ಸುದ್ದಿಗಳು

ಕಣ್ಣೀರು ಹಾಕುತ್ತಿದೆ ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಜೀವ ‘ಶನಿ ಮಾಹದೇವಪ್ಪ’…..!

ಕನ್ನಡ ಪ್ರೇಮಿ‌‌ ಶನಿ ಮಾಹಾದೇವಪ್ಪನ‌ ಸ್ಥಿತಿ ಈಗ ಹೇಳತ್ತಿರದ್ದು ಆಗಿದೆ…ಕಲಾವಿದನ‌ ಬೆಲೆ ಮುಖದ ಮೇಲಿನ‌ಬಣ್ಣ ಚೆನ್ನಾಗಿರುವವರೆಗೂ  ಮಾತ್ರ ಎನ್ನುವುದಕ್ಕೆ ಇವರೆ ಸಾಕ್ಷಿಯಾಗಿದ್ದಾರೆ…ಬಣ್ಣದ ಮಾಸಿದ ಬಳಿಕ ಯಾವುದೇ ಕಲಾವಿದರು ಕಲಾವಿದನಾಗಿ ಉಳಿಯುವುದಿಲ್ಲಾ ಸಾಮಾನ್ಯ ಮನುಷ್ಯರಂತೆ ಆಗಿಬಿಡುತ್ತಾನೆ…ಆದೇ ರೀತಿ ಸ್ಟಾರ್ ಗಿರಿ ಇರುವಾಗ  ತಾನು,ತನ್ನ ಮನೆ ಅಂತ ಎಲ್ಲವನ್ನು ಜೋಪಾನ ಮಾಡಿಕೊಂಡವರು ಕೆಲವು ಸಿನಿಮಾ ಕಲೆ ಅಭಿಮಾನ ಮುಂದಕ್ಕೆ ಜೀವನ ನಡೆಯುತ್ತದೆ ಎಂದು ಯೋಚಿಸಿದವರು ಅನೇಕರು….

ಕನ್ನಡ ಚಿತ್ರರಂಗದ‌ ಕೆಲ ಹಿರಿಯಾ ಜೀವಗಳು ಒಂದೊಂದೆ ಮರೆಯಾಗಿ ಹೋಗುತ್ತಿವಿ ..ದಿಕ್ಕು ದೆಸೆ ಇಲ್ಲದೆ ಕೊನೆಯ ಕಾಲದಲ್ಲಿ ಯಾರ ಆಸರೆಯು ಇಲ್ಲದೆ ಅನಾಥರಾಗಿ ಹೋಗುತ್ತಿದ್ದಾರೆ….ಕನ್ನಡ ತಮಿಳು,ತೆಲುಗು,ಮಲಯಾಳಂ ಸೇರಿದಂತೆ ಸುಮಾರು ೫೫೦ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದ‌ ಶನಿ ಮಹಾದೇವಪ್ಪರವರ ಸ್ಥಿತಿ ಈಗ ಹೇಳತಿರದ್ದು ಆಗಿದೆ…ಜಯಲಲಿತಾ ಕರೆದಾಗ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಇವರು ಅಲ್ಲಿ ಸಾಕಷ್ಟು  ಚಿತ್ರಗಳಲ್ಲಿ ಪೋಷಕ ನಟನಾಗಿ ದೊಡ್ಡ ಹೆಸರು ಮಾಡಿ ಸಾಕಷ್ಟು ಹಣ ಸಂಪಾದಿಸಿ ವೃದ್ಧಾಪ್ಯದ ದಿನಗಳಲ್ಲಿ ಸುಖವಾಗಿ ಬದುಕು ನಡೆಸಬಹುದಿತ್ತು….ಆದರೆ ಕನ್ನಡ ಚಿತ್ರರಂಗದ ಮೇಲಿನ‌ ಅಪಾರ ವ್ಯಾಮೋಹದಿಂದಾಗಿ ಬೆಂಗಳೂರಿನಲ್ಲೆ ಉಳಿದ ಕಾರಣ ಈಗ ತೀರಾ ದುರ್ಭರ ಬದುಕು ನಡೆಸುವಂತ ದುರಸ್ಥಿತಿ ಈಗಾ ಮಹಾದೇವಪ್ಪನವರಿಗೆ ಎದುರಾಗಿದೆ.Image result for shanimahadevappa

