ಸುದ್ದಿಗಳು

ದುಬೈನಲ್ಲಿ ‘ದಿ ವಿಲನ್’ ಆಡಿಯೋ ಲಾಂಚ್ ಮಾಡಲಿರುವ ‘ರೆಬೆಲ್ ಸ್ಟಾರ್’

ಬೆಂಗಳೂರು, ಆ.18: ಕಿಚ್ಚ ಸುದೀಪ್ ಮತ್ತು ಶಿವಣ್ಣ ಒಟ್ಟಿಗೆ ಅಭಿನಯಿಸುತ್ತಿರೋ ಸಿನಿಮಾ ‘ದಿ ವಿಲನ್’.  ಇಷ್ಟುದಿನ ಬೆಂಗಳೂರಲ್ಲೇ ಆಡಿಯೋ ಲಾಂಚ್ ಮಾಡಲು ಸಿದ್ದತೆ ನಡೆಸಿದ್ದ ಚಿತ್ರತಂಡ ಇದೀಗ ದುಬೈನಲ್ಲೂ ಲಾಂಚ್ ಮಾಡ್ತಾ ಇದೆ.

‘ಆಡಿಯೋ ಲಾಂಚ್ ವಿಚಾರವಾಗಿ ಸಾಕಷ್ಟು ಊಹಾ ಪೋಹಗಳು ಹರಿದಾಡಿದ್ದವು. ಆದ್ರೀಗ ಇವೆಲ್ಲದಕ್ಕೆ ಪ್ರೇಮ್ ಅಧೀಕೃತ ಸ್ಪಷ್ಟನೆ ನೀಡಿದ್ದಾರೆ. ಡಾ.ಶಿವರಾಜ್‌ಕುಮಾರ್, ಕಿಚ್ಚ ಸುದೀಪ ಅಭಿನಯದ ಬಿಗ್ ಸಿನಿಮಾ ‘ದಿ ವಿಲನ್’ ಆಡಿಯೋ ಲಾಂಚ್ ಬೆಂಗಳೂರಿನಲ್ಲಿ ಇದೇ ಭಾನುವಾರ ನೆರವೇರಲಿದೆ. ಇದಾದ ಬಳಿಕ ಮುಂದಿನ ವಾರ ದುಬೈನಲ್ಲಿ ಅದ್ದೂರಿಯಾಗಿ ಮತ್ತೊಮ್ಮೆ ವಿಲನ್ ಆಡಿಯೋ ಲಾಂಚ್ ಆಗಲಿದೆ. ರೆಬೆಲ್ ಸ್ಟಾರ್ ಅಂಬರೀಷ್ ದುಬೈ ಆಡಿಯೋ ಲಾಂಚ್‌ ನ ಮುಖ್ಯ ಅತಿಥಿಯಾಗಿರಲಿದ್ದಾರೆ. ಆಗಸ್ಟ್ ೨೪ರಂದು ದುಬೈನಲ್ಲಿ ಸೂಪರ್ ಸ್ಟಾರ್‌ ರಜಿನಿಕಾಂತ್ ಅಭಿನಯದ ‘೨ ಪಾಯಿಂಟ್ ಓ’ ಸಿನಿಮಾದ ಆಡಿಯೋ ಲಾಂಚ್ ಆದ ಸ್ಥಳದಲ್ಲೇ ‘ದಿ ವಿಲನ್’ ಸಿನಿಮಾದ ಆಡಿಯೋ ಲಾಂಚ್ ಆಗಲಿದೆ. ಈ ಮೆಗಾ ಈವೆಂಟ್‌ ನಲ್ಲಿ ಶಿವಣ್ಣ, ಸುದೀಪ್ ಹಾಗೂ ಆಮಿ ಜಾಕ್ಸನ್ ಕೂಡ ಇರಲಿದ್ದಾರೆ. ಆಡಿಯೋ ಲಾಂಚ್ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡುವ ಸಾಧ್ಯತೆ ಇದೆ ಎನ್ನುತ್ತಿವೆ ಸಿನಿಮೂಲಗಳು.

Tags

Related Articles