ಸುದ್ದಿಗಳು

ಎಸ್.ಆರ್.ಕೆ ವೆಬ್ ಸೀರೀಸ್ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತ ಶಿವಣ್ಣನ ಪುತ್ರಿ….

ಚಿತ್ರೀಕರಣ ಪ್ರಾರಂಭದ ಹಂತದಲ್ಲಿದೆ ‘ಹೇಟ್ ಯು ರೋಮಿಯೊ’...

ಸೆಂಚುರಿಸ್ಟಾರ್ ಡಾ. ಶಿವರಾಜ್‌ಕುಮಾರ್, ಚಿತ್ರ ನಿರ್ಮಾಣ ಸಂಸ್ಥೆಯನ್ನ ಶುರುಮಾಡೋದಾಗಿ ಸುಮಾರು ಎರಡು ವರ್ಷದಿಂದ ಹೇಳ್ತಿದ್ರು. ಅದ್ರಂತೆ ಈಗಾಗ್ಲೇ ಶಿವಣ್ಣನ ಹೋಂ ಬ್ಯಾನರ್‌ಗೆ ಎಸ್.ಆರ್.ಕೆ ಪ್ರೊಡಕ್ಷನ್ಸ್ ಅಂತ ಹೆಸರಿಡಲಾಗಿದೆ. ಜೊತೆಗೆ ಅದರ ಅಡಿಯಲ್ಲಿ ಮಾನಸ ಸರೋವರ ಅನ್ನೋ ಧಾರವಾಹಿಯನ್ನೂ ನಿರ್ಮಿಸಿದ್ದಾರೆ. ಈ ನಡುವೆ ಶಿವಣ್ಣನ, ಹೋಂಬ್ಯಾನರ್‌ ನಲ್ಲಿ ಮೊದಲ ಬಾರಿಗೆ ವೆಬ್ ಸೀರಿಸ್‌ನ ನಿರ್ಮಾಣ ಮಾಡೋದಕ್ಕೆ ಮುಂದಾಗಿದ್ದಾರೆ. ಎಸ್.ಆರ್.ಕೆ ಬ್ಯಾನರ್‌ನಲ್ಲಿ ನಿರ್ಮಾಣವಾಗ್ತಿರೋ ಮೊದಲ ವೆಬ್ ಸೀರಿಸ್‌ನ ನಿರ್ಮಾಣದ ಜವಾಬ್ದಾರಿಯನ್ನ ಶಿವಣ್ಣನ ಎರಡನೇ ಪುತ್ರಿ ನಿವೇದಿತಾ ಶಿವರಾಜ್‌ಕುಮಾರ್ ವಹಿಸಿಕೊಳ್ತಿದ್ದಾರೆ. ಅಂದ್ಹಾಗೆ ಈ ವೆಬ್ ಸೀರಿಸ್‌ನಲ್ಲಿ ಹಲವಾರು ಪ್ರತಿಭಾವಂತ ಕಲಾವಿದ್ರು ಅಭಿನಯಿಸ್ತಿದ್ದಾರೆ. ಇದೀಗ ಇವರ ವೆಬ್ ಸೀರಿಸ್ ಚಿತ್ರೀಕರಣ ಪ್ರಾರಂಭದ ಹಂತದಲ್ಲಿದೆ.‘ಹೇಟ್ ಯು ರೋಮಿಯೋ’