ಕನ್ನಡ ನಾಡಲ್ಲಿ ತೀಳಿ ಗಂಜಿ ಕುಡಿದು ಬದುಕುತ್ತೇನೆ‌ ವರತು ತಮಿಳುನಾಡಿನ ಭೂರಿ ಭೋಜನ ಬೇಡ ಎಂದಿದ್ದರಂತೆ ಇತಾ…ಕನ್ನಡಕ್ಕೆ ಹೆಚ್ಚಿನ ಆದ್ಯತೆ  ಕೊಟ್ಟಿದ್ದ ಮಹಾದೇವಪ್ಪನವರ ಮನಸ್ಸು ಅಪ್ಪಟ ಕನ್ನಡದ ಮನಸ್ಸು ಆಗಿತ್ತು..‌ ಆದರೆ ಈಗ ಮಹಾದೇವಪ್ಪನವರಿಗೆ ಕಣ್ಣು ಕಾಣಿಸುವುದಿಲ್ಲಾ,ಕಿವಿ ಕೇಳಿಸುವುದಿಲ್ಲಾ,ನಡೆದಾಡಲೂ ಕೂಡ ಸಾಧ್ಯವಾಗದ ಪರಿಸ್ಥೀತಿಯಲ್ಲಿದ್ದಾರೆ…ಹೊಟ್ಟೆ ತುಂಬಾ ಊಟ ಮಾಡಲು ಆರ್ಥಿಕ ನೆರವು ಇಲ್ಲಾ…೯೦ರ ಹರೆಯದ ಶನಿ‌ಮಹಾದೇವಪ್ಪನವರು  ಆಗಲೋ ಇಗಲೊ ಅನ್ನುತ್ತಿರುವ ಜೀವವನ್ನು ತುದಿ ಕೈಯಲ್ಲಿ ಹಿಡಿದು ಕೊಂಡು ಬದುಕುತ್ತಿದ್ದಾರೆ…ಇಷ್ಟಕ್ಕೂ ಇತ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಳಕವಾಡಿಯದವರು…

ಕಳೆದ ಐದು ದಶಕದಿಂದ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ದುಡಿಯುತ್ತಿದ್ದರು.. ಇವರು ರಾಜಾವಿಕ್ರಮ ನಾಟಕದಲ್ಲಿ ಸತತವಾಗಿ ಶನಿದೇವರ ಪತ್ರ ನಿರ್ವಹಿಸಿದ್ದರಿಂದ ಇವರಿಗೆ ಶನಿ ಮಾಹಾದೇವಪ್ಪ ಎಂಬ ಹೆಸರು  ಪರ್ಮನೆಂಟಾಯಿತಂತೆ.‌‌ದುರಾದೃಷ್ಟ ವಕ್ಕರಿಸಿಕೊಂಡಾಗ ಮತ್ತೆ ಹೆಸರನ್ನು ಶಿವಪ್ರಕಾಶ್ ಎಂದು ಬದಲಿಸಿಕೊಂಡಿದ್ದರು…ಇವರು ಕನ್ನಡದಲ್ಲಿ ಅದೇ ಕಣ್ಣು,ಕವಿರತ್ನ‌ಕಾಳಿದಾಸ,ದೇವತಾ ಮನುಷ್ಯ, ಭಕ್ತ ಕುಂಬಾರ ಹೀಗೆ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದರು ಆದ್ರೆ ಈಗ ದುರಾದೃಷ್ಟವಶಾತ್ ಇತನಿಗೆ ಸರಿಯಾಗಿ ತಿನ್ನಲು ದುಡ್ಡು ಸಹ ಇಲ್ಲದೆ ಪರದಾಡುವಂತಹ‌ ಪರಿಸ್ಥಿತಿಯನ್ನು ಎದುರುಮಾಡಿಕೊಂಡಿರೊದು ವಿಪಾರ್ಯಾಸ….

@ಸುಪ್ರಿಯಾಶರ್ಮಾ…

Tags