ಸುದ್ದಿಗಳು

‘ಖಂಡಿತವಾಗಿಯೂ ನಾನು ರಾಜಕೀಯಕ್ಕೆ ಬಂದೇ ಬರುತ್ತೇನೆ’ : ನಿಖಿಲ್ ಕುಮಾರ್…!

ಬೆಂಗಳೂರು, ಆ.19: ಮಾಜಿ ಪ್ರಧಾನಿ ದೇವೇಗೌಡ ರವರ ಮೊಮ್ಮಗ ಮತ್ತು ಕರ್ನಾಟಕದ ಪ್ರಸ್ತುತ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ  ರವರ ಮಗ ನಿಖಿಲ್ ಕುಮಾರ್. ‘ಜಾಗ್ವಾರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ. ಮೊದಲ ಸಿನಿಮಾದಲ್ಲಿಯೇ ಭಾರೀ ಪ್ರಶಂಸೆಯ ಜೊತೆಗೆ ಹಲವಾರು ಸಿನಿಮಾ ಅವಕಾಶಗಳನ್ನು ಪಡೆದುಕೊಂಡ ನಟ. ಸದ್ಯ ನಿಖಿಲ್ ‘ಕುರುಕ್ಷೇತ್ರ’ ಮತ್ತು ‘ಸೀತಾರಾಮ ಕಲ್ಯಾಣ’ ಸಿನಿಮಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ನಿಖಿಲ್ ‘ಜಾಗ್ವಾರ್’ ಚಿತ್ರದ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದಲ್ಲದೇ, ಸ್ಯಾಂಡಲ್ ವುಡ್  ಭರವಸೆಯ ನಾಯಕನನ್ನಾಗಿ ಮಾಡಿಕೊಂಡಿದ್ದಾರೆ. ನಿಖಿಲ್ ಕುಟುಂಬದ ಸದಸ್ಯರೆಲ್ಲ ರಾಜಕೀಯದಲ್ಲಿ ತೊಡಗಿದ್ದು, ನಿಖಿಲ್ ಮಾತ್ರ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.ತಂದೆ ಮತ್ತು ತಾತನ ಹಾದಿಯನ್ನು ಅನುಸರಿಸುತ್ತಿರುವ ಮೊಮ್ಮಗ….

ನಿಖಿಲ್ ಗೆ ಚಿತ್ರರಂಗದಲ್ಲಿ ಹೆಚ್ಚಿನ ಆಸಕ್ತಿ ಇದ್ದ ಕಾರಣ ಅವರು ಮೊದಲಿಗೆ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.ಆದರೆ, ಸ್ವಾಭಾವಿಕವಾಗಿ ಮೂಡುವ ಪ್ರಶ‍್ನೆಯೇಂದರೆ, ತಂದೆ ಮತ್ತು ತಾತ ಎಲ್ಲರೂ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದು, ನಿಖಿಲ್ ಕೂಡಾ ರಾಜಕೀಯಕ್ಕೆ ಪಾದಾರ್ಪಣೆ  ಮಾಡುವರಾ? ಇದಕ್ಕೆ ಇಲ್ಲಿದೆ ನೋಡಿ ಉತ್ತರ….

ನಿಖಿಲ್ ಸಂದರ್ಶನದ ಅನಿಸಿಕೆಗಳು

ನಿಖಿಲ್ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ  “ನಾನು ಕೂಡಾ ರಾಜಕೀಯದಲ್ಲಿ ನನ್ನ ಭವಿಷ್ಯವನ್ನು ಕಂಡುಕೊಳ್ಳಬೇಕೆಂದಿದ್ದೇನೆ ಎಂದು ಬಹಿರಂಗವಾಗಿ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. ಸಿನಿಮಾ ನನ್ನ ಆಕರ್ಷಿಸಿತು ಆದ ಕಾರಣ ಸಿನಿಮಾ ಮೊದಲು  ತದನಂತರ ರಾಜಕೀಯವೆಂದು” ಹೇಳುವುದರ ಮೂಲಕ ಸುದ್ದಿಯಾಗಿದ್ದಾರೆ.“ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ನಾನು ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತೇನೆ ಎಂದಿದ್ದಾರೆ. ಅದರ ಸಲುವಾಗಿ ರಾಜಕೀಯ ಬರುವ ಮುನ್ನ ಅದರ ವ್ಯವಸ್ಥೆ ಸೂಕ್ಷತೆಯನ್ನು ಕಲಿಯಬೇಕಾಗಿದೆ. ನಾನು ಇನ್ನೂ ಚಿಕ್ಕವನು , ಆದ ಕಾರಣ ಪ್ರತಿ ದಿನ ಸಂಜೆ ನನ್ನ ತಂದೆಯ ಬಳಿ ಕುಳಿತುಕೊಂಡು ರಾಜಕೀಯದ ಬಗ್ಗೆ ಹೋಮ್ ವರ್ಕ್ ಮಾಡುತ್ತೇನೆ. ಹಾಗೂ ರಾಜ್ಯದ ಬಗ್ಗೆ ಹಾಗು ಹೋಗುಗಳನ್ನು ಅರ್ಥಪೂರ್ಣವಾಗಿ ತಿಳಿದುಕೊಂಡು ಆನಂತರವೇ ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತೇನೆ” ಎಂದು ಹೇಳುವುದರ ಮೂಲಕ ಗಾಂಧಿನಗರದಲ್ಲಿ ಸುದ್ದಿಯಾಗಿದ್ದಾರೆ.

 

Tags