅನಾದ್ಯಂತ’ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರವು ಮಹಿಳಾ ಪ್ರಧಾನವಾಗಿದ್ದು, ಮಯೂರಿಗೆ ಆ ಪಾತ್ರದಲ್ಲಿ ನಟಿಸಲು ಮತ್ತಷ್ಟು ಖುಷಿಯಾಗುತ್ತಿದೆಯಂತೆ.ಸಂತಸ ವ್ಯಕ್ತ ಪಡಿಸಿದ ಮಯೂರಿ

ಹೊಸ ಚಿತ್ರದಲ್ಲಿ ನಟಿಸುವುದರ ಕುರಿತು ಸಂತಸ ಹಂಚಿಕೊಂಡ ಮಯೂರಿ ಅವರು, ಮಹಿಳಾ ಪ್ರಧಾನ ಪಾತ್ರದಲ್ಲಿ ನಟಿಸುವುದು ಹೆಮ್ಮೆಯ ವಿಷಯ ಎಂದಿದ್ದಾರೆ. ‘ಅನಾದ್ಯಂತ’ ಚಿತ್ರವನ್ನು ನಿರ್ದೇಶನ ಮಾಡಲಿರುವ  ಪುನೀತ್ ಶರ್ಮನ್ , ಟಾಲಿವುಡ್ ಖ್ಯಾತ ನಿರ್ದೇಶಕರಾದ ಎಸ್ಎಸ್ ರಾಜಮೌಳಿ, ಪುರಿ ಜಗನ್ನಾಥ್ ಮತ್ತು ರಾಮ್ ಗೋಪಾಲ್ ವರ್ಮಾ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅಪಾರ ಅನುಭವ ಪಡೆದಿದ್ದಾರೆ. ಅಲ್ಲದೇ ಈ ಚಿತ್ರದ ರೂಪುರೇಷೆ ವಿಭಿನ್ನವಾಗಿದ್ದು, ಒಂದು ಒಳ್ಳೆಯ ತಂಡದೊಂದಿಗೆ ನಾನು ಕೆಲಸ ಮಾಡುತ್ತಿರುವುದು ಸಂತಸವಾಗಿದೆ ಎಂದು ಮಯೂರಿ ಹೇಳಿದ್ದಾರೆ.‘ಅನಾದ್ಯಂತ’ ಚಿತ್ರವನ್ನು ರಮೇಶ್ ಬಿ ಬಾಬು ಎಂಬುವವರು ನಿರ್ಮಿಸುತ್ತಿದ್ದು, ಚಿತ್ರದ ಚಿತ್ರೀಕರಣ ಸೋಮವಾರದಿಂದ ಆರಂಭವಾಗಲಿದೆ. ಚಿತ್ರದ ಕಥೆ ಅದ್ಭುತವಾಗಿದ್ದು, ಇದು ನನ್ನ ಸಿನಿಮಾ ವೃತ್ತಿ ಜೀವನದಲ್ಲಿಯೇ ಒಂದು ಅದ್ಭುತ ಹಂತವೆಂದು ಹೇಳಿದ್ದಾರೆ. ಸದ್ಯಕ್ಕೆ ಮಯೂರಿ ಕ್ಯಾತರಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಮೌನಂ, ರುಸ್ತುಂ, ಡಾ.ಗಿರಿಧರ ನಿರ್ದೇಶನದ ಹರಿಕೃಷ್ಣ ನಾರಾಯಣಿ, ಗುರು ಮದ್ಲೇಸರ ನಿರ್ದೇಶನದ ಸಿಗ್ನೇಚರ್ ಮತ್ತು ‘ಅನಾದ್ಯಂತ’ ಚಿತ್ರಗಳಲ್ಲಿ ಅಭಿನಯಿಸಲಿದ್ದಾರೆ.

Tags