‘ಅಂಡಮಾನ್’ ಸಿನಿಮಾದಿಂದ ಇಡೀ ಸ್ಯಾಂಡಲ್‌ವುಡ್ ಅಭಿಮಾಗಳಿಗೆ ಗೊತ್ತಾದ ಬಾಲ ನಟಿ. ಅದಾದ ನಂತರ ಓದಿನಲ್ಲಿ ಬ್ಯುಸಿಯಾದ ಇವರು ಸದ್ಯ ವೆಬ್ ಸೀರೀಸ್ ಗೆ ಕೈ ಹಾಕಿದ್ದಾರೆ. ಈಗಾಗ್ಲೆ ಶ್ರೀ ಮುತ್ತು ಸಿನಿ ಸರ್ವಿಸ್ ಹಾಗೂ ಕನ್ನಡದ ಸಕ್ಕತ್ ಸ್ಟುಡಿಯೋ ಸಹನಿರ್ಮಾಣದ ಹೊಸ ಕನ್ನಡದ ವೆಬ್ ಸೀರೀಸ್ಗೆ ‘ಹೇಟ್ ಯು ರೋಮಿಯೋ’ ಅನ್ನೋ ಹೆಸರಿಡಲಾಗಿದೆ. ಸದ್ಯ ಸೀರಿಸ್‌ನ ಚಿತ್ರೀಕರಣ ಪ್ರಾರಂಭದ ಹಂತದಲ್ಲಿದೆ ನಿರ್ದೇಶಕರಾದ ಹಸೀನ್ ಖಾನ್ ಹಾಗು ಇಶಾಮ್ ಖಾನ್ ಹೇಟ್ ಯು ರೋಮಿಯೋ ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಈ ಸೀರೀಸ್‌ನ ನಾಯಕ ನಟನಾಗಿ ಆರವಿಂದ್ ಐಯ್ಯರ್ ಕಾಣಿಸಿಕೊಳ್ಳುತ್ತಿದಾರೆ. ಇನ್ನು ಸೀರಿಸ್‌ಗೆ ನಾಯಕಿ ಯಾರು ಅನ್ನೋದು ಫೈನಲ್ ಆಗಿಲ್ಲ. ಆದಷ್ಟು ಬೇಗ ಯಾರು ಅನ್ನೋದು ಕೂಡ ಗೊತ್ತಾಗಲಿದೆ.ಫಾರಿನ್ ನಲ್ಲಿ ವೆಬ್‍ ಸಿರೀಸ್

ಈಗಾಗಲೆ ಶಿವರಾಜ್ ಕುಮಾರ್‌ ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆಯಿಂದ ಮಾನಸ ಸರೊವರ ಧಾರವಾಹಿ ಮೂಡಿಬರುತ್ತಿದೆ. ಲೂಸ್ ಕನೆಕ್ಷನ್, ಡಾ ಪಾಲ್ ವೆಬ್ ಸೀರಿಸ್‌ನಿಂದ ಹೆಸರು ಮಾಡಿರೋ ಸಖತ್ ಸ್ಟುಡಿಯೋನ ಮೂರನೇ ವೆಬ್ ಸೀರೀಸ್ ಇದಾಗಿರುತ್ತದೆ. ಇನ್ನು ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ವೆಬ್ ಸೀರೀಸ್ ಇದಾಗಿದ್ದು ೩೦ ನಿಮಿಷದ ೭ ಸಂಚಿಕೆಗಳಿರುತ್ತವೆ. ಮೊದಲ ಬಾರಿಗೆ ವೆಬ್ ಸೀರಿಸ್ ನಿರ್ಮಾಣಕ್ಕೆ ಕೈ ಹಾಕಿರೋ ಶಿವಣ್ಣ, ಫಾರಿನ್‌ನಲ್ಲಿ ಚಿತ್ರೀಕರಣ ಮಾಡೋ ಮೂಲಕ ಮತ್ತೊಂದು ವಿಶೇಷತೆಯನ್ನ ಮೆರೆಯುತ್ತಿದ್ದಾರೆ.ವಿಯೇಟ್ನಂನಲ್ಲಿ ಈ ತಿಂಗಳ ವೆಬ್ ಸೀರಿಸ್ ಚಿತ್ರೀಕರಣವನ್ನ ಮಾಡಲಾಗ್ತಿದೆ. ಇನ್ನು, ಆರ್. ಜೆ ಪ್ರದೀಪ್ ಸಖತ್ ಸ್ಟುಡಿಯೋ ಬ್ಯಾನರ್‌ನಲ್ಲಿ ಮಾಡಿದ್ದ ಲೂಸ್ ಕನೆಕ್ಷನ್ ಸಂಚಿಕೆ ನೋಡಿ ಶಿವಣ್ಣ, ವೆಬ್ ಸೀರಿಸ್ ಮಾಡೋ ಮನಸು ಮಾಡಿದ್ದಾರೆ. ಅದೇ ಲೂಸ್ ಕನೆಕ್ಷನ್ ಟೀಮ್‌ನ ಇಟ್ಟುಕೊಂಡು ಎಸ್.ಆರ್.ಕೆ ಟೀಮ್ ಹೊಸ ಬಗೆಯ ವೆಬ್ ಸೀರಿಸ್‌ನ ನಿರ್ಮಾಣ ಮಾಡ್ತಿದೆ.

Tags

Related Articles