ಸುದ್ದಿಗಳು

“ದಿ ವಿಲನ್ ” ಸಿನಿಮಾಗಾಗಿ ಕಾಯುತ್ತಿರೋ ದುಬೈ ಜನ

"ಕನ್ನಡಕ್ಕಾಗಿ ಒಂದು ದಿನ" ಅಡಿಬರಹದಲ್ಲಿ ಈಗಾಗಲೇ ಒಂದು ಅಭಿಯಾನ ಇಲ್ಲಿ ಶುರು

ಬೆಂಗಳೂರು, ಆ.24: ದುಬೈನಲ್ಲಿ “ದಿ ವಿಲನ್” ಧ್ವನಿ ಸುರಳಿ ಬಿಡುಗಡೆ ಆಗುತ್ತೆ ಅನ್ನೋದು ಈಗಾಗಲೇ ಗೊತ್ತಿರುವ ವಿಚಾರ. ಇದೀಗ ಇಂದು “ದಿ ವಿಲನ್” ತಂಡ ದುಬೈನಲ್ಲೊಂದು ಸುದ್ದಿಗೋಷ್ಟಿ ನಡೆಸಿದೆ. ಇಡೀ ದುಬೈ ಜನ “ದಿ ವಿಲನ್ ” ಸಿನಿಮಾಗಾಗಿ ಕಾಯುತ್ತಿರೋದನ್ನ ಈಗಾಗಲೇ ಪ್ರೇಮ್ ಹೇಳಿದ್ದಾರೆ. ದುಬೈನ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ಈ ಸುದ್ದಿಗೋಷ್ಟಿ ನಡೆದಿದ್ದು, ಸುದ್ದಿಗೋಷ್ಟಿಯಲ್ಲಿ ನಟ ಶಿವರಾಜ್ ಕುಮಾರ್, ನಿರ್ದೇಶಕ ಪ್ರೇಮ್, ಸಿ.ಆರ್.ಮನೋಹರ್ ಸೇರಿದಂತೆ ಹಲವು ಮಂದಿ ಭಾಗಿಯಾಗಿದ್ದಾರೆ.

ಕನ್ನಡಕ್ಕಾಗಿ ಒಂದು ದಿನ..

ಇನ್ನು ಇಲ್ಲಿ “ದಿ ವಿಲನ್” ಸಿನಿಮಾ ಬಗ್ಗೆ ಮಾತನಾಡಲಾಗಿದೆ. ಅಲ್ಲದೆ, ದುಬೈನಲ್ಲಿರುವ ಕನ್ನಡಿಗರು ಸಿನಿಮಾಗಾಗಿ ಕಾಯುತ್ತಿದ್ದಾರಂತೆ. “ಕನ್ನಡಕ್ಕಾಗಿ ಒಂದು ದಿನ ” , ಅನ್ನೋ ಅಡಿಬರಹದಲ್ಲಿ ಈಗಾಗಲೇ ಒಂದು ಅಭಿಯಾನ ಕೂಡ ಇಲ್ಲಿ ಪ್ರಾರಂಭವಾಗಿದೆ. ಇದನ್ನೆಲ್ಲಾ ನೋಡಿದರೆ ಗೊತ್ತಾಗುತ್ತದೆ “ದಿ ವಿಲನ್” ಹವಾ  ವಿಶ‍್ವದ ಮೂಲೆ ಮೂಲೆಯಲ್ಲಿ ಹೇಗಿದೆ ಅಂತಾ. ಸದ್ಯ ಈ ಅಭಿಮಾನವನ್ನ ಪ್ರೇಮ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅಲ್ಲಿನ ಜನಕ್ಕೆ ಧನ್ಯವಾದ ಹೇಳಿದ್ದಾರೆ. ಜೊತೆಗೆ ಅವರ ಪ್ರೀತಿ ಎಷ್ಟಿದೆ ಅನ್ನೋದನ್ನೂ ಕೂಡ ಹೇಳಿದ್ದಾರೆ. ಸದ್ಯ ಕನ್ನಡ ಸಿನಿಮಾ ಒಂದು  ದುಬೈನಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿಯೇ ಸರಿ.

Tags