ಸುದ್ದಿಗಳು

ಮೇ ೨೫ ಕ್ಕೆ ರಾಜ್ಯಾದ್ಯಂತ ತೆರೆಕಾಣಲಿರೋ ಪರಿಧಿ ಚಿತ್ರ !

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೊಸಬರ ವಿಭಿನ್ನ ಕಾನ್ಸೆಫ್ಟ್‌ ಗಳು ಪ್ರೂವ್ ಆಗ್ತಿವೆ.. ನಾವು ನೀವು ಗಣಿತ ಕಲಿಯುವಾಗ ಪರಿಧಿ ಅಂತಾ ಓದಿರುತ್ತೇವೆ.. ಆದ್ರೆ ಆ ಪರಿಧಿಗೂ ಈ ಪರಿಧಿಗೂ ಯಾವುದೇ ಸಂಬಂಧವಿಲ್ಲ ಬದಲಾಗಿ ಒಂದು ಬೇರೆ ಒಂದು ಸಂದೇಶವನ್ನ ಹೇಳಲು ಹೊರಟಿದೆ ಈ ಚಿತ್ರತಂಡ.. ಹಾಗಿದ್ರೆ  ಏನೇಲ್ಲಾ ಸ್ಪೆಷಲ್ ಎಲಿಮೆಂಟ್ ಇದೆ ಅಂತೀರಾ..? ಈ ಸ್ಟೋರಿ ನೋಡಿ..

ಪರಿಧಿ.. ಈಗಾಗ್ಲೇ ಚಿತ್ರದ ಶೂಟಿಂಗ್ ಮುಗಿಸಿರೋ ಚಿತ್ರತಂಡ ಇದೇ ಮೇ ೨೫ ನೇ ತಾರೀಖಿನಂದು ರಾಜ್ಯಾದ್ಯಂತ ತೆರೆಕಾಣಲು ರೆಡಿಯಾಗಿದೆ.. ಇನ್ನು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ಧಾರೆ ಎಸ್.ಬಿ .ಶ್ರೀನಿವಾಸ್..

ಇನ್ನು ಈ ಚಿತ್ರದಲ್ಲಿ ನಾಯಕನಾಗಿ ರಾಜ್‌ ಕಿರಣ್ ಕಾಣಿಸಿಕೊಂಡ್ರೆ, ರಾಜ್‌ಕಿರಣ್‌ಗೆ ನಾಯಕಿಯಾಗಿ ನಿಶಾ ಸ್ಕ್ರೀನ್‌ ಶೇರ್ ಮಾಡಿದ್ದಾರೆ.. ಈ ಮೊದ್ಲು ರಾಜ್‌ ಕಿರಣ್ ಮಿಸ್ಡ್‌ ಕಾಲ್ ಸಿನಿಮಾದಲ್ಲಿ ನಟಿಸಿದ್ರು, ಇದು ಅವ್ರಿಗೆ ಎರಡನೇ ಸಿನಿಮಾ.. ಅಲ್ದೇ ನಿಶಾ ಕೂಡಾ ಈ ಪರಿಧಿ ಸಿನಿಮಾ ೨ನೇ ಸಿನಿಮಾವಾಗಿದೆ.

ಅಂದ ಹಾಗೆ ಈ ಪರಿಧಿ ಸಿನಿಮಾ ಒಂದು ಸೈಲೆಂಟ್ ಥ್ರಿಲ್ಲರ್, ಸಸ್ಪೆನ್ಸ್ ಸಿನಿಮಾವಾಗಿದ್ದು, ಚಿತ್ರದ ನಾಯಕ ಇಲ್ಲಿ ಕೋರಿಯರ್ ಬಾಯ್ ಆಗಿ ಕಾಣಿಸಿಕೊಂಡಿದ್ಧಾರೆ.. ಒಬ್ಬ ಕೋರಿಯರ್ ಬಾಯ್ ದುರಾಸೆಯಿಂದ ದುಡ್ಡಿನ ಹಿಂದೆ ಬಿದ್ದು ಅತೀ ಬೇಗ ಶ್ರೀಮಂತನಾಗುವ ಕನಸನ್ನ ಕಾಣ್ತಾನೆ.. ಆಗ ಈ ಪರಿಧಿಯಲ್ಲಿ ಸಿಕ್ಕಾಕಿಕೊಂಡು ಯಾವ ರೀತಿಯಾದ ಸಮಸ್ಯೆಯನ್ನ ಅನುಭವಿಸುತ್ತಾನೆ ಅನ್ನೋದರ ಕುರಿತಾದ ಸಿನಿಮಾನೇ ಪರಿಧಿ.. ಇನ್ನೊಂದು ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ಯಾವುದೇ ಡೈಲಾಗ್‌ ಗಳು ಇರದೇ ಕಂಪ್ಲೀಟ್ ಆಗಿ ಸಾಗುತ್ತಂತೆ..

ಇನ್ನು ಈ ಚಿತ್ರಕ್ಕೆ ನಂದಕುಮಾರ್ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.. ನಂದಕುಮಾರ್ ಮೂಲತಃ ತಮಿಳು ನಾಡಿನವರಾಗಿದ್ದು, ಹೊಸ ಪ್ರತಿಭೆಗಳಿಗೆ ಸಪೋರ್ಟ್ ಮಾಡಿದ್ದಾರೆ.. ಇನ್ನು ಈ ಚಿತ್ರಕ್ಕೆ ಸೂರಜ್ ಮಹಾರಾಜ್ ಸಂಗೀತ ನಿರ್ದೇಶನ ಮಾಡಿದ್ಧಾರೆ.. ಈ ಚಿತ್ರದಲ್ಲಿ ಸಾಂಗ್ ಇಲ್ಲದಿದ್ದರು ಕೂಡಾ ಈ ಚಿತ್ರದ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳಿಂದ ಅಟ್ರಾಕ್ಟ್ ಮಾಡ್ತಿದೆ..

ಈಗಾಗ್ಲೇ ಚಿತ್ರದ ಟ್ರೇಲರ್ ಮೂಲಕ ಸೌಂಡ್ ಮಾಡ್ತಿರೋ ಈ ಸಿನಿಮಾ ಇದೇ ಮೇ ೨೫ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲು ಪ್ಲಾನ್ ಮಾಡಿಕೊಂಡಿದೆ.. ಇನ್ನು ಈ ಚಿತ್ರದಲ್ಲಿ ದಿವ್ಯಾ, ಚಂದ್ರಶೇಖರ್, ಭದ್ರಾವತಿ ಶ್ರೀನಿವಾಸ್, ಮಂಜುಳಾ, ಅಮರನಾಥ್ ಆರಾಧ್ಯ ಸೇರಿದಂತೆ ಅತೀದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ.. ಇನ್ನು ಈ ಸೈಲೆಂಟ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ಇನ್ನು ಏನೇಲ್ಲಾ ಸ್ಪೆಷಲ್ ಎಲಿಮೆಂಟ್ ಇರ್ತಾವೆ ಅಂತಾ ಕಾದು ನೋಡ್ಬೇಕು..

Tags

Related Articles

Leave a Reply

Your email address will not be published. Required fields are marked *