ಸುದ್ದಿಗಳು

‘ಪತಿಬೇಕು.ಕಾಮ್’ ಸಿನಿಮಾ ಟ್ರೇಲರ್ ಲಾಂಚ್ ಮಾಡಿದ ಸುದೀಪ್…!

ನಿರೂಪಕಿಯಾಗಿ ನಂತರ ನಟಿಯಾದ ಶೀತಲ್ ಶೆಟ್ಟಿ

ನಿರೂಪಕಿಯಾಗಿ ತೆರೆ ಮೇಲೆ ಮಿಂಚಿ ನಂತರ ನಟಿಯಾದವರು ಶೀತಲ್ ಶೆಟ್ಟಿ, ತಮ್ಮ ಕನ್ನಡ ಉಚ್ಚಾರದಿಂದ ನಟನೆಯವರೆಗೂ ಜನ ಮನ ಗೆದ್ದ ಇವರು ಪತಿಬೇಕು.ಕಾಮ್ ಸಿನಿಮಾ ಮೂಲಕ ಮತ್ತೆನಾಯಕ ನಟಿಯಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.  ಇದೀಗ ಈ ಸಿನಿಮಾದ ಟ್ರೇಲರ್ ಲಾಂಚ್ ಆಗಿದೆ.

ವಿಭಿನ್ನತೆಯಿಂದ ಕೂಡಿದ ಟ್ರೇಲರ್

ಶೀತಲ್ ಶೆಟ್ಟಿ ಅಭಿನಯದ ಪತಿಬೇಕು ಪತಿಬೇಕು ಅಂತ ಮಾಡೋ ಸರ್ಕಸ್‌ನ ನೋಡಿ ಕಿಚ್ಚ ಸುದೀಪ್ ಶಹ್ಬಾಶ್ ಅಂದ್ರು, ಕಿಚ್ಚನ ಅರಗಿಣಿ ಆಮಿ ಜಾಕ್ಸನ್ ಆಲ್ ದಿ ಬೆಸ್ಟ್ ಅಂದ್ರು. ಪ್ರೇಮ್ಸ್ ಸೂಪರ್ ಸಖತ್ತಾಗಿದೆ ಡಾರ್ಲಿಂಗ್ ಅಂದ್ರು. ಪತಿಬೇಕು.ಕಾಮ್ ಟ್ರೇಲರ್‌ನ ದಿ ವಿಲನ್ ಜೋಡಿ ಹಾಗೂ ಡೈರೆಕ್ಟರ್ ಪ್ರೇಮ್ ಸೇರಿ ರಿಲೀಸ್ ಮಾಡಿದ್ದಾರೆ. ಮೀಸೆ ಹೊತ್ತ ಗಂಡಸಿಗೆ ಡಿಮಾಂಡಪ್ಪೋ ಡಿಮಾಂಡು ಅಂತ ಆ ಕಾಲದಲ್ಲೇ ಕಾಶಿನಾಥ್ ಹೇಳಿದ್ದ ಕಥೆಯನ್ನ, ಈ ಕಾಲಕ್ಕೆ ತಕ್ಕಂತೆ ಬದಲಾಯಿಸಿ ಹೇಳಿದ್ದಾರೆ ಪ್ರೇಮ್ ಶಿಷ್ಯ ರಾಕೇಶ್.

ಡೈಲಾಗ್ ಮೂಲಕ ಗಮನ ಸೆಳೆದ ಶೀತಲ್

ಟೀಸರ್‌ನಿಂದ ಗಮನ ಸೆಳೆಸಿದ್ದ ಪತಿಬೇಕು. ಕಾಮ್ ಸಿನಿಮಾದ ಟ್ರೇಲರ್ ಇದೇ ಕತೆ ಸಿನಿಮಾದಲ್ಲಿದೆ ಅಂತ ಸಿಂಪಲ್ಲಾಗಿ ಹೇಳಿದೆ. ಇಷ್ಟು ದಿನ ಹೀರೋಗಳು, ಅವ್ರ ಜೊತೆಗೆ ಇದ್ದು ಹೀರೋಯಿನ್‌ಗಳು ಡೈಲಾಗ್‌ನಲ್ಲಿ ಪಂಚ್ ಕೊಡ್ತಾ ಇದ್ರು. ಆದ್ರೆ ಈ ಸಿನಿಮಾದಲ್ಲಿ ಡೈರೆಕ್ಟ್ ಆಗಿ ಶೀತಲ್ ಮಾತಿನ ಮಾಂಜಾ ಕೊಟ್ಟಿದ್ದಾರೆ.ಚಿತ್ರತಂಡ

ಟಿಪಿಕಲ್ ಬ್ಯಾಚುಲರ್ ಹೆಣ್ಣುಮಗಳ ಗೆಟಪ್‌ ನಲ್ಲಿ ಶೀತಲ್ ಸಿನಿಮಾ ಪೂರ್ತಿ ಇಂಪ್ರೆಸ್ ಮಾಡ್ತಾರೆ, ಅಂತಾ ಸಿನಿಮಾದ ಈ ಟ್ರೇಲರ್ ನೋಡಿದ್ರೆ ಗೊತ್ತಾಗುತ್ತೆ. ನಿರ್ದೇಶಕ ಕಮ್ ನಿರ್ಮಾಪಕ ರಾಕೇಶ್ ಪ್ರಕಾರ ಇದೊಂದು ಮಹಿಳಾ ಪ್ರಧಾನ ಕಮರ್ಶಿಯಲ್ ಎಂಟರ್‌ಟೈನರ್ ಸಿನಿಮಾ. ಚಿತ್ರದಲ್ಲಿ ಶೀತಲ್ ಶೆಟ್ಟಿ ಜೊತೆಗೆ ಅರುಣ್ ಗೌಡ, ಹರಿಣಿ, ಕೃಷ್ಣ ಅಡಿಗಾ, ಕಿರಿಕ್ ಪಾರ್ಟಿ ಸಲ್ಮಾನ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ.

ಕೌಶಿಕ್ ಹರ್ಷ ಸಿನಿಮಾಕ್ಕೆ  ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ರಾಕೇಶ್ ಜೊತೆಗೆ ಶ್ರೀನಿವಾಸ್ ಹಾಗೂ ಮಂಜುನಾಥ್ ಸಿನಿಮಾಕ್ಕೆ ಹಣ ಹಾಕಿದ್ದಾರೆ. ಕಮಿಂಗ್ ಸೂನ್ ಅಂತಷ್ಟೆ ಟ್ರೇಲರ್ ಬಿಟ್ಟಿರೋ ಸಿನಿಮಾ ಟೀಮ್, ಆಗಸ್ಟ್‌ ನಲ್ಲಿ ತೆರೆಗೆ ತರೋ ಪ್ಲಾನ್‌ ನಲ್ಲಿದ್ದಾರೆ.

Tags