ಸುದ್ದಿಗಳು

‘ಟಕ್ಕರ್’ ಕೊಡಲು ಬಂದ ದಿನಕರ್ ಹಾಗೂ ಸೃಜನ್ ಲೋಕೆಶ್…!

ಬೆಂಗಳೂರು, ಆ.21: ದರ್ಶನ್ ಸೋದರಸಂಬಂಧಿ ಮನೋಜ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಸಿನಿಮಾ  ಟಕ್ಕರ್ . ಈ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ  ನಡೆಯುತ್ತಿದೆ. ನಿರ್ದೇಶಕ ರಘು ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಸಿನಿಮಾ ಇದಾಗಿದೆ. ಈಗಾಗಲೇ ಸಿನಿಮಾದ ಶೂಟಿಂಗ್ ಕೂಡ ಭರದಿಂದ ಸಾಗಿದ್ದು, ಈ ಸಿನಿಮಾದ ನಟ ಸಾಕಷ್ಟು ವರ್ಕೌಟ್ ಮಾಡ್ತಾ ಇದ್ದಾರೆ. ಈ ನಡುವೆ. ಇಂದು ಏಕಾ ಏಕಿ ದಿನಕರ್ ಹಾಗೂ ಸೃಜನ್ ಲೋಕೇಶ್ ಸೆಟ್ ಗೆ ಭೇಟಿ ನೀಡಿದ್ದಾರೆ.ಮನೋಜ್ ಅವರ ಸೋದರ ಮಾವ ದಿನಕರ್, ಮಡದಿ ಮಾನಸಾ ದಿನಕರ್ ಅವರ ಜೊತೆ ಟಕ್ಕರ್ ಚಿತ್ರದ ಸೆಟ್ಟಿಗೆ ಭೇಟಿ ನೀಡಿದ್ದಾರೆ. ಅವರೊಂದಿಗೆ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಕೂಡಾ ಹಾಜರಿದ್ದು ಚಿತ್ರತಂಡಕ್ಕೆ ಆಶ್ಚರ್ಯ ಮೂಡಿಸಿದ್ದಾರೆ.

ಚಿತ್ರತಂಡಕ್ಕೆ ಶುಭಕೋರಿದ ದಿನಕರ್ ಮತ್ತು ಸೃಜನ್

ಹೀಗೆ ಪತ್ನಿ ಸಮೇತರಾಗಿ ಟಕ್ಕರ್ ಸೆಟ್ಟಿಗೆ ಭೇಟಿ ನೀಡಿದ್ದ ದಿನಕರ್ ಚಿತ್ರದ ಬಗ್ಗೆ ಪ್ರತಿಯೊಂದನ್ನೂ ವಿಚಾರಿಸಿಕೊಂಡಿದ್ದಾರೆ. ಅತ್ಯಂತ ವೇಗವಾಗಿ ಚಿತ್ರೀಕರಣ ನಡೆಯುತ್ತಿರೋದರ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಪ್ರತಿಯೊಂದರಲ್ಲಿಯೂ ಚೆಂದದ ಪರ್ಫಾರ್ಮೆನ್ಸ್ ನೀಡುತ್ತಿರೋ ಸೋದರಳಿಯ ಮನೋಜ್ ಅವರನ್ನೂ ಮೆಚ್ಚಿಕೊಂಡು ಪ್ರೋತ್ಸಾಹಿಸಿದ್ದಾರೆ. ಸೃಜನ್ ಲೋಕೇಶ್ ಕೂಡಾ ತಮ್ಮ ಬ್ಯುಸಿ ಕೆಲಸ ಕಾರ್ಯಗಳ ನಡುವೆಯೂ ದಿನಕರ್ ಅವರ ಜೊತೆ ಬಂದು ಟಕ್ಕರ್ ಚಿತ್ರತಂಡಕ್ಕೆ ಹುರುಪು ತುಂಬಿದ್ದಾರೆ.

ನಾಗೇಶ್ ಕೋಗಿಲು ಬಂಡವಾಳ ಹಾಕಿರೋ ಈ ಸಿನಿಮಾದಲ್ಲಿ ರನ್ ಆಂಟನಿ ಸಿನಿಮಾ ನಿರ್ದೇಶನ ಮಾಡಿದ್ದ  ರಘುಶಾಸ್ತ್ರಿ ನಿರ್ದೇಶನ ಮಾಡುದ್ದಾರೆ.  ಪುಟ್ಟಗೌರಿ ಖ್ಯಾತಿಯ ರಂಜಿನಿ ರಾಘವನ್ ಸಿನಿಮಾದಲ್ಲಿ ನಾಯಕ ನಟಿಯಾಗಿದ್ದಾರೆ. ಇನ್ನುಳಿದಂತೆ ಸಿನಿಮಾದಲ್ಲಿ ನಟಿ ಸುಮಿತ್ರಾ, ಸಾಧು ಕೋಕಿಲ, ಭಜರಂಗಿ ಲೋಕಿ ಸೇರಿದಂತೆ ಹಲವು ಮಂದಿಯ ತಾರಾ ಬಳಗವಿದೆ.

Tags

Related Articles