ಸುದ್ದಿಗಳು

ರಾಜಕೀಯದ ಬಗ್ಗೆ ಕಿಡಿ ಕಾರಿದ ಹುಚ್ಚ ವೆಂಕಟ್ !

ಸದ್ಯ ರಾಜಕೀಯದಲ್ಲಿ ಬಾರಿ ಬೆಳವಣಿಗೆಗಳಾಗುತ್ತಿವೆ. ಬಿಜೆಪಿ ಬಹುಮತ ಬಂದರೂ ಕೂಡ ಸರ್ಕಾರ ರಚನೆ ಮಾಡಲು ಆಗದೇ ಒದ್ದಾಡುತ್ತಿದೆ. ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳೋದಾಗಿ ಹೇಳಿಕೊಂಡಿದೆ. ಇನ್ನು ಇದೆಲ್ಲದರ ವಿರುದ್ಧವಾಗಿ ಇದೀಗ ಹುಚ್ಚ ವೆಂಕಟ್ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಸದಾ ಒಂದಿಲ್ಲೊಂದು ವಿಚಾರವಾಗಿ ಸುದ್ದಿಯಲ್ಲಿದ್ದಾರೆ ನಟ ವೆಂಕಟ್. ಇತ್ತೀಚಿಗೆ ಐಶ್ವರ್ಯ ಮದುವೆಯಾಗಿರೋದಾಗಿ ಫೇಸ್ ಬುಕ್ ಲೈವ್ ಬಂದು ಹೇಳೊ ಮೂಲಕ ವೆಂಕಟ್ ಸುದ್ದಿಯಲ್ಲಿದ್ದರು. ಇದೀಗ ಇಂದು ಮತ್ತೆ ಸುದ್ದಿಗೋಷ್ಟಿ ಮಾಡೋ ಮೂಲಕ ಸುದ್ದಿಗೆ ಬಂದಿದ್ದಾರೆ.

ಹೌದು, ಸದ್ಯ ರಾಜ ರಾಜೇಶ್ವರಿಯಲ್ಲಿ ನಿಂತಿರೋ ನಟ ವೆಂಕಟ್, ಚುನಾವಣೆಯಲ್ಲಿ ಬ್ಯುಸಿ ಇದ್ದಾರೆ. ಕೆಲವು ಕಾರಣಗಳಿಂದ ಮುಂದೂಡಿದ್ದ ಆರ್ ಆರ್ ನಗರ ಚುನಾವಣೆಗೆ ಇದೇ ೨೮ ರಂದು ನಡೆಯಲಿದೆ. ಈಗಾಗ್ಲೆ ಎಲ್ಲಾ ಅಭ್ಯರ್ಥಿಗಳಂತೆ ವೆಂಕಟ್ ಕೂಡ ತಮ್ಮ ಚಿಹ್ನೆಯೊಂದಿಗೆ ಚುನಾವಣಾ ಅಕಾಡಕ್ಕಿಳಿಯುತ್ತಿದ್ದಾರೆ.

ಇದೀಗ ರಾಜ್ಯದಲ್ಲಿ ಅತಂತ್ರ ಸರ್ಕಾರ ಇರೋದ್ರಿಂದ ಮೈತ್ರಿ ಮಾಡೋದಾಗಿ ಪಕ್ಷಗಳು ತಮ್ಮ ಒಪಿನಿಯನ್ ತಿಳಿಸಿದ್ದಾರೆ. ಆದ್ರೆ ಈ ಬಗ್ಗೆ ಸಿಟ್ಟಿಗೆದ್ದಿರೋ ವೆಂಕಟ್ ರಾಜಕೀಯ ಮುಖಂಡರ ಮೇಲೆ ಹರಿಹಾಯ್ದಿದ್ದಾರೆ. ಪಕ್ಷ ನೋಡಿ ಎಂಲ್ ಎ ಗಳನ್ನ ಗೆಲ್ಲಿಸಿದ್ದಾರೆ. ಆದ್ರೆ ಇದೀಗ ಪಕ್ಷ ಬದಲಾವಣೆ ಮಾಡೋದು ಎಷ್ಟು ಸರಿ ಅನ್ನೋದು ವೆಂಕಟ್ ವಾದ. ರೆಸಾರ್ಟ್ ರಾಜಕೀಯ ಮಾಡೋದು ಎಷ್ಟು ಸರಿ ಅಂತಾರೆ ವೆಂಕಟ್.

ಪಕ್ಷೇತರ ಅಭ್ಯರ್ಥಿಗಳನ್ನ ತಮ್ಮತ್ತ ಸೆಳೆಯುತ್ತಿರೋ ಪಕ್ಷಗಳ ಬಗ್ಗೆಯೂ ವೆಂಕಟ್ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ರೆಸಾರ್ಟ್ ರಾಜಕಾರಣ ಏಕೆ ಬೇಕು ಅದರಿಂದ ದೂರವಿರೋಣ ಎಂದಿದ್ದಾರೆ.

ಒಟ್ನಲ್ಲಿ ವೆಂಕಟ್ ಅವರ ಮಾತುಗಳನ್ನ ನೋಡ್ತಾ ಇದ್ರೆ ಪಕ್ಷೇತರವಾಗಿ ಗೆದ್ದರೆ ವೆಂಕಟ್ ಯಾವ ಪಕ್ಷಕ್ಕೂ ಹೋಗೋದಿಲ್ಲ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.

 

Tags

Related Articles

Leave a Reply

Your email address will not be published. Required fields are marked *